Advertisement

ಆಧಾರ್‌ಗೆ ಟೋಕನ್‌ ಪಡೆಯಲು ಪರದಾಟ

05:54 PM Jan 18, 2020 | Suhan S |

ಕೊರಟಗೆರೆ: ಎರಡು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಕೊರಟಗೆರೆ ಕ್ಷೇತ್ರದ ಕೇವಲ ಎರಡು ಕಡೆಯಷ್ಟೇ ಆಧಾರ್‌ ಕಾರ್ಡ್‌ ಕೇಂದ್ರ ವಿರುವುದರಿಂದ ಟೋಕನ್‌ ಪಡೆಯಲು ವಿದ್ಯಾರ್ಥಿಗಳ ಜೊತೆ ರೈತಾಪಿವರ್ಗ ರಾತ್ರಿಯಿಡಿ ಕಾವಲು ಕಾಯುವಪರಿಸ್ಥಿತಿ ಎದುರಾಗಿದೆ.

Advertisement

ಪ್ರತಿನಿತ್ಯ ನೀಡುತ್ತಿದ್ದ ಟೋಕನ್‌ ನಿಲ್ಲಿಸಿ ವಾರಕ್ಕೊಮ್ಮೆ ಸೋಮವಾರ ನಿಗದಿತ ಸಮಯದಲ್ಲಿ ವಿತರಿಸುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಪಟ್ಟಣದ ಕಂದಾಯ ಇಲಾಖೆ ಬ್ಯಾಂಕಿನ ಎರಡು ಕಡೆಯಲ್ಲಷ್ಟೇ ಆಧಾರ್‌ ಕೇಂದ್ರ ತೆರೆಯಲಾಗಿದೆ. ಆಧಾರ್‌ ಕಾರ್ಡ್‌ನ ಬೇಡಿಕೆ ಸೃಷ್ಟಿಸುವ ಉದ್ದೇಶದಿಂದ ಪ್ರತಿದಿನ 30 ನೀಡುತ್ತಿದ್ದ ಟೋಕನ್‌ ದಿಢೀರ್‌ ನಿಲ್ಲಿಸಿವಾರಕ್ಕೊಮ್ಮೆ ಪ್ರತಿ ಸೋಮವಾರ 180 ಟೋಕನ್‌ ನೀಡಲು ಏಕಾಏಕಿ ತೀರ್ಮಾನ ತೆಗೆದುಕೊಂಡಿರುವುದರಿಂದ ಸಮಸ್ಯೆ ಹೆಚ್ಚಾಗಿದ್ದರೂ ಕಂದಾಯ ಇಲಾಖೆ ಮೌನಕ್ಕೆ ಶರಣಾಗಿದೆ.

ಎರಡೇ ಆಧಾರ್‌ ಕೇಂದ್ರ!: ಕೊರಟಗೆರೆಯ 4 ಹೋಬಳಿಯ 24 ಗ್ರಾಮ ಪಂಚಾಯಿತಿಯ 356 ಗ್ರಾಮಗಳಲ್ಲಿ 2ಲಕ್ಷ 50 ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಶಾಲೆ, ಕಾಲೇಜಿನಲ್ಲಿ 20,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಎರಡು ಆಧಾರ್‌ ಕೇಂದ್ರವಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಹತ್ತಾರು ಕಿ.ಮೀದೂರದಿಂದ ಬರುವ ರೈತರು ಮತ್ತು ಶಾಲೆ-ಕಾಲೇಜಿಗೆರಜೆ ಹಾಕಿ ಆಧಾರ್‌ ತಿದ್ದುಪಡಿಗೆ ಹಾಜರಾಗುವ ವಿದ್ಯಾರ್ಥಿಗಳು ಟೋಕನ್‌ಗೆ ಭಾನುವಾರ ರಾತ್ರಿಯೇ ಬರಬೇಕು. ವಾರಕ್ಕೆ ನೀಡುವ 180 ಟೋಕನ್‌ನಲ್ಲಿ 120 ಮಾತ್ರ ವಿತರಿಸಲಾಗುತ್ತದೆ. ಉಳಿದ 60 ಟೋಕನ್‌ಗಳಿಗೆ ಬೇಡಿಕೆ ಸೃಷ್ಟಿಸಿ ಸಿಬ್ಬಂದಿ ಕೇಳಿದಷ್ಟು ಹಣವನ್ನು ರೈತರು ನೀಡಬೇಕಾಗಿದೆ. ವಿದ್ಯಾರ್ಥಿವೇತನ, ಪಡಿತರ ಚೀಟಿ, ವೃದ್ಧಾಪ್ಯ ವೇತನ, ಬ್ಯಾಂಕ್‌ ಖಾತೆ, ಜಾತಿ ಮತ್ತು ಆಧಾಯ ದೃಢೀಕರಣ ಪತ್ರದ ಜೋಡಣೆಗೆ ಆಧಾರ್‌ ಕಾರ್ಡ್‌ ನೋಂದಣಿ ಮತ್ತು ತಿದ್ದುಪಡಿಗೆ ನೀಡಬೇಕಾದ ದರದ ನಾಮಫ‌ಲಕ ಹಾಕದೇ ಸಿಬ್ಬಂದಿಗಳು ರೈತರಿಂದ ವಸೂಲಿಗೆ ಮುಂದಾಗಿದ್ದಾರೆ. ಏಜೆಂಟರು ಮಾಡಿದ್ದೇ ನಿಯಮ ವಾಗಿದ್ದು, ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿರವ ಅನುಮಾನ ವ್ಯಕ್ತವಾಗಿದೆ.

