Advertisement
ಎರಡು ಸತ್ಯಗಳು ನಮ್ಮ ಮುಂದಿವೆ. ಕಳೆದ ಮೂರು ತಿಂಗಳಿನಿಂದ ನಾವು ಕಾಣುತ್ತಿರುವಂತೆ ರಾಜಕೀಯ ಪಕ್ಷಗಳಿಗೆ ಜನರೇ ಜನಾರ್ದನರು. “ಬಹುಮತ ಕೊಡದಿದ್ದರೆ ನಾವು ಜನರ ಮುಂದೆ ಹೋಗುತ್ತೇವೆ’. “ನಾವು ಸಂಗಾತಿಗಳಾಗುತ್ತಿರುವುದು ಜನರ ಆದೇಶದ ಪಾಲನೆಗೆ’. “ಈ ನಾಡಿನ ಜನರ, ರೈತರ ಸಂಕಷ್ಟ ನೋಡಲಾಗುವುದಿಲ್ಲ. ಸರ್ವತೋಮುಖ ಅಭಿವೃದ್ಧಿಗೆ ಪಣ ತೊಡುತ್ತೇವೆ’.
Related Articles
Advertisement
ಜನಹಿತ ಎಲ್ಲಿದೆ?: ಬೆಸ್ಕಾಂನ ಉದಾಹರಣೆಯನ್ನು ತೆಗೆದುಕೊಂಡರೆ, ಏಪ್ರಿಲ್ ಮೂರರಂದು ಅದು ಹೊರಡಿಸಿರುವ ಸುತ್ತೋಲೆ(ಬೆಸ್ಕಾಂ/ಬಿಸಿ-51/2018-19/ಸಿವೈಎಸ್-01) ಪ್ರಕಾರ, ರೂಫ್ಟಾಪ್ ಹಾಗೂ ನೆಲದ ಮೇಲೆ ಅಳವಡಿಸುವ ಸೋಲಾರ್ ಪ್ರಾಜೆಕ್ಟ್ ಅರ್ಜಿಗಳ ವಿಚಾರದಲ್ಲಿ ಏಪ್ರಿಲ್ ಒಂದರಿಂದ ಒಪ್ಪಂದ ಮಾಡಿಕೊಳ್ಳದಂತೆ ಎಲ್ಲ ಕೆಳಗಿನ ಸ್ಥಾನಿಕ ಅಧಿಕಾರಿಗಳಿಗೆ ಸೂಚಿಸಿದೆ.
ಹಿನ್ನೆಲೆ ಇಷ್ಟೇ: ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಪ್ರಾಧಿಕಾರ-ಕೆಇಆರ್‌ಸಿ, ಫೆಬ್ರವರಿ 2ರಂದು ಸೋಲಾರ್ ಯೋಜನೆಗಳ ಕುರಿತ ಬೆಲೆ ಪಟ್ಟಿ ಹಾಗೂ ನಿಯಮಗಳ ಕುರಿತು ಮಾರ್ಪಾಡುಗಳಿಗೆ ಕರಡು ನಿಯಮಗಳನ್ನು ಚರ್ಚೆಗೆ ಇಟ್ಟಿದೆ. ಅದರಲ್ಲಿನ ಎರಡು ಮುಖ್ಯ ಸಲಹೆಗಳು ವ್ಯವಸ್ಥೆಯನ್ನು ದೊಡ್ಡ ಪ್ರಮಾಣದಲ್ಲಿ ಪ್ರಭಾವಿಸುತ್ತವೆ.
ಗ್ರಾಹಕನ ಮಂಜೂರಾದ ಲೋಡ್ ಅಥವಾ ಒಪ್ಪಂದದ ಶೇ. 75ರ ಸಾಮರ್ಥ್ಯದ ಸೋಲಾರ್ ವಿದ್ಯುತ್ ಉತ್ಪಾದನೆಗೆ ಮಾತ್ರ ಅವಕಾಶ ಕೊಡಬೇಕು ಎಂಬುದು ಒಂದು. ಈಗ ಸ್ಯಾಂಕ್ಷನ್ ಲೋಡ್‌ನಷ್ಟೇ ಮಾರಾಟಕ್ಕೂ ಅವಕಾಶವಿದೆ. ಒಂದು ಕಿ.ವ್ಯಾನಿಂದ ಸಾವಿರ ಕಿ.ವ್ಯಾ ಸೋಲಾರ್ ವಿದ್ಯುತ್ ಯೂನಿಟ್‌ಗೆ 3.27 ರೂ. ದರ ನಿಗದಿಪಡಿಸಬಹುದೇ ಎಂಬುದು ಅದರ ಮುಂದಿರುವ ವಿಚಾರಗಳು.
ಠಳಾಯಿಸುವ ರಾಜಕಾರಣಿಗಳಿಗೆ ಬುತ್ತಿ!: 2016ರ ಮೇ ಎರಡರಲ್ಲಿ ಕೆಇಆರ್‌ಸಿ ನೀಡಿದ ಆದೇಶದಂತೆ ನಡೆಯುತ್ತಿದ್ದ ಸೋಲಾರ್ ಪವರ್ ಜನರೇಶನ್ ಒಪ್ಪಂದಗಳನ್ನು ಮಾರ್ಚ್ 31ಕ್ಕೆ ಅನ್ವಯವಾಗುವಂತೆ ಎಲ್ಲ ಎಸ್ಕಾಂಗಳು ನಿಲ್ಲಿಸಿವೆ. ನಿಗದಿಪಡಿಸುತ್ತಿರುವ ದರವನ್ನು ಗಮನಿಸಿದರೆ ಭವಿಷ್ಯದಲ್ಲಿ ಯಾವ ಗ್ರಾಹಕರೂ ಈ ದರಕ್ಕೆ ಪಿಪಿಎ ಮಾಡಿಕೊಳ್ಳುವುದು ಕೂಡ ಅಸಂಭವವೇ.
