Advertisement
ಮುಂದೆ ಕಾಲೇಜಿಗೆ ಸೇರಿದಾಗ ಅಲ್ಲಿಯ ಹೊಸ ಗೆಳತಿಯರ ಹಾವಭಾವ, ಬೆಡಗು ಬಿನ್ನಾಣ, ನಗು, ಮಾತುಕತೆ ಎÇÉಾ ನೋಡಿ ನಾನೂ ಅವರ ಹಾಗೇ ನಾಜೂಕತನವನ್ನು ಕಲಿತುಕೊಳ್ಳಬೇಕು ಎಂದುಕೊಂಡೆ. ಆದರೆ ಮಾತಿಗೆ ಮುಂಚೆಯೇ ನಗುವ ಹಾಗೂ ಮಾತುಮಾತಿಗೆ ನಗುವ ನನಗೆ ನನ್ನ ವಕ್ರಹಲ್ಲುಗಳೇ ಶತ್ರುಗಳಂತೆ ತೋರತೊಡಗಿದವು. ಸರಿ, ಮನೆಯಲ್ಲಿ ಎಲ್ಲರೂ ಎಷ್ಟು ಬೇಡವೆಂದರೂ ಕೇಳದೆ, ಅಪ್ಪನನ್ನು ಕಾಡಿಬೇಡಿ ಹಲ್ಲಿನ ವೈದ್ಯರ ಬಳಿ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾದೆ. ಅಲ್ಲಿ ಹಲ್ಲುಗಳನ್ನೆಲ್ಲ ಕೂಲಂಕಷವಾಗಿ ಪರಿಶೀಲಿಸಿದ ವೈದ್ಯರು, “”ಇದನ್ನು ಸರಿಮಾಡಬೇಕಾದರೆ ಕೆಲವು ಹೊಸ ಹಲ್ಲುಗಳನ್ನು ಕೀಳಬೇಕಾಗುತ್ತದೆ. ಆಗ ಸ್ವಲ್ಪ ಜಾಗವಾಗಿ ಅಡ್ಡಾದಿಡ್ಡಿಯಾಗಿದ್ದವು ಸರಿಯಾಗಬಹುದು” ಎಂದರು. ಅದನ್ನು ಕೇಳಿ ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಅಷ್ಟರಲ್ಲಿ ಅಪ್ಪ,””ಡಾಕ್ಟ್ರೇ, ನಿಮ್ಮ ಅನಿಸಿಕೆ ಏನು?” ಎಂದರು. ಅದಕ್ಕೆ ಆ ಒಳ್ಳೆಯ ವೈದ್ಯರು, “”ನನ್ನ ಪ್ರಕಾರ ಅದು ಇದ್ದ ಹಾಗೇ ಇರಲಿ, ಒಂದು ರೀತಿ ಚೆನ್ನಾಗೇ ಕಾಣುತ್ತದೆ, ಸುಮ್ಮನೆ ಹೊಸಹಲ್ಲುಗಳನ್ನು ಇಷ್ಟು ಸಣ್ಣ ಪ್ರಾಯದಲ್ಲಿ ಕೀಳುವುದು ಸರಿಯಲ್ಲ” ಎನ್ನಬೇಕೆ? ಅಷ್ಟೇ ಸಾಕು, ಎಂಬಂತೆ ಅಪ್ಪ ಅಲ್ಲಿಂದ ನನ್ನನ್ನು ದರದರನೇ ಮನೆಗೆ ಕರೆತಂದರು. ಅಲ್ಲಿ ನನಗೆ ಎರಡನೇ ಸುತ್ತು ಉಪದೇಶ ಶುರುವಾಯಿತು. ಆಗ ಊರಿಗೆ ಬಂದಿದ್ದ ನನ್ನ ಬೊಂಬಾಯಿ ಚಿಕ್ಕಮ್ಮ , “”ಅಲ್ಲ ಕಣೇ, ಮೌಸಮಿ ಚಟರ್ಜಿ ಹಲ್ಲು ಕೂಡ ಹೀಗೆ ಇವೆ, ಅವಳು ನಗುವಾಗ ಎಷ್ಟು ಚೆನ್ನಾಗಿ ಕಾಣುತ್ತಾಳೆ, ಅವಳು ಮಾತ್ರವಲ್ಲ ಕನ್ನಡದ ಮಾಲಾಶ್ರೀ ಹಲ್ಲುಗಳೂ ಹೀಗೆ ತಾನೆ?” ಎಂದಾಗ ಚೂರು ಸಮಾಧಾನವಾಯಿತು. ಅÇÉೇ ಇದ್ದು ಎಲ್ಲವನ್ನೂ ನೋಡುತ್ತಿದ್ದ ತಮ್ಮಂದಿರಿಬ್ಬರು ಮಾಲಾಶ್ರೀ, ಮಾಲಾಶ್ರೀ ಎಂದು ಅಣಕಿಸಲು, ಇಬ್ಬರತ್ತ ಕೆಂಗಣ್ಣು ಬೀರಿದೆ. ಅಂತೂ ಇಂತೂ ಎಲ್ಲರ ಬುದ್ಧಿವಾದ ಮನಸ್ಸಿಗೂ ಹಲ್ಲಿಗೂ ನಾಟಿ ಸರಿ ಇನ್ನು ಹಲ್ಲಿನ ಬಗ್ಗೆ ಅಲೋಚನೆ ಮಾಡುವುದಿಲ್ಲ ಎಂದು ಗಟ್ಟಿ ಮನಸ್ಸು ಮಾಡಿಕೊಂಡೆ.
