Advertisement

ವಿಯವಾಕಿ ಮಾದರಿ ಕಿರು ಅರಣ್ಯ ನಿರ್ಮಾಣಕ್ಕೆ ಚಾಲನೆ

12:21 PM Oct 06, 2020 | Suhan S |

ದೊಡ್ಡಬಳ್ಳಾಪುರ: ಮಿತ್ರ ಫೌಂಡೇಷನ್‌ ಹಾಗೂ ಯುವ ಸಂಚಲನದ ಸಹಯೋಗದಲ್ಲಿ ತಾಲೂಕಿನ ಸೂಲುಕುಂಟೆ ಗ್ರಾಮದಲ್ಲಿ ರೈತ ಯುವರಾಜ್‌ ಅವರ ಕೃಷಿ ಭೂಮಿಯಲ್ಲಿ ವಿಯವಾಕಿ ಕಿರು ಅರಣ್ಯ ಬೆಳೆಸುವ ವನ ಮಿತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Advertisement

ಈ ಕುರಿತು ಮಾಹಿತಿ ನೀಡಿದ ಯುವ ಸಂಚಲನ ಅಧ್ಯಕ್ಷ ಚಿದಾನಂದ್‌, ಜಪಾನ್‌ ದೇಶದ ಮಿಯವಾಕಿಎಂಬ ಪರಿಸರ ತಜ್ಞ ನಗರ ಪ್ರದೇಶಗಳಲ್ಲಿ ಕಡಿಮೆ  ಜಾಗದಲ್ಲಿಕಿರು ಅರಣ್ಯ ಬೆಳೆಸುತ್ತಿದ್ದರು. ಅತ್ಯಲ್ಪ ಸ್ಥಳದಲ್ಲಿ ನಿರೀಕ್ಷೆಗೂ ಮೀರಿ ಗಿಡಗಳನ್ನು ಬೆಳೆಸಲಾಗಿತು. ಈಮಾದರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಇತರ ನಗರಗಳಿಗೂ ವ್ಯಾಪಿಸಿದ್ದು, ಕಿರು ಅರಣ್ಯ ನಿರ್ಮಾಣ ಹೆಚ್ಚಾದಂತೆ ವಿಯವಾಕಿ ವಿಧಾನ’ ಎಂದೇ ಕರೆಯಲಾಗುತ್ತಿದೆ ಎಂದು ತಿಳಿಸಿದರು.

ಜಪಾನ್‌ ದೇಶದಲ್ಲಿ ಸುನಾಮಿ ಮೊದಲಾಗಿ ಪ್ರವಾಹಗಳು ಎದುರಾದಾಗ ಮಣ್ಣಿನ ಸವಕಳಿಯಾಗಿ ಮಣ್ಣಿನ ಸತ್ವ ಕಡಿಮೆಯಾಗುತ್ತದೆ. ಉತ್ತಮ ಪರಿಸರಕ್ಕೆ ಅರಣ್ಯ ಅವಶ್ಯವಾಗಿದ್ದು, ಬೃಹತ್‌ ಅರಣ್ಯ ಬೆಳೆಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಆದರೆ ಮಿಯವಾಕಿ ಮಾದರಿಯಲ್ಲಿ ಕಡಿಮೆ ಅವಧಿಯಲ್ಲಿ ಅರಣ್ಯ ಬೆಳೆಸಬಹುದು ಎಂದರು.

ಪ್ರಸ್ತುತ ಸುಮಾರು 3 ಗುಂಟೆ ಜಮೀನಿನಲ್ಲಿ 91 ವಿವಿಧ ಜಾತಿಯ840 ಸಸಿಗಳನ್ನು ನಾಟಿ ಮಾಡಲಾಗಿದೆ. ಮಣ್ಣಿನ ಗುಣ ಪರಿಶೀಲನೆ ಮಾಡಿಕೊಂಡು ಭೂಮಿಗೆ ಕೊಟ್ಟಿಗೆ ಗೊಬ್ಬರ, ಹಸಿರು ಎಲೆ ಹಾಕಿ ಸಾವಯವ ಪದಾರ್ಥಗಳನ್ನು ಮಣ್ಣಿಗೆ ಸೇರಿಸುವ ಮೂಲಕ ಪೋಷಕಾಂಶಗಳ ಕೊರತೆ ನೀಗಿಸಲಾಗಿದೆ. 1 ಚದರ ಮೀಟರ್‌ ವ್ಯಾಪ್ತಿಯಲ್ಲಿ 3 ರಿಂದ 4 ಗುಂಡಿ ತೆಗೆದು ಗಿಡ ನೆಡಲಾಗಿದೆ. ಅತಿ ಎತ್ತರ ಬೆಳೆಯುವ, ಸಾಧಾರಣ ಎತ್ತರ ಬೆಳೆಯುವ ಹಾಗೂ ಪೊದೆ ರೀತಿ ಬೆಳೆಯುವ ಸಸಿಗಳನ್ನು ವಿಂಗಡಿಸಿ ನಾಟಿ ಮಾಡಲಾಗಿದೆ. 2 ವರ್ಷ ನೀರು ಹಾಕಿ ಗಿಡಗಳನ್ನು ಪೋಷಿಸಿದರೆ, ಸಾಕು ನಮಗೇ ಗೊತ್ತಿಲ್ಲದಂತೆ ಪುಟ್ಟದೊಂದು ಅರಣ್ಯ ನಿರ್ಮಾಣವಾಗುತ್ತದೆ ಎಂದರು.

ಮಿತ್ರ ಫೌಂಡೇಷನ್‌ನ ಯುವರಾಜ್‌ ಮಾಹಿತಿ ನೀಡಿ, ನಮ್ಮಲ್ಲಿ ಅರಣ್ಯ ಎಂದರೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವುದು ಎನ್ನುವ ಕಲ್ಪನೆ ಇದೆ. ಆದರೆ ನಮ್ಮ ಕೃಷಿ ಜಮೀನಿನಲ್ಲೂ ವಿಯವಾಕಿಮಾದರಿಯಲ್ಲಿ ಕಿರು ಅರಣ್ಯ ಬೆಳೆಸುವುದರಿಂದ ನಮ್ಮ ಜಮೀನಿನಲ್ಲಿ ಬೆಳೆಯುವ ಇತರೆ ಬೆಳೆಗಳಿಗೆ ಬರುವ ಕೀಟಗಳ ಹಾವಳಿ ನಿಯಂತ್ರಣವಾಗುತ್ತದೆ ಎಂದರು.

Advertisement

ಕಿರು ಅರಣ್ಯದಲ್ಲಿ ವಿವಿಧ ಬಗೆಯ ಔಷಧಿ ಗುಣವನ್ನು ಹೊಂದಿರುವ ಸಸಿಗಳು ಇರುವುದರಿಂದ ಬಿಡುವಿನ ವೇಳೆಯಲ್ಲಿ ಕುಳಿತು ಕಾಲ ಕಳೆಯುವುದರಿಂದ ನಮ್ಮ ಆರೋಗ್ಯವು ಸುಧಾರಣೆಯಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next