Advertisement

ರಾಣಿ ಎಲಿಜಬೆತ್‌ ಟ್ವಿಟರ್‌ ಖಾತೆ ನಿರ್ವಹಿಸಿದರೆ 25 ಲಕ್ಷ ಸಂಬಳ

03:45 AM Feb 13, 2017 | Team Udayavani |

ಲಂಡನ್‌: ಇಂಗ್ಲೆಂಡ್‌ನ‌ ರಾಣಿ ಎಲಿಜಬೆತ್‌ರ ಟ್ವೀಟರ್‌ ಖಾತೆ ಮತ್ತು ಇತರ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ವಹಿಸುವವರು ಬೇಕಾಗಿದ್ದಾರೆ. 

Advertisement

ಇದಕ್ಕಾಗಿ ಬಕಿಂಗ್‌ಹ್ಯಾಮ್‌ ಅರಮನೆ ವಾರ್ಷಿಕವಾಗಿ 25 ಲಕ್ಷ ರೂ. (30 ಸಾವಿರ ಪೌಂಡ್‌) ಸಂಭಾವನೆ ನೀಡಲಿದೆ. ಈ ಕುರಿತು ಸ್ವತಃ ರಾಣಿ ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಜಾಹಿರಾತು ಪ್ರಕಟಿಸಲಾಗಿದೆ. 

ಏನೇನು ಕೆಲಸ?: ಫೇಸ್‌ಬುಕ್‌, ಟ್ವಿಟರ್‌ನಲ್ಲಿ ರಾಣಿ ಅವರ ಬರಹಗಳನ್ನು ಪೋಸ್ಟ್‌ ಮಾಡುವುದು. ದೇಶ, ವಿದೇಶಗಳಿಗೆ ಭೇಟಿ ನೀಡುವ ಮತ್ತು ಅರಮನೆಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು, ಅರಮನೆಯ ಶುಭ ಸಮಾರಂಭಗಳ ಕುರಿತ ವಿಡಿಯೋಗಳನ್ನು ಯೂಟ್ಯೂಬ್‌ಗ ಅಪ್‌ಲೋಡ್‌ ಮಾಡುವುದು. ಈ ಕಾರ್ಯಕ್ರಮಗಳ ಬಗ್ಗೆ ಇಂಗ್ಲೆಂಡ್‌ನ‌ “ದಿ ಸನ್‌’  ಪತ್ರಿಕೆಗೆ ವರದಿ ಕಳುಹಿಸುವುದು.

ಸೌಲಭ್ಯಗಳೇನು?: ರಾಜ ಮನೆತನದ ಕೆಲಸಕ್ಕೆ ಸೇರಲು ಇಚ್ಛಿಸುವವರಿಗೆ ರಾಣಿ ಅವರು ಪಿಂಚಣಿ ವ್ಯವಸ್ಥೆ ಸಹಿತ “ಸಮಗ್ರ ಸೌಲಭ್ಯಗಳ ಪ್ಯಾಕೇಜ್‌’ ನೀಡಲಿದ್ದಾರೆ. ಜೊತೆಗೆ ವ್ಯಕ್ತಿತ್ವ ಅಭಿವೃದ್ಧಿ (ಪರ್ಸನಲ್‌ ಡೆವಲಪ್‌ಮೆಂಟ್‌) ಮತ್ತು ಕೆಲಸಕ್ಕೆ ಪೂರಕವಾದ ತರಬೇತಿಯನ್ನೂ ನೀಡಲಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next