ಅದರಲ್ಲೂ ಈ ದರ 25 ವರ್ಷಗಳ ಒಪ್ಪಂದದ ಸಂಪೂರ್ಣ ಅವಧಿಗೆ ಅನ್ವಯಿಸುತ್ತದೆ ಎಂತಾದರೆ ಇಡೀ ಯೋಜನೆಯತ್ತ ಒಬ್ಬ ಗ್ರಾಹಕನೂ ತಲೆಹಾಕಲಾರ. ದುರಂತವೆಂದರೆ, ಜನರನ್ನು ದೊಡ್ಡ ಪ್ರಮಾಣದಲ್ಲಿ ಪ್ರಭಾವಿಸುವ ಇಂತಹ ವಿಚಾರಗಳಲ್ಲಿ ತಲೆ ಕೆಡಿಸಿಕೊಳ್ಳಲು ಮೊನ್ನೆ ಆಯ್ಕೆಯಾದ ಶಾಸಕ ವೃಂದಕ್ಕೆ ಅವಕಾಶವಿಲ್ಲ! ಹೀಗೂ ತರ್ಕಿಸಬಹುದು, ಪಾವಗಡದ ಸೋಲಾರ್ ವಿದ್ಯುತ್ ಪಾರ್ಕ್‌ನಲ್ಲಿ ರೈತರ ಹೆಸರಿನಲ್ಲಿ ಬಹುಪಾಲು ಗುತ್ತಿಗೆಗಳನ್ನು ಗಿಟ್ಟಿಸಿಕೊಂಡಿದ್ದು ವಿಧಾನಸೌಧದಲ್ಲಿ ಠಳಾಯಿಸುವ ರಾಜಕಾರಣಿಗಳು.
9 ರೂ. ಯೂನಿಟ್ ದರ! ಇತ್ತ ಪ್ರತಿಷ್ಟಿತರ ಶಾಲೆಗಳು, ಸಂಕೀರ್ಣಗಳ ಮೇಲಿನ ರೂಫ್ಟಾಪ್‌ಗ್ಳ ಸಂಬಂಧವೂ 8-9 ರೂ. ಯೂನಿಟ್ ಮಾರಾಟದ ಒಪ್ಪಂದ 25 ವರ್ಷಕ್ಕಾಗಿದೆ. ಇಲ್ಲೂ ಹಿನ್ನೆಲೆಯಲ್ಲಿರುವವರು ನಮ್ಮನ್ನಾಳುವವರೇ. ಅವರು ಸುರಕ್ಷಿತವಾದ ಮೇಲೆ ಈ ತರಹದ ಯೋಜನೆಗಳಿಂದ ಎಸ್ಕಾಂಗಳಿಗೆ ಮಾರಕವಾಗುತ್ತದೆ ಎಂಬ ಅಭಿಪ್ರಾಯ ಬಂದಿದೆ!
ಮತ್ತೆ ಮೂರ್ಖರಾದುದು ಜನಸಾಮಾನ್ಯರೇ. ಎಸ್ಕಾಂಗಳ ಬೀಳಬಹುದಾದ ಆದೇಶದ ಅರಿವಿಲ್ಲದೆ ತಮ್ಮ ಸ್ಯಾಂಕ್ಷನ್ ಲೋಡ್‌ನ್ನು ಹೆಚ್ಚು ಮಾಡಿಸಿಕೊಂಡವರು, ಸೋಲಾರ್ ಹಾಕಲು ಅಡ್ವಾನ್ಸ್ ಕೊಟ್ಟು ಪಿಪಿಎಗೆ ಎಸ್ಕಾಂಗೆ ಅರ್ಜಿ ಸಲ್ಲಿಸಿದವರು, ಅಗತ್ಯ ಪರಿಕರಗಳನ್ನು ಖರೀದಿಸಿದವರು….
ಬೇಸ್ತು ಬಿದ್ದಿದ್ದಾರೆ. ವಿಧಾನಸೌಧದಲ್ಲಿ, ಸುದ್ದಿಗೋಷ್ಠಿಗಳಲ್ಲಿ ಕೇಳುತ್ತಲೇ ಇದ್ದೇವೆ. ಜನ ಸ್ವಾವಲಂಬಿಗಳಾಗಬೇಕು. ಜನರ ಉತ್ಪಾದಕ ಶಕ್ತಿ ಹೆಚ್ಚಬೇಕು. ಮುಂದಿನ ಐದು ವರ್ಷಗಳಲ್ಲಿ ಊಹಿಸದ ಮಾದರಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತೇವೆ ಎಂದು ಹೇಳಿದ್ದಕ್ಕೆ ನಾವು ತಲೆದೂಗುತ್ತಲೇ ಇದ್ದೇವೆ. ಛೇ!
* ಗುರು ಸಾಗರ