Advertisement
ಕೋವಿಡ್ ಲಾಕಡೌನ್ ಸಂಕಷ್ಟದಿಂದ ಸ್ಪಲ್ಪಮಟ್ಟಿಗೆ ಚೇತರಿಸಿಕೊಳ್ಳುತ್ತಿರುವ ಹೊಟೇಲ್ ಉದ್ಯಮಕ್ಕೆ ಇದೀಗ ಸೂರ್ಯಕಾಂತಿ ಅಡುಗೆ ಎಣ್ಣೆ ಸೇರಿದಂತೆ ಇನ್ನಿತರ ಅಡುಗೆ ಎಣ್ಣೆಯ ಬೆಲೆ ಏರಿಕೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಆ ಹಿನ್ನೆಲೆಯಲ್ಲಿ ಹೆಚ್ಚು ಎಣ್ಣೆ ಹೀರುವ ಪದಾರ್ಥಗಳನ್ನು ಕೆಲವು ದಿನಗಳ ಕಾಲ ದೂರವಿಡುವ ಬಗ್ಗೆ ಆಲೋಚನೆಯನ್ನು ಹೊಟೇಲ್ ಮಾಲಕರು ಮಾಡಿದ್ದಾರೆ. ಜತೆಗೆ ಊಟದ ವೇಳೆ ಪೂರಿ ನೀಡುವ ಬದಲಾಗಿ ಚಪಾತಿ ನೀಡುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.
ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ರೆಸ್ಟೋರೆಂಟ್ ಸಂಘಗಳ ಅಧ್ಯಕ್ಷ ಚಂದ್ರಶೇಖರ ಹೆಬ್ಟಾರ್, ದಿಢೀರ್ ಆಗಿ ಅಡುಗೆ ಎಣ್ಣೆ ಬೆಲೆ ಏರಿಕೆ ಹೊಟೇಲ್ ಉದ್ಯಮದ ಮೇಲೆ ದೊಡ್ಡ ಹೊಡೆತ ನೀಡಿದೆ. ಬೆಲೆ ಏರಿಕೆಯಿಂದಾಗಿ ಪೂರಿ, ಬೋಂಡ, ಬಜ್ಜಿ, ವಡಾ ಸೇರಿದಂತೆ ಕೆಲವು ಕರಿದ ಎಣ್ಣೆ ಪದಾರ್ಥಗಳನ್ನು ನಷ್ಟ ಮಾಡಿಕೊಂಡು ಗ್ರಾಹಕರಿಗೆ ಮಾರಾಟ ಮಾಡಬೇಕಾಗಿರುವ ಸಂದಿಗ್ಧ ಪರಿಸಿತಿ§ಯಲ್ಲಿ ನಾವೀದ್ದೆವೆ ಎಂದು ಹೇಳುತ್ತಾರೆ.
Related Articles
ಅಡುಗೆ ಎಣ್ಣೆ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಹೊಟೇಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಪೂರಿ,ಬಜ್ಜಿ, ವಡ, ಬೋಂಡಾ ಸೇರಿದಂತೆ ಇನ್ನಿತರ ಚೈನೀಸ್ ಆಹಾರ ಪದಾರ್ಥಗಳ ಮೇಲೆ ಶೇ. 10ರಷ್ಟು ಬೆಲೆ ಏರಿಕೆ ಮಾಡುವ ಚಿಂತನೆ ಹೊಟೇಲ್ ಮಾಲಕರ ವಲಯದಲ್ಲಿ ನಡೆದಿದೆ. ಮಾ.15ರ ಬಳಿಕ ಕರಿದ ಎಣ್ಣೆಯಿಂದ ಮಾಡಿದ ಆಹಾರ ಪದಾರ್ಥಗಳ ಬೆಲೆ ಏರಿಕೆ ಮಾಡುವ ಬಗ್ಗೆ ಸೂಕ್ತ ತೀರ್ಮಾನವನ್ನು ಹೊಟೇಲ್ ಅಸೋಸಿಯೇಷನ್ ಕೈಗೊಳ್ಳಲಿದೆ ಎಂದು ಬೃಹತ್ ಬೆಂಗಳೂರು ಹೊಟೇಲ್‌ಗಳ ಮಾಲಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.
