Advertisement

Masoud Pezeshkian: ಇರಾನ್‌ನಲ್ಲಿ ಸುಧಾರಣ ಆಡಳಿತದ ಜಮಾನ ಶುರು

11:21 PM Jul 06, 2024 | Team Udayavani |

ದುಬಾೖ: ಇರಾನ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಧಾರಣಾವಾದಿ ನಾಯಕ ಮಸೂದ್‌ ಪೆಜೆಶ್ಕಿಯಾನ್‌ ಗೆಲುವು ಸಾಧಿಸಿದ್ದಾರೆ.

Advertisement

ಇರಾನ್‌ ಕಾಡುತ್ತಿರುವ ಹಲವಾರು ವರ್ಷಗಳ ನಿರ್ಬಂಧ ಮತ್ತು ಪ್ರತಿಭಟನೆಗಳನ್ನು ತಡೆಯುವ ಮತ್ತು ದೇಶದ ಕಡ್ಡಾಯ ಹಿಜಾಬ್‌ ಕಾನೂನನ್ನು ಜಾರಿಯನ್ನು ಸರಾಗಗೊಳಿಸುವ ಭರವಸೆ ನೀಡುವ ಮೂಲಕ ಕಟ್ಟರ್‌ವಾದಿ ನಾಯಕ ಸಯೀದ್‌ ಜಲಿಲಿ ಅವರನ್ನು ಸೋಲಿಸಿದ್ದಾರೆ. ಶಿಯಾ ಪುರೋಹಿತಶಾಹಿ ಆಡಳಿತಕ್ಕೆ ಸಿಕ್ಕಾಪಟ್ಟೆ ಬದಲಾವಣೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು.
ಪೆಜೆಶ್ಕಿಯಾನ್‌ ಅವರು 1.63 ಕೋಟಿ ಮತಗಳನ್ನು ಪಡೆದು ಗೆಲುವು ಕಂಡರೆ, ಅವರ ಸಮೀಪದ ಪ್ರತಿಸ್ಪರ್ಧಿ ಜಲಿಲಿ ಅವರು 1.35 ಕೋಟಿ ಮತಗಳನ್ನು ಪಡೆದುಕೊಂಡು ಸೋಲೊಪ್ಪಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಚುನಾವಣೆಯಲ್ಲಿ ಒಟ್ಟು 3 ಕೋಟಿ ಜನರು ಮತ ಚಲಾಯಿಸಿದ್ದರೆಂದು ಹೇಳಿದ್ದರು.

ಪ್ರಧಾನಿ ಮೋದಿ ಅಭಿನಂದನೆ: ಇರಾನ್‌ನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಮಸೂದ್‌ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಹೊಸ ಆಡಳಿತದ ಅವಧಿಯಲ್ಲಿ ಇರಾನ್‌ ಜತೆ ಬಾಂಧವ್ಯ ಬಲಗೊಳಿಸಲು ಉತ್ಸುಕರಾಗಿ ರುವ ಬಗ್ಗೆ ಪ್ರಧಾನಿ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next