Advertisement

ಆಕ್ಸಿಜನ್‌: ಎಚ್ಚೆತ್ತ ಜಿಲ್ಲಾಡಳಿತ

03:17 PM May 06, 2021 | Team Udayavani |

ದೇವನಹಳ್ಳಿ: ಆಕ್ಸಿಜನ್‌ ಖಾಲಿಯಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ವೈದ್ಯರಿಂದಪಟ್ಟಣದ ಆಕಾಶ್‌ ಆಸ್ಪತ್ರೆ ಯಲ್ಲಿ ಜಿಲ್ಲಾಡಳಿತಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.ಪ್ರತಿ ದಿನ ಆಕಾಶ್‌ ಆಸ್ಪತ್ರೆಯಲ್ಲಿ 300ಜನರಿಗೆ 8 ಕೆ.ಎಲ್‌. ಆಕ್ಸಿಜನ್‌ ಅವಶ್ಯವಿದೆ.

Advertisement

ಮಂಗಳವಾರ ಮಧ್ಯರಾತ್ರಿ ಆಕಾಶ್‌ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಅಭಾವ ಉಂಟಾಗಿತ್ತು.ಆಸ್ಪತ್ರೆಯವರು ಆಕ್ಸಿಜನ್‌ ಕಂಪನಿಯವರಿಗೆಫೋನ್‌ ಮಾಡುತ್ತಿದ್ದರೂ ಯಾರೂ ರಿಸೀವ್‌ಮಾಡುತ್ತಿರಲಿಲ್ಲ. ಆಕ್ಸಿಜನ್‌ ಪ್ಲಂಟ್‌ನಮಾರ್ಕೆಟಿಂಗ್‌ ಸಿಬ್ಬಂದಿ ಫೋನ್‌ ಸ್ವಿಚ್‌ ಆಫ್ಮಾಡಿದ್ದರು. ಕೊನೆಗೆ ಜಿಲ್ಲಾಧಿಕಾರಿ ಮತ್ತುಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿಗಳಿಗೆಮಾಹಿತಿ ರವಾನೆ ಮಾಡಲಾಯಿತು.

ಕಂಪನಿಬಳಿಗೆ ತೆರಳಿದ ಪೊಲೀಸರು ಆಕ್ಸಿಜನ್‌ ಟ್ರಕ್‌ಗೆ ಲೋಡ್‌ ತುಂಬಿಸಲು ನೆರವಾದರು.ಸಮಯಕ್ಕೆ ಆಕ್ಸಿಜನ್‌ ಸಿಕ್ಕಿದ್ದರಿಂದರೋಗಿಗಳಿಗೆ ಆಕ್ಸಿಜನ್‌ ಸಿಕ್ಕಿತು. ರಾತ್ರಿಜಿಲ್ಲಾಧಿಕಾರಿಗಳು ಸ್ವಲ್ಪ ಯಾಮಾರಿದ್ದರೂಆಕಾಶ್‌ ಆಸ್ಪತ್ರೆ ಯಲ್ಲಿ ಆಕ್ಸಿಜನ್‌ ಇಲ್ಲದೆರೋಗಿಗಳು ಸಾವನ್ನಪ್ಪಬೇಕಾಗಿತ್ತು.

ಜಿಲ್ಲಾಧಿಕಾರಿಯಿಂದ ಕಂಪನಿಯವರಿಗೆ ತರಾಟೆ: ಆಕಾಶ್‌ ಆಸ್ಪತ್ರೆಗೆ 8 ಕೆ.ಎಲ್‌ಆಕ್ಸಿಜನ್‌ ಪ್ರತಿ ದಿನ ಅವಶ್ಯವಿದೆ. 5.8 ಕೆ ಎಲ್‌ಆಕ್ಸಿಜನ್‌ ತುಂಬಿಸಲಾಗಿತ್ತು. ಆದರೆ ಕಂಪನಿಯವರಿಗೆ ಲಿಕ್ವಿಡ್‌ ಬೇರೆ ಕಡೆಯಿಂದಬರುವುದು ತಡವಾಗಿದ್ದರಿಂದ ಟ್ರಕ್‌ತಡವಾಗಿದೆ. ಇನ್ನು ಮುಂದೆ ಈ ರೀತಿಆಗದಂತೆ ಎಚ್ಚರವಹಿಸಬೇಕು ಎಂದುಜಿಲ್ಲಾಧಿಕಾರಿ ಕೆ ಶ್ರೀನಿವಾಸ್‌ ಕಂಪನಿಯವರಿಗೆತಾಕೀತು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next