Advertisement
ಅಡುಗೆ ಎಣ್ಣೆಯ ಬೆಲೆ ಮುಂದಿನ ದಿನಗಳಲ್ಲಿ 300 ರೂ.ತಲುಪುವ ನಿರೀಕ್ಷೆಯಿದೆ.ಕೇಲವೆ ದಿನಗಳಲ್ಲಿ ಪೆಟ್ರೋಲ್,ಡಿಸೇಲ್ ಬೆಲೆ ಕೂಡ ಹೆಚ್ಚಳವಾಗುವ ನಿರೀಕ್ಷೆಯಿದೆ. ಆ ಹಿನ್ನೆಲೆಯಲ್ಲಿ ಹೊಟೇಲ್ ಮಾಲಕರ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದೆ. ಅಡುಗೆ ಎಣ್ಣೆಯನ್ನು ಕೆಲವರು ಅಕ್ರಮವಾಗಿ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿದ್ದು ಅಂತಹವರ ವಿರುದ್ಧ ಕ್ರಮಕ್ಕೆ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಭೇಟಿ ಬಳಿಕ ಖಾದ್ಯ ಆಹಾರಗಳ ಬೆಲೆ ಏರಿಕೆ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
10 ಟಿನ್ ಬದಲು ಕೇವಲ 5 ಟಿನ್ ಸಿಗುತ್ತಿದೆಉಕ್ರೇನ್ ಮತ್ತು ರಷ್ಯಾ ಯುದ್ದ ಸಂಘರ್ಷದ ನೆಪವೊಡ್ಡಿ ಮಧ್ಯವರ್ತಿಗಳು ಅಡುಗೆ ಎಣ್ಣೆಯ ಕೃತಕ ಅಭಾವ ಸೃಷ್ಟಿಸಿದ್ದಾರೆ. ಆ ಹಿನ್ನೆಲೆಯಲ್ಲಿ 10 ಟಿನ್ ಅರ್ಡರ್ ಮಾಡಿದರೆ ಕೇವಲ 5 ಟಿನ್ ಅಡುಗೆ ಎಣ್ಣೆ ಮಾತ್ರ ದೊರಕುತ್ತಿದೆ. ಹೀಗಾಗಿ ಹೊಟೇಲ್ ಉದ್ಯಮ ತೊಂದರೆಯಲ್ಲಿ ಸಿಲುಕಿದೆ ಎಂದು ಹೊಟೇಲ್ ವ್ಯಾಪಾರಿಗಳು ಹೇಳುತ್ತಾರೆ. ಒಗ್ಗರಣೆಯಿಂದ ಪೂರಿಯವರೆಗೂ ಎಣ್ಣೆ ಬಳಕೆ ಮಾಡಲೇಬೇಕು. ಆ ಹಿನ್ನೆಲೆಯಲ್ಲಿ ಯುದ್ಧ ಮುಗಿಯುವವರೆಗೆ ಕೆಲವು ಕರಿದ ಎಣ್ಣೆ ಪದಾರ್ಥಗಳಿಂದ ದೂರ ಉಳಿಯುವುದ ಉತ್ತಮ ಎಂಬ ಆಲೋಚನೆಗೆ ಬರಲಾಗಿದೆ ಎಂದು ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ರೆಸ್ಟೋರೆಂಟ್ ಸಂಘಗಳ ಎಂ.ವಿ. ರಾಘವೇಂದ್ರ ರಾವ್ ಹೇಳಿದ್ದಾರೆ. ಸೂರ್ಯಕಾಂತಿ ಸೇರಿದಂತೆ ಮತ್ತಿತರ ಅಡುಗೆ ಎಣ್ಣೆ ಬೆಲೆ ಏರಿಕೆ ಯಿಂದಾಗಿ ಪೂರಿ, ವಡಾ, ಬಜ್ಜಿ.ಬೋಂಡಾ ಸೇರಿದಂತೆ ಮತ್ತಿತರರ ಕರಿದ ಎಣ್ಣೆ ಪದಾರ್ಥಗಳ ಬೆಲೆಯನ್ನು ಶೇ. 15 ರಷ್ಟು ಏರಿಕೆ ಮಾಡುವ ಬಗ್ಗೆ ಆಲೋಚನೆ ಇದೆ. ಶೀಘ್ರದಲ್ಲೇ ಈ ಬಗ್ಗೆ ಅಂತಿಮ ನಿರ್ಧಾರ ಹೊಟೇಲ್‌ಗಳ ಸಂಘ ತೆಗೆದುಕೊಳ್ಳಲಿದೆ. ಜತೆಗೆ ಊಟಕ್ಕೆ ಪೂರಿ ಬದಲಾಗಿ ಚಪಾತಿ ನೀಡುವ ಬಗ್ಗೆ ಹೊಟೇಲ್ ಮಾಲಕರಿಗೆ ಸಲಹೆ ನೀಡಲಾಗಿದೆ.
-ಪಿ.ಸಿ. ರಾವ್, ಬೃಹತ್ ಬೆಂಗಳೂರು ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ -ದೇವೇಶ್ ಸೂರಗುಪ್ಪ