Advertisement

ಮಳೆ ಬರುವ ಕಾಲಕ್ಕೆ ತಿನಬೇಕೆಂಬ ಆಸೆ !

06:00 AM Jun 29, 2018 | Team Udayavani |

ಮಳೆಗಾಲದಲ್ಲಿ ಮುದ ನೀಡುತ್ತವೆ, ಬಿಸಿಬಿಸಿಯಾದ, ರುಚಿಶುಚಿಯಾದ ಪಾಕ ಪ್ರಕಾರಗಳು! ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿರುವ, ದಿಢೀರನೆ ತಯಾರಿಸಬಹುದಾದ ಸುಲಭ ಪಾಕ ಇಲ್ಲಿದೆ!

Advertisement

ಬ್ರೆಡ್‌ ಧೋಕ್ಲಾ
ಧೋಕ್ಲಾ ಗುಜರಾತೀ ಖಾದ್ಯ. ಬ್ರೆಡ್‌ ಧೋಕ್ಲಾ ಇದರ ರೂಪಾಂತರಿತ ಸುಲಭರೂಪೀ ಸ್ನಾ ಕ್‌.
ಬೇಕಾಗುವ ಸಾಮಗ್ರಿ: ಬ್ರೆಡ್‌ ಸ್ಲೆ „ಸ್‌ (ಬ್ರೌನ್‌ ಬ್ರೆಡ್‌ ಆದರೆ ಉತ್ತಮ), ಬೆಣ್ಣೆ, ದುಂಡಗೆ ಕತ್ತರಿಸಿದ ಈರುಳ್ಳಿ ಬಿಲ್ಲೆ , ಬೇಯಿಸಿದ ಆಲೂಗಡ್ಡೆಯ ಬಿಲ್ಲೆ ಹಾಗೂ ಟೊಮೇಟೋ ಹಣ್ಣಿನ ಬಿಲ್ಲೆ , ಆಮ್‌ಚೂರ್‌ಪುಡಿ, ಮೆಣಸಿನ ಕಾಳಿನ ಪುಡಿ, ಉಪ್ಪು. ಒಗ್ಗರಣೆಗೆ ತುಪ್ಪ, ಸಾಸಿವೆ, ಕರಿಬೇವು, ಮೆಣಸು, ಇಂಗಿನ ಪುಡಿ.

ವಿಧಾನ: ಎರಡು ಬ್ರೆಡ್‌ ಸ್ಲೆ„ಸ್‌ಗಳನ್ನು ತೆಗೆದುಕೊಂಡು ಅದಕ್ಕೆ ಬೆಣ್ಣೆ ಸವರಿ, ಕಾವಲಿಯ ಮೇಲೆ, ರೋಸ್ಟ್‌ ಮಾಡಬೇಕು. ತದನಂತರ ಎರಡೂ ಸ್ಲೆ„ಸ್‌ನ ಮೇಲೆ ಆಮ್‌ಚೂರ್‌, ಮೆಣಸಿನಕಾಳಿನ ಪುಡಿ, ಉಪ್ಪಿನ ಪುಡಿಗಳ ಮಿಶ್ರಣವನ್ನು ಸವರಬೇಕು. ತದನಂತರ ಒಂದು ಸ್ಲೆ„ಸ್‌ನ ಮೇಲೆ ಈರುಳ್ಳಿ, ಬೇಯಿಸಿದ ಆಲೂ ಹಾಗೂ ಟೊಮೆಟೋ ಬಿಲ್ಲೆಗಳನ್ನು ಇಟ್ಟು, ಇನ್ನೊಂದು ಸ್ಲೆ „ಸ್‌ನ್ನು ಅದರ ಮೇಲಿಟ್ಟು ಪ್ರಸ್‌ ಮಾಡಬೇಕು. ಹೀಗೆ ತಯಾರಾದ ಬ್ರೆಡ್‌ ಸ್ಲೆ„ಸ್‌ಗಳ ಮೇಲೆ ತುಪ್ಪದಲ್ಲಿ ಸಿಡಿಸಿದ ಸಾಸಿವೆ, ಕರಿಬೇವು, ಮೆಣಸು, ಇಂಗಿನಪುಡಿಯಿಂದ ಒಗ್ಗರಣೆ ಹಾಕಬೇಕು. ಇದು ಸಂಜೆಯ ಸ್ನಾಕ್‌ಗೆ ಉತ್ತಮ.

