Advertisement
ಆಗ ನಾನು ಆರನೆಯ ತರಗತಿ. ಇಷ್ಟು ವರ್ಷ ಸ್ಕೂಲಿಗೆ ಅಪ್ಪನ ಬೈಕಲ್ಲಿ ರೊಂಯ್ ಅಂತ ಹೋಗ್ತಿದ್ದೆ. ಈಗ ಸ್ನೇಹಿತರ ಜೊತೆ ನಡೆಯಬೇಕೆಂದು ಅಪ್ಪನ ಹತ್ತಿರ ಹೇಳಿದಾಗ ಅರ್ಧ ದೂರ ಎರಡು ಚಕ್ರದ (ಬೈಕ್‌ನಲ್ಲಿ), ಅರ್ಧ ದೂರ ನಾಲ್ಕು ಚಕ್ರದ (ನಡೆಯುವುದು) ಅನುಭವ ಸಿಕ್ತು.
Related Articles
Advertisement
ನನ್ನ ಹತ್ತಿರ ರೈನ್‌ಕೋಟ್ ಇದ್ದ ಕಾರಣ ಅದನ್ನ ಹಾಕಿಕೊಂಡು ನಡೆದದ್ದೂ ಇದೆ. ಆದರೆ, ಕೆಲವೊಮ್ಮೆ ಆಟದಲ್ಲಿ ಗೆಲ್ಲಬೇಕೆಂದು ಓಡುವ ಹುಡುಗರ ರೀತಿ ಸಮಯಕ್ಕೆ ಮುಂಚಿತವಾಗಿ ಬಸ್ ಬಂದಿದ್ದರೆ, ಆಗ ರೈನ್‌ಕೋಟ್‌ನ ಗುಂಡಿ ಕೈಗೆ ಬರುವಂತೆ ಎಳೆದು ಕೈಚೀಲಕ್ಕೆ ಹಾಕಿ ಬಸ್ ಹತ್ತಿದ್ದೂ ಉಂಟು. ಇಲ್ಲದಿದ್ದರೆ, “ಮೊದಲೇ ಬಸ್‌ನಲ್ಲಿ ಜಾಗವಿಲ್ಲ. ಅದರಲ್ಲೂ ನಿಮ್ಮ ರೈನ್‌ಕೋಟ್ ಬೇರೆ’ ಎನ್ನುವ ಕಂಡಕ್ಟರ್‌ನ ಮಂಗಳಾರತಿ ಬೇರೆ. ಮತ್ತೆ ಸಂಜೆ ಮಳೆ ಬಂದರೇನೇ ನನಗೆ ರೈನ್‌ಕೋಟ್‌ನ ನೆನಪು.
ಆದರೆ ಸಂಜೆ ಹಾಗಲ್ಲ. ನಾವು ಎಷ್ಟೇ ಲೇಟಾಗಿ ಹೋದರೂ ಅದೇ ಬೇಗ. ಗದ್ದೆ ಅಂಚಿನಲ್ಲಿ ಕಾಲೊಂದಿಗೆ ಮಾತನಾಡುವ ಸಣ್ಣ ಸಣ್ಣ ಹುಲ್ಲು, ತುಂತುರು ಹನಿಯೊಂದಿಗೆ ಆಟವಾಡುತ್ತ, ಗೆಳತಿಯರೊಂದಿಗೆ ಕಥೆ ಹೇಳುತ್ತ, ಶಾಲೆಯಲ್ಲಿನ ಅನುಭವವನ್ನು ಹಂಚುತ್ತ ಮನೆಗೆ ಹೋಗುವುದು. ಮನೆಗೆ ಹೋದವರೇ ಬಿಸಿ ನೀರನ್ನು ಮೈಮೇಲೆ ಹಾಕಿ, ಬಿಸಿ ಬಿಸಿ ಹಾಲು ಅಥವಾ ಕಾಫಿ-ತಿಂಡಿ ತಿಂದರೇನೇ ಸಮಾಧಾನ.
ಆದರೂ ಆಗಿನ ಮಜಾ ಈಗ ಮನೆಯಿಂದಲೇ ಸ್ಕೂಲ್ ವ್ಯಾನ್‌ನಲ್ಲಿ ಹೋಗುವವರಿಗೆ ಸಿಗುವುದು ಕಷ್ಟ. ಅವರಿಗೆ ಹೀಗೆ ಅನುಭವದ ನೆನಪಲ್ಲಿ ಸಿಹಿ ಸಿಗುವುದು ಕಡಿಮೆ.
ಐ ಮಿಸ್ ದೋಸ್ ಡೇಸ್.
ನಾಗರತ್ನ ಶೆಣೈ, ಆರ್ಗೋಡುದ್ವಿತೀಯ ಪಿಯುಸಿ, ಎಕ್ಸಲೆಂಟ್ ಪಿಯು ಕಾಲೇಜು, ಸುಣ್ಣಾರಿ