Advertisement
ತಾಲಿಬಾನ್ ವಕ್ತಾರ ಮೊಹಮ್ಮದ್ ನಯೀಮ್ ಅವರು ಅಲ್ ಜಜೀರಾ ಟಿವಿಗೆ ನೀಡಿದ ಸಂದರ್ಶನದಲ್ಲಿ ತಾಲಿಬಾನ್ ಪ್ರತ್ಯೇಕವಾಗಿ ಬದುಕಲು ಬಯಸುವುದಿಲ್ಲ ಮತ್ತು ನಿಯಮಾವಳಿಗಳು ಮತ್ತು ಆಡಳಿತದ ರೂಪ ಶೀಘ್ರದಲ್ಲೇ ಸ್ಪಷ್ಟವಾಗುತ್ತದೆ ಎಂದು ಹೇಳಿದರು.
Related Articles
Advertisement
ರವಿವಾರ ತಾಲಿಬಾನ್ ಉಗ್ರರು ಕಾಬೂಲ್ ಪ್ರವೇಶಿಸಿದ್ದಾರೆ. ಈ ಮೂಲಕ ಇಡೀ ದೇಶವೇ ಉಗ್ರರ ಪಾಲಾಗಿದ್ದು, 20 ವರ್ಷಗಳ ಬಳಿಕ ಮತ್ತೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಶಕೆ ಆರಂಭವಾಗಿದೆ. ತಾಲಿಬಾನ್ ಕಾಬೂಲ್ ಪ್ರವೇಶಿಸುತ್ತಿದ್ದಂತೆ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ ವಕ್ತಾರ ನಯೀಮ್, “ಘನಿ ತಪ್ಪಿಸಿಕೊಳ್ಳುವುದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಆತನ ಆಪ್ತರು ಕೂಡ ಅದನ್ನು ನಿರೀಕ್ಷಿಸಿರಲಿಲ್ಲ” ಎಂದು ಹೇಳಿದರು.