ಪ್ರಯಾಗ್ ರಾಜ್: ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು, ಸುಭಾಶ್ಚಂದ್ರ ಬೋಸ್ ಅವರನ್ನು ದೇಶದ ಮೊದಲ ಪ್ರಧಾನಿ ಮಂತ್ರಿ ಎಂದು ಹೆಸರಿಸಬೇಕು ಹಾಗೂ ಮತಾಂತರ ಎಂಬುದು ದೇಶದ್ರೋಹ ಎಂದು ಪರಿಗಣಿಸಿ ಮರಣದಂಡನೆ ಶಿಕ್ಷೆ ವಿಧಿಸಬೇಕು…ಇದು ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಾಘ ಮೇಳದಲ್ಲಿನ ಧರ್ಮ ಸಂಸತ್ ನ ಬೇಡಿಕೆಯಾಗಿದೆ.
ಇದನ್ನೂ ಓದಿ:ರಾಜಸ್ಥಾನ: ರಾಜಕಾರಣಿಗಳಿಂದ ಗ್ಯಾಂಗ್ ರೇಪ್ ;ಮಹಿಳಾ ಸಬ್ ಇನ್ಸ್‌ಪೆಕ್ಟರ್ ಆರೋಪ !
ದೇಶಭಕ್ತ ಮುಸ್ಲಿಮರು ನಮ್ಮ ಕುಟುಂಬದ ಭಾಗವಾಗಿದ್ದು, ಹಿಂದೂ ಧರ್ಮಕ್ಕೆ ಮರಳುವ ಪ್ರಚಾರಾಂದೋಲನ (ಘರ್ ವಾಪ್ಸಿ) ಮುಂದುವರಿಯಬೇಕು ಎಂಬ ನಿರ್ಧಾರವನ್ನು ಧರ್ಮ ಸಂಸತ್ ನಲ್ಲಿ ಕೈಗೊಳ್ಳಲಾಗಿದೆ.
ಧರ್ಮ ಸಂಸತ್ ಸಮ್ಮೇಳನದ ಮುಖ್ಯ ಅತಿಥಿ, ಸುಮೇರು ಪೀಠಾಧೀಶ್ವರ್, ಜಗದ್ಗುರು ಸ್ವಾಮಿ ನರೇಂದ್ರನಂದ ಸರಸ್ವತಿ ಅವರು ಮಾತನಾಡಿ, ಕೇಂದ್ರ ಸರ್ಕಾರ ಹಿಂದೂ ದೇಶ ಎಂದು ಘೋಷಿಸದಿದ್ದಲ್ಲಿ, ಎಲ್ಲಾ ಹಿಂದೂಗಳು ದೇಶವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸುವಂತೆ ಕೇಂದ್ರಕ್ಕೆ ಪತ್ರ ಬರೆಯಬೇಕು ಎಂದು ಆಗ್ರಹಿಸಿದರು.
ಇಸ್ಲಾಮಿಕ್ ಜಿಹಾದ್ ಇಡೀ ಜಗತ್ತಿಗೆ ದೊಡ್ಡ ಅಪಾಯಕಾರಿಯಾಗಿದೆ. ಇದನ್ನು ಮಟ್ಟಹಾಕಬೇಕಾಗಿದ್ದು, ಭಾರತ ಚೀನಾದ ನಿಯಮವನ್ನು ಅನುಸರಿಸುವ ಮೂಲಕ ಭಯೋತ್ಪಾದನೆಯನ್ನು ನಿಗ್ರಹಿಸಬೇಕಾಗಿದೆ ಎಂದು ನರೇಂದ್ರನಂದ ಸರಸ್ವತಿ ಹೇಳಿದರು.
ಮಹಾತ್ಮ ಗಾಂಧಿ ರಾಷ್ಟ್ರಪಿತ ಅಲ್ಲ, ರಾಷ್ಟ್ರಪುತ್ರ ಆಗಬಹುದೇ ಹೊರತು ರಾಷ್ಟ್ರಪಿತ ಆಗಲಾರರು ಎಂದ ಸ್ವಾಮಿ ನರೇಂದ್ರನಂದ, ಜವಾಹರಲಾಲ್ ನೆಹರು ದೇಶದ ಮೊದಲ ಪ್ರಧಾನಿ ಅಲ್ಲ, ದೇಶದ ಮೊದಲ ಪ್ರಧಾನಿ ಸುಭಾಶ್ಚಂದ್ರ ಬೋಸ್, ಅವರ ನಾಯಕತ್ವವನ್ನು ಜಗತ್ತಿನ ಹಲವಾರು ದೇಶಗಳು ಒಪ್ಪಿಕೊಂಡಿದೆ. ಇತಿಹಾಸಕಾರರ ತಪ್ಪು ಮಾಹಿತಿ ಇಂದು ಯುವಜನಾಂಗವನ್ನು ಗೊಂದಲಕ್ಕೆ ದೂಡಿದೆ ಎಂದು ತಿಳಿಸಿದರು.