Advertisement
ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸೇರಿ ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜೆಪಿಸಿ ರಾಜ್ಯ ಭೇಟಿಯು ಎದುರಾಳಿಗಳ ಒತ್ತಡದ ತಂತ್ರಗಾರಿಕೆಯ ಭಾಗವಾಗಿದೆ. ಒಂದು ಮಹತ್ವದ ನೀತಿ (ವಕ್ಫ್ ತಿದ್ದುಪಡಿ ಮಸೂದೆ)ಯ ಮೇಲೆ ಈ ಭೇಟಿಯು ಪರಿಣಾಮ ಬೀರಲಿದೆ. ಅಷ್ಟೇ ಅಲ್ಲ, ನನ್ನ ಪ್ರಕಾರ ಚುನಾವಣ ಆಯೋಗದ ನಿಯಮಗಳ ಉಲ್ಲಂಘನೆ ಕೂಡ ಆಗುತ್ತದೆ ಎಂದರು. ಸಂಸದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ವಕ್ಫ್ ಆಸ್ತಿ ಬಗ್ಗೆ ಆಡಿರುವ ತಮ್ಮ ಮಾತುಗಳನ್ನು ಗಮನಿಸಿರಲಿಲ್ಲವೇ? ಈಗ ಜೆಪಿಸಿ ಎದುರು ನಾಟಕವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾವೇರಿ ರೈತನ ಆತ್ಮಹತ್ಯೆ ಪ್ರಕರಣವನ್ನು ವಕ್ಫ್ ಆಸ್ತಿಯೊಂದಿಗೆ ತಳುಕು ಹಾಕಿ ಸಂಸದ ತೇಜಸ್ವಿಸೂರ್ಯ ಸಾಮಾಜಿಕ ಜಾಲತಾಣ “ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ಕೆಲವೇ ಹೊತ್ತಿನಲ್ಲಿ ಡಿಲೀಟ್ ಮಾಡಿದ್ದಾರೆ. ಈ ಬಗ್ಗೆ ವ್ಯಕ್ತಿಯೊಬ್ಬರು ಸಂಸದರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಸರಕಾರದ ವತಿಯಿಂದಲೂ ಎಫ್ಐಆರ್ ಹಾಕಿಸುತ್ತೇವೆ ಎಂದು ತರಾಟೆಗೆ ತೆಗೆದುಕೊಂಡರು. ರಾಜ್ಯಕ್ಕೆ ಅನಧಿಕೃತವಾಗಿ ಜೆಪಿಸಿ ಅಧ್ಯಕ್ಷರು ಭೇಟಿ: ಸಚಿವ ಎಚ್.ಕೆ.ಪಾಟೀಲ್
Related Articles
Advertisement
ಸುದ್ದಿಗಾರರ ಜತೆ ಮಾತನಾಡಿದ ಕರ್ನಾಟಕಕ್ಕೆ ಜಂಟಿ ಸಂಸದೀಯ ಸಮಿತಿ ಬಂದಿಲ್ಲ. ಅದರ ಅಧ್ಯಕ್ಷರು ಅನಧಿಕೃತವಾಗಿ ಬಂದಿದ್ದಾರೆ. ಜೆಪಿಸಿ ದುರುಪಯೋಗ ಪಡಿಸಿಕೊಳ್ಳುವ ಬದಲು ವಕ್ಫ್ ಆಸ್ತಿಯ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ಕೇಳಬಹದಿತ್ತು. ಜೆಪಿಸಿಯನ್ನು ಅನಧಿಕೃತವಾಗಿ ಬಳಕೆ ಮಾಡಿಕೊಂಡಿದ್ದು ದುರ್ದೈವದ ಸಂಗತಿ ಎಂದರು.