ಕ್ಯಾರೆಟ್‌ ಸಲಾಡ್‌
 ಬೇಕಾಗುವ ಸಾಮಗ್ರಿ: ತುರಿದ ಕ್ಯಾರೆಟ್‌ 1 ಕಪ್‌, ಸಿಹಿದ್ರಾಕ್ಷಿ 5 ಚಮಚ, ತುರಿದ ಹಸಿಶುಂಠಿ ½ ಚಮಚ, ನಿಂಬೆರಸ 3 ಚಮಚ, ಕಾಳುಮೆಣಸಿನ ಪುಡಿ, ಉಪ್ಪು ½ ಚಮಚ, ಕೊತ್ತಂಬರಿಸೊಪ್ಪು ಸಣ್ಣಗೆ ಹೆಚ್ಚಿದ್ದು 3 ಚಮಚ.

ವಿಧಾನ: ಇವೆಲ್ಲವುಗಳನ್ನು ಒಂದು ಪಾತ್ರೆಯಲ್ಲಿ ಚೆನ್ನಾಗಿ ಮಿಶ್ರ ಮಾಡಬೇಕು. ಇದು ಮಧ್ಯಾಹ್ನದ ಊಟದ ಸಮಯದಲ್ಲಿ ದಿಢೀರನೆ ತಯಾರಿಸಬಹುದಾದ ಆರೋಗ್ಯಕರ ಸಲಾಡ್‌.

Advertisement

ಮಳೆಗಾಲಕ್ಕಾಗಿ ಹರ್ಬಲ್‌ ಚಹಾ
ಬೇಕಾಗುವ ಸಾಮಗ್ರಿ: ಚಹಾ ತಯಾರಿಸುವಾಗ 1 ಇಂಚು ಶುಂಠಿಯನ್ನು ಜಜ್ಜಿ, ಏಲಕ್ಕಿ 1, ಕಾಳುಮೆಣಸಿನ ಕಾಳು 2, ಪುದೀನಾ ಎಲೆ ಬೆರೆಸಿ ಚಹಾ ತಯಾರಿಸಿದರೆ ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಈ ಚಹಾ ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ವರ್ಧಿಸುತ್ತದೆ. ನೆಗಡಿ, ಕೆಮ್ಮು, ಜ್ವರ ಬಂದಾಗ ಹಸಿವೆ, ಪಚನಕ್ರಿಯೆ ಉತ್ತಮಗೊಳಿಸಲು ಸೇವಿಸಿದರೆ ಪರಿಣಾಮಕಾರಿ.

ಮಕ್ಕಳಿಗಾಗಿ ಚಟ್‌ಪಟಾ ಟಾರ್ಟಿಲ್ಲಾ
 ಬೇಕಾಗುವ ಸಾಮಗ್ರಿ: ಭಿ ಕಪ್‌ ಬೇಯಿಸಿದ ಕಾರ್ನ್ (ಮೆಕ್ಕೆಜೋಳ) 2 ಚಮಚ ಟಾರ್ಟಿಲ್ಲಾ ಚಿಪ್ಸ್‌ , 4-5 ಚಮಚ ಆಲೂ ಭುಜಿಯಾ, ಕತ್ತರಿಸಿದ ಟೊಮೆಟೋ 1 ಚಮಚ, ಕತ್ತರಿಸಿದ ಈರುಳ್ಳಿ 2 ಚಮಚ, ಖಾರಪುಡಿ, ಉಪ್ಪು, ಕತ್ತರಿಸಿದ ಕೊತ್ತಂಬರಿಸೊಪ್ಪು.

ವಿಧಾನ: ಎಲ್ಲವನ್ನೂ ಒಂದು ಬೌಲ್‌ನಲ್ಲಿ ಚೆನ್ನಾಗಿ ಬೆರೆಸಿ ಮಕ್ಕಳಿಗೆ ಸಂಜೆ ಸ್ನ್ಯಾಕ್ಸ್‌ ರೂಪದಲ್ಲಿ ನೀಡಿದರೆ ಇಷ್ಟಪಟ್ಟು ತಿನ್ನುತ್ತಾರೆ. ಮೆಕ್ಕೆಜೋಳ ಅಥವಾ ಕಾರ್ನ್ ಮಳೆಗಾಲದಲ್ಲಿ ಸಮೃದ್ಧವಾಗಿ ದೊರೆಯುವುದು. ಆದ್ದರಿಂದ ತಯಾರಿಸಲು ಸುಲಭ, ಜೊತೆಗೆ ಪೋಷಕಾಂಶಗಳಿಂದಲೂ ಸಮೃದ್ಧವಾಗಿದೆ. ಕೊಕೊನಟ್‌ ರೈಸ್‌ ವಿದ್‌ ರಾಜ್ಮಾ (ರಾಜ್ಮಾದೊಂದಿಗೆ ತೆಂಗಿನಕಾಯಿಯ ಅನ್ನ )

