Advertisement

ಜಿಲ್ಲಾಸ್ಪತ್ರೆಯಲ್ಲಿ ಹಂದಿಗಳ ಓಡಾಟ

01:00 PM Jul 18, 2020 | Suhan S |

ಕಲಬುರಗಿ: ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ಸಿಬ್ಬಂದಿ ನಿರ್ಲಕ್ಷ್ಯದಿಂದ ನಗರದ ಜಿಲ್ಲಾಸ್ಪತ್ರೆಯೊಳಗೆ ಹಂದಿಗಳ ಹಿಂಡು ನುಗ್ಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಹಂದಿಗಳ ದೃಶ್ಯವನ್ನು ಆಸ್ಪತ್ರೆಗೆ ಭೇಟಿ ನೀಡಿದ್ದ ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಆಸ್ಪತ್ರೆಯಲ್ಲಿ ಹಗಲಿನ ಹೊತ್ತಿನಲ್ಲೇ ಹಂದಿಗಳು ಓಡಾಡುತ್ತಿರುವುದು ಆಸ್ಪತ್ರೆಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನಗರದಲ್ಲಿ ಹಂದಿಗಳ ಹಾವಳಿಗೆ ಕಡಿವಾಣ ಹಾಕುವಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳೂ ವಿಫಲರಾಗಿದ್ದಾರೆ ಎಂದು ಮಾನವ ಹಕ್ಕುಗಳ ಹೋರಾಟಗಾರ ರಿಯಾಜುದ್ದೀನ್ನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಹಂದಿಗಳ ಹಾವಳಿ ಇರುವುದು ನಿಜ. ಆದರೆ, ಜಿಲ್ಲೆಯಲ್ಲಿ ಹಂದಿ ಹಿಡಿಯುವವರು ಇಲ್ಲ. ಬೇರೆ ಜಿಲ್ಲೆಗಳಿಂದ ಕರೆ ತಂದು ಹಂದಿ ಹಿಡಿಸಬೇಕಿದೆ. ಈ ಹಿಂದೆ ಒಮ್ಮೆ ಹಂದಿಗಳ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗಿದೆ. ಈಗ ಮತ್ತೂಮ್ಮೆ ಶೀಘ್ರದಲ್ಲೇ ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆ ಕೈಗೊಳ್ಳಲಾಗುವುದು.  –ರಾಹುಲ್‌ ಪಾಂಡ್ವೆ, ಪಾಲಿಕೆ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next