ಜೋಡಣೆ ಸಮಸ್ಯೆ: ಪಟ್ಟಣ ಮತ್ತು ಗ್ರಾಮೀಣ ಸೇರಿ ಒಟ್ಟು 84 ಆಹಾರ ವಿತರಣಾ ಕೇಂದ್ರದಲ್ಲಿ 43,559 ಪಡಿತರ ಕಾರ್ಡ್‌ಗಳಿವೆ. ಪ್ರತಿ ತಿಂಗಳು ಉಚಿತ ಅಕ್ಕಿ ಪಡೆಯಲು ಪಡಿತರ ಚೀಟಿಗೆ 1,35,812 ಜನರು ಆಧಾರ್‌ ಕಾರ್ಡ್‌ ಜೋಡಣೆ ಮಾಡಬೇಕಾಗಿದೆ. ಐದು ವರ್ಷ ಒಳಗಿನ ಮಕ್ಕಳಿಗೆ ಆಧಾರ ಕಾರ್ಡ್‌ನ ಜೋಡಣೆ ಮಾಡಿಸಿದರಷ್ಟೇ ಅಕ್ಕಿ ಸಿಗುತ್ತದೆ. ಸರ್ಕಾರದಆದೇಶದಂತೆ ಕೊರಟಗೆರೆಯ 24 ಗ್ರಾಪಂ, 4ನಾಡಕಚೇರಿ, ಅಂಚೆ ಇಲಾಖೆ ಮತ್ತು ಬ್ಯಾಂಕಿನಲ್ಲಿ ಆಧಾರ್‌ ಕಾರ್ಡ್‌ ಸೇರ್ಪಡೆ ಮತ್ತು ತಿದ್ದುಪಡಿ ಮಾಡಬೇಕಾಗಿದೆ. ಕೊರಟಗೆರೆ ತಾಲೂಕು ಆಡಳಿತದ ವೈಫ‌ಲ್ಯ ಹಾಗೂ ನಿರ್ಲಕ್ಷ್ಯದಿಂದ ರೈತರು, ವಿದ್ಯಾರ್ಥಿಗಳು ಪಟ್ಟಣದಲ್ಲಿ ಪ್ರತಿನಿತ್ಯ ರಾತ್ರಿ ಜಾಗರಣೆ ಮಾಡಿ ಆಧಾರ್‌ ಕಾರ್ಡ್‌ ಪಡೆಯಲು ಹಾಗೂ ತಿದ್ದುಪಡಿಗೆ ಪರದಾಟ ತಪ್ಪಿಸಲು ಶಾಸಕರು ಕ್ರಮ ಕೈಗೊಳ್ಳಬೇಕಿದೆ.

ಪಡಿತರ ಚೀಟಿಗೆ ಆಧಾರ ಕಾರ್ಡ್‌ನ ಜೋಡಣೆಯಿಂದ ಸಮಸ್ಯೆ ಹೆಚ್ಚಾಗಿದೆ. ಆಧಾರ್‌ ಕಾರ್ಡ್‌ ನೋಂದಣಿ ಉಚಿತ ಮತ್ತು ತಿದ್ದುಪಡಿಗೆ 50 ರೂ. ಪಡೆಯಬೇಕು. ಅಧಿಕ ಹಣ ಕೇಳಿದರೆ ನನ್ನ ಗಮನಕ್ಕೆ ತಂದರೆ ತಕ್ಷಣ ಕ್ರಮ ಕೈಗೊಳ್ಳುತ್ತೇನೆ. ಹೊಳವನಹಳ್ಳಿ, ಕೋಳಾಲ ಮತ್ತು ಅಂಚೆ ಕಚೇರಿಯಲ್ಲಿ ತಕ್ಷಣ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಲು ಸೂಚಿಸುತ್ತೇನೆ. ಗೋವಿಂದರಾಜು, ತಹಶೀಲ್ದಾರ್‌

Advertisement

 

-ಎನ್‌.ಪದ್ಮನಾಭ್‌

Advertisement

Udayavani is now on Telegram. Click here to join our channel and stay updated with the latest news.

Next