Advertisement

ಪಾರ್ಶ್ವವಾಯು ಅರಿವಿಗೆ ವಾಕಥಾನ್‌

11:57 AM Oct 29, 2017 | |

ಬೆಂಗಳೂರು: ಪಾರ್ಶ್ವವಾಯು ರೋಗದ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಲು ಸಾಗರ್‌ ಆಸ್ಪತ್ರೆಯಿಂದ ಶನಿವಾರ ಹಮ್ಮಿಕೊಂಡಿದ್ದ ವಾಕಥಾನ್‌ನಲ್ಲಿ ಪಾರ್ಶ್ವವಾಯು ರೋಗದಿಂದ ಮುಕ್ತರಾದ ನೂರಾರು ಮಂದಿ ಭಾಗವಹಿಸಿದ್ದರು.

Advertisement

ಇದೇ ವೇಳೆ ಪಾರ್ಶ್ವವಾಯು ನಿಯಂತ್ರಣ ಮತ್ತು ಜೀವನ ಶೈಲಿಯ ಬಗ್ಗೆ ವೈದ್ಯರು ಮಾಹಿತಿ ನೀಡಿದರು. ವೈದ್ಯ ಡಾ.ಮದನ್‌ ಗಾಯಕ್‌ವಾಡ್‌ ಮಾತನಾಡಿ, ಸಕಾಲಿಕ ಪರೀಕ್ಷೆಯಿಂದ ಪಾರ್ಶ್ವವಾಯು ಬರುವುದನ್ನು ತಡೆಯಬಹುದು. ಈ ರೋಗದ ಮೊದಲ ಲಕ್ಷಣವೇ ಮುಖ ದಿಢೀರನೇ ಸೊಟ್ಟಗಾಗಿ, ಮಾತಿನಲ್ಲಿ ನಡುಕ, ಕೈ ಕಾಲು ಸಾಮರ್ಥ್ಯ ಕಳೆದುಕೊಳ್ಳುವುದು.

ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ನೀಡಿದರೆ ಸರಿಪಡಿಸಿಕೊಳ್ಳಬಹುದು ಎಂಬ ಸಲಹೆ ನೀಡಿದರು. ಮಾಜಿ ಮಿಸ್ಟ್ರೆಸ್‌ ಇಂಡಿಯಾ ಪ್ರತಿಭಾ ಸೌನ್ಷಿಮಠ, ಫಿಟ್‌ನೆಸ್‌ ತಜ್ಞೆ ವನಿತಾ ಅಶೋಕ್‌, ಆರ್‌.ಜೆ.ರಾಜೇಶ್‌ ಮೊದಲಾದವರು ಉಪಸ್ಥಿತರಿದ್ದರು. ವಾಕಥಾನ್‌ನಂತರ ಬನಶಂಕರಿಯ ಸಾಗರ್‌ ಆಸ್ಪತ್ರೆಯಲ್ಲಿ ಉಚಿತ ಪಾರ್ಶ್ವವಾಯು ಪರೀಕ್ಷಾ ಶಿಬಿರ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next