Advertisement

War; ಇಸ್ರೇಲ್‌ಗೆ ಇರಾನ್‌ನಿಂದ ಅಣುಬಾಂಬ್‌ ಬೆದರಿಕೆ!

12:06 AM May 13, 2024 | Team Udayavani |

ಟೆಹ್ರಾನ್‌: ನಾವು ಅಣುಬಾಂಬ್‌ ತಯಾರಿಸುವ ಯಾವುದೇ ಉದ್ದೇಶ ಹೊಂದಿಲ್ಲ. ಆದರೆ ಇಸ್ರೇಲ್‌ನಿಂದ ನಮ್ಮ ದೇಶದ ಅಸ್ತಿತ್ವಕ್ಕೆ ಧಕ್ಕೆ ಬಂದರೆ ನಾವು, ಈ ನಿಟ್ಟಿನಲ್ಲಿ ಯೋಚಿಸಬೇಕಾಗುತ್ತದೆ ಎಂದು ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಅವರ ಸಲ ಹೆಗಾರ ಕಮಲ್‌ ಕರ್ರಾಜಿ ಹೇಳಿದ್ದಾರೆ. ಹೀಗಾಗಿ ಮತ್ತೆ ಮಧ್ಯಪ್ರಾಚ್ಯದಲ್ಲಿ ಯುದ್ಧಾತಂಕ ಹೆಚ್ಚಲಿದೆ ಎನ್ನಲಾಗಿದೆ.

Advertisement

ಈ ಮೂಲಕ ಅವರು ಇಸ್ರೇಲ್‌ಗೆ ಅಣುಬಾಂಬ್‌ ಬೆದರಿಕೆ ಒಡ್ಡಿದ್ದಾರೆ. ಡಮಾಸ್ಕಸ್‌ನಲ್ಲಿ ಇರಾನ್‌ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಲಾಯಿತು. ಇದು ನಮ್ಮ ಅಸ್ತಿತ್ವಕ್ಕೆ ಒಡ್ಡಲಾಗುತ್ತಿರುವ ಸವಾಲಾಗಿದೆ. ಹೀಗಾಗಿ ಅಣುಬಾಂಬ್‌ ತಯಾರಿಕೆಗೆ ನಿರ್ಬಂಧವಿದ್ದರೂ ನಾವು ಅದರತ್ತ ಚಿಂತಿಸಬೇಕಾಗುತ್ತದೆ ಎಂದು ಕರ್ರಾಜಿ ಹೇಳಿದ್ದಾರೆ.

ಗಾಜಾದ ಮೇಲೆ ದಾಳಿ ಹೆಚ್ಚಿಸಿದ ಇಸ್ರೇಲ್‌!
ಗಾಜಾ ಪಟ್ಟಿಯ ಮೇಲೆ ದಾಳಿ ಮುಂದುವರಿಸಿರುವ ಇಸ್ರೇಲ್‌ ರವಿವಾರ ರಾಫಾ ನಗರದೊಳಗೆ ನುಗ್ಗಿದೆ. ಈ ದಾಳಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ನಾಗರಿಕ ರಿಗೆ ಇರುವ ಕೊನೆಯ ಆಶ್ರಯ ತಾಣ ಈ ನಗರವಾಗಿದೆ ಎಂದು ಹೇಳಿದ್ದಾರೆ. ಆದರೆ ಇದು ಹಮಾಸ್‌ ಉಗ್ರರ ಭದ್ರಕೋಟೆ ಯಾಗಿದೆ ಎಂದು ಇಸ್ರೇಲ್‌ ಹೇಳಿದೆ. ಯುದ್ಧ ಆರಂಭವಾದಾಗಿ ನಿಂದ ಸುಮಾರು 3 ಲಕ್ಷ ಜನ ಸ್ಥಳಾಂತರವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next