Advertisement
ಅಲ್ಲದೆ ಈ ಸಮಿತಿಯ ಮುಖ್ಯಸ್ಥರನ್ನು ವಜಾ ಮಾಡಬೇಕು ಎಂದು ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ. ಜಂಟಿ ಸಂಸ ದೀಯ ಸಮಿತಿ ಪಕ್ಷಪಾತದಿಂದ ನಡೆದುಕೊಳ್ಳುತ್ತಿದೆ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾಕ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಮಂಡಿಸಿದ ವಿವರದಲ್ಲಿ ಕಾಯ್ದೆಗೆ ಸಂಬಂಧಿಸಿ ಯಾವುದೇ ಮಾಹಿತಿ ಇರಲಿಲ್ಲ. ಬದಲಾಗಿ ಕರ್ನಾಟಕ ಸರಕಾರ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೂಷಿಸ ಲಾಗಿದೆ ಎಂದು ವಿಪಕ್ಷ ನಾಯಕರು ಹೇಳಿ ದ್ದಾರೆ. “ನಾವು ಈ ಸಮಿತಿ ಸಭೆಯನ್ನು ಬಹಿಷ್ಕರಿ ಸುತ್ತಿದ್ದೇವೆ. ಯಾಕೆಂದರೆ ಇಲ್ಲಿ ಯಾವುದೇ ನಿಯಮ ಪಾಲನೆಯಾಗುತ್ತಿಲ್ಲ’ ಎಂದು ಶಿವಸೇನೆ ಹೇಳಿದೆ.
ಕಾಂಗ್ರೆಸ್‌ನ ಗೌರವ್ ಗೊಗೋಯ್, ಇಮ್ರಾನ್ ಮಸೂದ್, ಡಿಎಂಕೆಯ ಎ. ರಾಜಾ, ಶಿವಸೇನೆ (ಯುಬಿಟಿ)ಯ ಪ್ರಮೋದ್ ಸಾವಂತ್, ಎಐಎಂಐಎಂನ ಅಸಾದುದ್ದೀನ್ ಒವೈಸಿ, ಸಮಾಜವಾದಿ ಪಕ್ಷದ ಮೊಹಿಬ್ಬುಲ್ಲಾ, ಆಪ್‌ನ ಸಂಜಯ್ ಸಿಂಗ್ ಸಮಿತಿ ಸಭೆಯಿಂದ ಹೊರನಡೆದರು.
Related Articles
ಬಳಿಕ ಪ್ರತ್ಯೇಕ ಸಭೆ ನಡೆಸಿದ ವಿಪಕ್ಷಗಳ ನಾಯಕರು ಜೆಪಿಸಿ ಮುಖ್ಯಸ್ಥರನ್ನು ಮಾಡ ಬೇಕು ಎಂದು ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.
Advertisement