Advertisement
ದಿಲ್ಲಿಯಿಂದ ವಾಘಾ ಗಡಿಯವರೆಗೆ 500 ಕಿ.ಮೀ. ವರೆಗೆ ನಡೆಯುವ ಜಯಪ್ರಕಾಶ್ ಶೆಟ್ಟಿ ಅವರ ಪಾದಯಾತ್ರೆಗೆಎಐಸಿಸಿ ಪ್ರಧಾನ ಕಾರ್ಯ ದರ್ಶಿ ಆಸ್ಕರ್ ಫೆರ್ನಾಂಡಿಸ್ ಅವರು ಡಿ. 15ರಂದು ದಿಲ್ಲಿಯ ತಮ್ಮ ನಿವಾಸದಲ್ಲಿ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದ್ದರು. ಪಾದಯಾತ್ರೆಯಲ್ಲಿ ಪಾಣಿಪತ್, ಅಂಬಳ, ಲೂಧಿಯಾನ, ಜಾಲಂಧರ್, ಅಮೃತಸರ ಮೂಲಕ ವಾಘಾ ಗಡಿಯನ್ನು ಶೆಟ್ಟಿ ಅವರು ಡಿ. 27ರಂದು ತಲುಪಿದ್ದಾರೆ. ಬಿಎಸ್‌ಎಫ್ ಜವಾನರು, ಅಧಿಕಾರಿಗಳು ಶೆಟ್ಟಿಯವರನ್ನು ಸ್ವಾಗತಿಸಿ, ಪಾದಯಾತ್ರೆಗೆ ಮೆಚ್ಚುಗೆ ಸೂಚಿಸಿದರು.