ಬೇಕಾಗುವ ಸಾಮಗ್ರಿ: ಬೇಯಿಸಿದ ಬಾಸ್ಮತಿ ಅಕ್ಕಿಯ ಅನ್ನ 2 ಕಪ್‌, ಬೇಯಿಸಿದ ರಾಜ್ಮಾ 1 ಕಪ್‌, ಕತ್ತರಿಸಿದ ಕ್ಯಾರೆಟ್‌ನ ಉದ್ದ ಸ್ಲೆ„ಸ್‌ 8-10, ತುಪ್ಪ ಭಿ ಕಪ್‌, ಗರಂಮಸಾಲಾ ಪುಡಿ 2 ಚಮಚ, ಕಾಯಿಹಾಲು 1 ಕಪ್‌, ಅರಸಿನಪುಡಿ 1 ಚಮಚ, ಕತ್ತರಿಸಿದ ಕೊತ್ತಂಬರಿಸೊಪ್ಪು – ಜೀರಿಗೆ 2 ಚಮಚ, ಉಪ್ಪು -ಖಾರಪುಡಿ ರುಚಿಗೆ ತಕ್ಕಷ್ಟು. ಸ್ವಲ್ಪ ಕೊಬ್ಬರಿ ಎಣ್ಣೆ.

ವಿಧಾನ: ಮೊದಲು ಕಾವಲಿಯಲ್ಲಿ ತುಪ್ಪ ತೆಗೆದುಕೊಂಡು ಅರಸಿನಪುಡಿ, ಜೀರಿಗೆ ಹಾಕಿ ಸಿಡಿಸಬೇಕು. ತದನಂತರ ಬೇಯಿಸಿದ ಬಾಸ್ಮತಿ ಅನ್ನ ಬೆರೆಸಿ, ಕಾಯಿಹಾಲು ಸೇರಿಸಿ ಚೆನ್ನಾಗಿ ಬೇಯುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ, ಬೆಂದ ನಂತರ ಕೆಳಗಿಳಿಸಬೇಕು. ಕೊನೆಯಲ್ಲಿ ಉಪ್ಪು ಹಾಕಿ ಕದಡಬೇಕು.

ಇನ್ನೊಂದು ಪಾತ್ರೆಯಲ್ಲಿ ಕೊಬ್ಬರಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಗರಂಮಸಾಲಾ ಪುಡಿ ಹಾಕಿ ಹುರಿಯಬೇಕು. ಅದರಲ್ಲಿ ಬೇಯಿಸಿದ ರಾಜ್ಮಾ ಬೆರೆಸಿ ಹುರಿದು, ಕೊನೆಗೆ ಉಪ್ಪು, ಖಾರಪುಡಿ ಹಾಕಿ ಬೆರೆಸಬೇಕು. ಇನ್ನೊಂದು ಸಣ್ಣ ಕಾವಲಿಯಲ್ಲಿ ಕತ್ತರಿಸಿದ ಕ್ಯಾರೆಟ್‌ ಬಿಲ್ಲೆ (ತುಂಡು)ಗಳನ್ನು ತುಪ್ಪದಲ್ಲಿ ಹುರಿದು ಉಪ್ಪು, ಖಾರಪುಡಿ ಬೆರೆಸಿ ತೆಗೆದಿಡಬೇಕು. ಒಂದು ಪ್ಲೇಟ್‌ನಲ್ಲಿ ಮೊದಲು ಕಾಯಿಹಾಲಿನೊಂದಿಗೆ ಬೇಯಿಸಿದ ಬಾಸ್ಮತಿ ಅನ್ನವನ್ನು ಹರಡಿ, ಅದರ ಮೇಲೆ ಪದರದಂತೆ ರಾಜ್ಮಾ ಮಿಶ್ರಣವನ್ನು ಹರಡಬೇಕು. ಅದರ ಮೇಲೆ ಟಾಪಿಂಗ್‌ಗಾಗಿ ಹುರಿದ ಕ್ಯಾರೆಟ್‌ ಬಿಲ್ಲೆಗಳನ್ನು ಇಡಬೇಕು. ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ಮಳೆಗಾಲಕ್ಕೆ ಮಧ್ಯಾಹ್ನ ಅಥವಾ ರಾತ್ರಿಯ ಬಿಸಿ ಬಿಸಿ ಭೋಜನಕ್ಕೆ ತಯಾರು!

ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next