Advertisement

Waqf Property: ಮಹಾರಾಷ್ಟ್ರದಲ್ಲೂ ರೈತರ ಆಸ್ತಿಗೆ ವಕ್ಫ್ ಮಂಡಳಿ ನೋಟಿಸ್‌!

04:04 AM Dec 09, 2024 | Team Udayavani |

ಲಾತೂರ್‌: ಕರ್ನಾಟಕದ ರೀತಿಯಲ್ಲೇ ಮಹಾರಾಷ್ಟ್ರದಲ್ಲೂ 100ಕ್ಕೂ ಅಧಿಕ ರೈತರಿಗೆ ವಕ್ಫ್ ಮಂಡಳಿ ಆಸ್ತಿ ಕಬಳಿಕೆ ನೋಟಿಸ್‌ ನೀಡಿದೆ. 103 ರೈತರಿಂದ 300 ಎಕರೆಗೂ ಅಧಿಕ ಜಮೀನು ಕಳಬಳಿಕೆಯಾಗಿದೆ ಎಂದು ವಕ್ಫ್ ಮಂಡಳಿ ಹೇಳಿಕೊಂಡಿದೆ.

Advertisement

ಲಾತೂರ್‌ ಜಿಲ್ಲೆಯ ರೈತರಿಗೆ ಈ ನೋಟಿಸ್‌ ನೀಡಲಾಗಿದೆ. ನಮ್ಮ ಪೂರ್ವಿಕರ ಆಸ್ತಿಯನ್ನು ಕಬಳಿಸುವ ಹುನ್ನಾರವನ್ನು ವಕ್ಫ್ ಬೋರ್ಡ್‌ ಮಾಡುತ್ತಿದೆ. ಮಹಾರಾಷ್ಟ್ರ ಸರ್ಕಾರ ತಮ್ಮ ನೆರವಿಗೆ ಬರಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲೂ ಹಲವು ಜಿಲ್ಲೆಗಳ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ, ಬಿಜೆಪಿ ಈ ಕುರಿತು ರಾಜ್ಯಾದ್ಯಂತ ಹೋರಾಟ ಕೂಡ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next