Advertisement
ಬನಹಟ್ಟಿಯ ಪ್ರವಾಸಿ ಮಂದಿರದಲ್ಲಿ ವಕ್ಫ್ ಭೂ ಕಬಳಿಕೆ ವಿರುದ್ಧ ಯತ್ನಾಳ್ ನೇತೃತ್ವದ ಹೋರಾಟಕ್ಕೆ ಅಸಮಾಧಾನ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿ ನಾನು ನ.22ರಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಭಟನೆಗೆ ಕರೆ ಕೊಟ್ಟಾಗ ಈ ಮೊದಲಿನ ಕ್ಷೇತ್ರವಾದ ಕೊಡಗು ಭಾಗಕ್ಕೆ ತೆರಳಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಬಂದಿದ್ದೇನೆ. ನಾನು ಪಕ್ಷದ ಕಾರ್ಯಕರ್ತನಾಗಿ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇನೆ ಎಂದರು.
ಅಲ್ಲದೇ ವಿಜಯಪುರ ಭಾಗದಲ್ಲಿ ಶಾಸಕ ಯತ್ನಾಳ್ ವಕ್ಫ್ ಬಗ್ಗೆ ದೊಡ್ಡ ಹೋರಾಟ ಮಾಡಿದ್ದಾರೆ. ಅದರಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಭಾಗಿಯಾಗಿದ್ದರು. ಕೇಂದ್ರದಿಂದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಾಂಬಿಕಾ ಪಾಲ್ ಕೂಡ ಬಂದಿದ್ದರು ಆದ್ದರಿಂದ ಇದರಲ್ಲಿ ಬಣ ಅಂತ ಏನಿದೆ. ತೇರದಾಳದಲ್ಲಿಯೂ ನೂರಾರೂ ಎಕರೆ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ತೇರದಾಳದಲ್ಲಿ ವಕ್ಫ್ ವಿರೋಧ ಆಂದೋಲನ ಸಭೆ ಇದೆ. ವಕ್ಫ್ ವಿರುದ್ಧ ಯಾವುದೇ ಬಿಜೆಪಿ ಕಾರ್ಯಕರ್ತರೂ ಹೋರಾಟ ಮಾಡಿದರು. ಅದು ಬಿಜೆಪಿ ಕಾರ್ಯಕ್ರಮ ಎಂದರು. ಅಪ್ರಸ್ತುತ ವ್ಯಕ್ತಿಗಳ ವ್ಯರ್ಥ ಆಲಾಪನೆಗೆ ಉತ್ತರ ಕೊಡಲ್ಲ:
ಯತ್ನಾಳ ಹಾಗೂ ಟೀಮ್ ವಿರುದ್ಧ ಬಿಜೆಪಿ ಮುಖಂಡ ರೇಣುಕಾಚಾರ್ಯರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ರೈತರು ಭೂಮಿ ಕಳೆದು ಕೊಳ್ಳುತ್ತಿದ್ದಾರೆ. ಇದು ನಮ್ಮ ರೈತರ ಉಳಿಸಲು ಹೋರಾಟ ಮಾಡುತ್ತಿದ್ದೇವೆ. ಅಪ್ರಸ್ತುತ ವ್ಯಕ್ತಿಗಳ ವ್ಯರ್ಥ ಆಲಾಪನೆ ಬಗ್ಗೆ ಉತ್ತರ ಕೊಡುವ ಅಗತ್ಯವಿಲ್ಲ. ಉತ್ತರವನ್ನೂ ಕೊಡುವುದಿಲ್ಲ. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಾಗ ಹೂಗುಚ್ಛ ಹಿಡಿದು ಸಿದ್ದರಾಮಯ್ಯ ಮನೆಗೆ, ಡಿಸಿಎಂ ಅವರ ಮನೆಗೆ ಹೋಗಿ ಕಾಲು ಹಿಡಿದುಕೊಂಡ ವ್ಯಕ್ತಿಗಳಿಂದ ನಾವು ಪಕ್ಷ ನಿಷ್ಠೇ, ಸಿದ್ಧಾಂತ, ಬದ್ಧತೆಯನ್ನು ಕಲಿಯಬೇಕಾಗಿಲ್ಲ. ಹಾಗಾಗೀ ಜನರಿಂದ ತಿರಸ್ಕೃತಗೊಂಡು ತಿಪ್ಪೆ ಸೇರಿರುವ ವ್ಯಕ್ತಿಗಳ ಬಗ್ಗೆ ಪ್ರಶ್ನೇ ಕೇಳಬೇಡಿ ಎಂದರು.