Advertisement

ತೊಗರಿ ನೋಂದಣಿಗೆ ರಾತ್ರಿಯಿಡೀ ಜಾಗರಣೆ

08:56 AM Jan 04, 2019 | |

ಹೂವಿನಹಿಪ್ಪರಗಿ: ರೈತರು ಬೆಳೆದ ತೊಗರಿಯಲ್ಲಿ ಸರಕಾರ ಬೆಂಬಲ ಬೆಲೆಯಲ್ಲಿ ಖರೀದಿಸಲು ಆಯಾ ಪಿಕೆಪಿಎಸ್‌ನಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಸಮೀಪದ ಕುದರಿ ಸಾಲವಾಡಗಿ ಗ್ರಾಮದ ಪಿಕೆಪಿಎಸ್‌ ಬ್ಯಾಂಕ್‌ ನಲ್ಲಿ ತೊಗರಿ ಖರೀದಿ ಕೇಂದ್ರ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಕಾರ್ಯನಿರ್ವಾಹಣಾಧಿಕಾರಿ ಅನಿಲಕುಮಾರ ದೇಸಾಯಿ ಮಾತನಾಡಿ, ರೈತರ ಅನುಕೂಲದ ದೃಷ್ಟಿಯಿಂದ ಸರಕಾರ ತೊಗರಿ ಖರೀದಿ ಕೇಂದ್ರವನ್ನು ನೀಡಿ ನಿಮಗೆ ಬೆಂಬಲ ಬೆಲೆ ನೀಡುತ್ತಿದೆ. ರೈತರು ಒಬ್ಬರಿಗೊಬ್ಬರು ಜಗಳವಾಡದೆ ಸಿಬ್ಬಂದಿಯೊಂದಿಗೆ ಸಹಕರಿಸಿ ಎಂದರು.

Advertisement

ಮೊದಲ ದಿನದಂದು ರೈತರು ರಾತ್ರಿಯಡೀ ಚಳಿ ಲೆಕ್ಕಿಸದೆ ಸರದಿ ಸ್ಥಳದಲ್ಲೆ ಮಲಗಿದ್ದರು. ನೋಂದಣಿಯ ಮೊದಲ ದಿನವಾದ ಬುಧವಾರ ತಾಂತ್ರಿಕ ದೋಷದಿಂದಾಗಿ ಕೆಲ ಕಾಲ ನೋಂದಣಿ ಕಾರ್ಯ ಸ್ಥಗಿತವಾಗಿತ್ತಾದರೂ ನಂತರ ಪುನಃ ಆರಂಭಿಸಿ ರೈತರ ಹಿತ ಕಾಪಾಡುವಲ್ಲಿ ಸಿಬ್ಬಂದಿ ಮುಂದಾದರು. ಎರಡನೇಯ ದಿನ ಗುರುವಾರ ಸರದಿಯಲ್ಲಿ ನಿಂತು ಸರಳ ರೀತಿಯಲ್ಲಿ ರೈತರು ತಮ್ಮ ನಂಬರ್‌ ಪಡೆದರು. ಗುರುವಾರ 120ಕ್ಕೂ ಹೆಚ್ಚು ರೈತರು ತಮ್ಮ ಹೆಸರು ನೋಂದಾಯಿಸಿದ್ದಾರೆ. ಗುರುವಾರ ಅವಕಾಶ ದೊರೆಯದ ರೈತರಿಗೆ ಕೋಪನ್‌ ನೀಡಿ ನಾಳೆ ಬನ್ನಿ ಎಂದು ಹೇಳಿ ಕಳುಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next