Advertisement

ಬಾಹ್ಯಾಕಾಶದಲ್ಲೂ ಯುದ್ಧನೆಲೆ! ರಕ್ಷಣಾ ಪಡೆಗಳ ಮುಖ್ಯಸ್ಥ Anil Chauhan ಅಚ್ಚರಿಯ ಹೇಳಿಕೆ

08:25 PM Apr 11, 2023 | Team Udayavani |

ನವದೆಹಲಿ: ಬಾಹ್ಯಾಕಾಶ ನಿಲ್ದಾಣಗಳನ್ನು ಸ್ಥಾಪಿಸುವುದು, ಉಪಗ್ರಹಗಳನ್ನು ಕಳುಹಿಸುವುದು ಈಗ ಜಗತ್ತಿನಲ್ಲಿ ಹಳೆಯ ಸಮಾಚಾರ. ಹೊಸತೇನು ಗೊತ್ತಾ? ಬಾಹ್ಯಾಕಾಶದಲ್ಲೂ ಸೇನಾಹಿಡಿತ ಸಾಧಿಸಲು ಹಲವು ದೇಶಗಳು ಮುಂದಾಗಿವೆ, ಹೀಗಾಗಿ ಅಲ್ಲೂ ಯುದ್ಧವಾಗುವ ಸಾಧ್ಯತೆಯೊಂದಿದೆ, ಅದಕ್ಕಾಗಿ ಅಲ್ಲೂ ಸೇನಾನೆಲೆ ಸ್ಥಾಪಿಸಬೇಕು! ಹೀಗೆಂದು ದಿಕ್ಸೂಚಿಯನ್ನು ನೀಡಿದ್ದು ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್‌ ಅನಿಲ್‌ ಚೌಹಾಣ್‌.

Advertisement

ಮೂರು ದಿನಗಳ ಭಾರತೀಯ ಬಾಹ್ಯಾಕಾಶ ರಕ್ಷಣಾ ಸಿಂಪೋಸಿಯಮ್‌ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಹ್ಯಾಕಾಶದ ಮೇಲೆ ಹಿಡಿತ ಸಾಧಿಸಿದರೆ ಇತರೆ ದೇಶಗಳ ನೆಲ, ಸಮುದ್ರ, ವಾಯುಮಾರ್ಗವನ್ನು ನಿಯಂತ್ರಿಸಬಹುದು. ಹಾಗಾಗಿ ಅಲ್ಲೂ ಸೈನ್ಯಿಕರಣ ಮಾಡುವುದು ಅನಿವಾರ್ಯ. ಅದರಿಂದ ಭಾರತ ದೂರಯುಳಿಯುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಉಪಗ್ರಹಗಳನ್ನು ನಾಶಪಡಿಸುವ ತಂತ್ರಜ್ಞಾನಗಳನ್ನು ರಷ್ಯಾ-ಚೀನಾ ಅಭಿವೃದ್ಧಿಪಡಿಸಿವೆ. ಹಾಗಿರುವಾಗ ರಕ್ಷಣಾತ್ಮಕ, ಆಕ್ರಮಕವಾದ ಬಾಹ್ಯಾಕಾಶ ನೆಲೆಗಳನ್ನು ಭಾರತ ಅಭಿವೃದ್ಧಿಪಡಿಸಬೇಕಾಗಿದೆ ಎಂದು ಖಚಿತಸ್ವರದಲ್ಲಿ ಚೌಹಾಣ್‌ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಚಾರ ಇಸ್ರೋದ ಪ್ರಮುಖ ಗುರಿಯಾದರೆ ಅಚ್ಚರಿಯೇನಿಲ್ಲ ಎನ್ನುವುದು ತಜ್ಞರ ಅಭಿಮತ.

Advertisement

Udayavani is now on Telegram. Click here to join our channel and stay updated with the latest news.

Next