Advertisement

ಅಜಯ್‌ ದೇವಗನ್‌ ವಾಕರೂ ಬ್ರ್ಯಾಂಡ್‌ ರಾಯಭಾರಿ

08:50 PM Oct 27, 2022 | Team Udayavani |

ಬೆಂಗಳೂರು: ಭಾರತದಲ್ಲಿ ಪಾದರಕ್ಷೆಗಳ ಮುಂಚೂಣಿಯ ಬ್ರ್ಯಾಂಡ್‌ ಆಗಿರುವ ವಾಕರೂಗೆ ಬಾಲಿವುಡ್‌ ನಟ ಅಜಯ್‌ ದೇವಗನ್‌ ಅವರನ್ನು ಗುರು ವಾರ ಬ್ರ್ಯಾಂಡ್‌ನ‌ ರಾಯಭಾರಿಯಾಗಿ ನೇಮಕ ಮಾಡಲಾಗಿದೆ ಎಂದು ವಾಕರೂ ಇಂಟರ್‌ನ್ಯಾಷನಲ್‌ ಪ್ರೈವೇಟ್‌ ಲಿಮಿಟೆಡ್‌ನ‌ ವ್ಯವಸ್ಥಾಪಕ ನಿರ್ದೇಶಕ ವಿಕೆಸಿ ನೌಶಾದ್‌ ತಿಳಿಸಿದರು.

Advertisement

ನಟ ಅಜಯ್‌ ದೇವಗನ್‌ ನಮ್ಮ ಹೊಸ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿರುವುದು ಸಂತಸದ ಸಂಗತಿ. ಅವರು ಬ್ರ್ಯಾಂಡ್‌ನೊಂದಿಗೆ ಮೌಲ್ಯಗಳಲ್ಲಿ ಬಹಳಷ್ಟು ಹೊಂದಾಣಿಕೆ ಹೊಂದಿದ್ದಾರೆ. ಉನ್ನತ ಮಟ್ಟದ ಜನಪ್ರಿಯತೆ ಮತ್ತು ವಿಶ್ವಾಸಾರ್ಹತೆ ಹೊಂದಿರುತ್ತಾರೆ. ಈ ಸಹಯೋಗ ಎಲ್ಲಾ ವರ್ಗಗಳಲ್ಲಿನ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ನೆರವು ನೀಡಲಿದೆ. ಉತ್ತರ ಮತ್ತು ಪಶ್ಚಿಮ ಮಾರುಕಟ್ಟೆಗಳ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಬ್ರ್ಯಾಂಡ್‌ ಅನ್ನು ಇನ್ನಷ್ಟು ಬಲಪಡಿಸಲಿದೆ ಎಂಬ ನಂಬಿಕೆಯಿದೆ ಎಂದರು.

ಹವಸ್‌ ಕ್ರಿಯೇಟಿವ್‌ ಗ್ರೂಪ್‌ ಇಂಡಿಯಾದ ಪರಿಕಲ್ಪನೆ ಮತ್ತು ಕಾರ್ಯಗತಗೊಳಿಸಲಾಗಿರುವ ಪ್ರಚಾರಾಭಿಯಾನ ಮೂರು ಚಲನಚಿತ್ರಗಳನ್ನು ಒಳಗೊಂಡಿದ್ದು, ಇದರಲ್ಲಿ ಅಜಯ್‌ ದೇವಗನ್‌, ವಾಕರೂ ಬಗ್ಗೆ ಮೂರು ವಿಭಿನ್ನ ಕಲ್ಪಿತ ತಾಣಗಳಲ್ಲಿ ಬ್ರ್ಯಾಂಡ್‌ ಸಂದೇಶ ನೀಡುತ್ತಾರೆ. ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ಹಬ್ಬದ ಸಾಲಿಗೆ 200ಕ್ಕೂ ಹೆಚ್ಚಿನ ವಿನ್ಯಾಸಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹವಸ್‌ ಗ್ರೂಪ್‌ ಇಂಡಿಯಾದ ಅಧ್ಯಕ್ಷ ಮತ್ತು ಸೃಜನಶೀಲತೆ ಕಚೇರಿ ಮುಖ್ಯಸ್ಥ  ಬಾಬಿ ಪವಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next