Related Articles
Advertisement
ಮುಂದೆ ಗೊತ್ತಾಗಿ ತೊಂದರೆಯಾಗುವುದಕ್ಕಿಂತ ಈಗಲೇ ತಿಳಿಸುವುದು ಒಳ್ಳೆಯದು ಎಂದು ಮನೆಯಲ್ಲಿ ಹೇಳಿದಾಗ ಎಲ್ಲರೂ ಕಷ್ಟಪಟ್ಟು ನಗು ತಡೆದುಕೊಂಡು ನನ್ನನ್ನು “ಸುಮ್ಮನಿರು’ ಎಂದು ಗದರಿದರು. ಮುಂದೆ ಮದುವೆಯ ನಂತರ ಕೇಳಿದಾಗ ತಿಳಿದು ಬಂದಿದ್ದೇನೆಂದರೆ, ನನ್ನ ಹುಡುಗನಿಗೆ ಮೊದಲು ಇಷ್ಟವಾಗಿದ್ದೇ ನನ್ನ (ವಕ್ರ) ಹಲ್ಲುಗಳಂತೆ. ಅದಕ್ಕೆ ಸರಿಯಾಗಿ ಆತನ ಹಲ್ಲುಗಳು ಒಂದರಿಂದ ಇನ್ನೊಂದು ಮಾರು ದೂರ. ಸರಿ, ಇವೆರಡರ ಕಾಂಬಿನೇಶನ್ ಆಗಿ ನಮ್ಮ ಮಕ್ಕಳ ಹಲ್ಲು ಸರಿಯಾಗಿ ಬರುತ್ತವೆ ಎಂದು ಕನಸು ಕಂಡಿದ್ದೇ ಬಂತು.
ಕ್ರಮವಾಗಿಯೇ ಇದ್ದ ನನ್ನ ಮಗನ ಹೊಸ ಹಲ್ಲು, ಆಡುವಾಗ ಒಮ್ಮೆ ಬಿದ್ದು ಒಸಡಿನ ಒಳಗೆ ತಳ್ಳಲ್ಪಟ್ಟು ಮುಂದೆ ಮತ್ತೆ ಹೊರಬರುವಾಗ ವಕ್ರವಾಗಿ ಬರಬೇಕೆ? ಇನ್ನು ಮಗಳ ವಿಷಯಕ್ಕೆ ಬಂದರೆ ಅಣ್ಣನೊಡನೆ ಸಮಸಮಕ್ಕೆ ಜಗಳವಾಡುವ ಆಕೆಗೆ ಏನೂ ಅಡೆತಡೆ ಇಲ್ಲದಿದ್ದರೂ ವಕ್ರಹಲ್ಲುಗಳೇ ಬಂದಿವೆ. ಇಲ್ಲದಿದ್ದರೆ, “ಅಣ್ಣನಿಗೆ ಇರುವಂತಹುದೇ ಹಲ್ಲುಗಳು ನನಗೂ ಬೇಕು’ ಎಂದಿದ್ದರೆ ನಾನು ಸರಿಯಿದ್ದ ಹಲ್ಲು ವಕ್ರ ಮಾಡುವವರನ್ನು ಹುಡುಕಿಕೊಂಡು ಹೋಗಬೇಕಾಗುತ್ತಿತ್ತು.ಹೀಗೆÇÉಾ ಇರಲು ಕೊನೆಯಲ್ಲಿ ನಾನೊಂದು ತೀರ್ಮಾನಕ್ಕೆ ಬಂದಿದ್ದೇನೆ.
ಇರುವ ಭಾಗ್ಯವ ನೆನೆದು
ಬಾರೆನೆಂಬುದ ಬಿಡು
ಹರುಷಕಿದೆ ದಾರಿ
ಎಂದು ಸರ್ಕಾರಿ ಬಸ್ಸಿನಲ್ಲಿ ಬರೆದ ಕವಿವಾಣಿಯಂತೆ ಹರುಷಕ್ಕೆ ದಾರಿ ಕಂಡುಕೊಂಡಿದ್ದೇನೆ. ಹಲ್ಲಿನÇÉೇನಿದೆ, ಹಲ್ಲು ಹೇಗೇ ಇರಲಿ, ಮನಸ್ಸು ಮತ್ತು ಬುದ್ಧಿ ಮಾತ್ರ ವಕ್ರವಿಲ್ಲದಿರಲಿ, ಅಲ್ಲವೆ? – ಶಾಂತಲಾ ಎನ್. ಹೆಗ್ಡೆ