Advertisement
ಪಕ್ಷದ ಲೆಕ್ಕಾಚಾರದಲ್ಲಿ ತುಸು ವ್ಯತ್ಯಯವಾಗಿರಬಹುದು. ಹಾಗೆಂದು ಆಶಾಭಾವನೆ ಕಳೆದುಕೊಂಡಿಲ್ಲ. ಸದ್ಯದ ಬೆಳವಣಿಗೆ ಆಧರಿಸಿ ಕಾದು ನೋಡುವ ತಂತ್ರ ಅನುಸರಿಸಲಾಗುವುದು. ಎಲ್ಲ ರಾಜಕೀಯ ಬೆಳವಣಿಗೆಯನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ, ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್, ಜೆಡಿಎಸ್ ಬಿಟ್ಟಿವೆ ಎಂಬುದು ಖಾತರಿಯಾದ ಬಳಿಕ ಬಿಜೆಪಿ ಶಾಸಕರು ಕ್ಷೇತ್ರಗಳಿಗೆ ತೆರಳಲಿದ್ದಾರೆ. ಸದ್ಯ ಕೆಲ ದಿನದ ಮಟ್ಟಿಗೆ ಗುರುಗ್ರಾಮದಲ್ಲೇ ವಾಸ್ತವ್ಯ ಮುಂದುವರಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರೊಬ್ಬರು ತಿಳಿಸಿದರು.
Related Articles
Advertisement
ಒಟ್ಟಾರೆ ಪಕ್ಷದ ಪ್ರಯತ್ನಕ್ಕೆ ಉಂಟಾದ ಹಿನ್ನಡೆ ಬಗ್ಗೆ ತುಸು ಕಸಿವಿಸಿ ಉಂಟು ಮಾಡಿದ್ದರೂ ಆಶಾ ಭಾವನೆ ಕುಗ್ಗಿಲ್ಲ. ರಾಜಕೀಯ ಬೆಳವಣಿಗೆ ಆಧರಿಸಿ ಮುಂದಿನ ದಾಳ ಉರುಳಿಸಲು ಬಿಜೆಪಿ ಸಿದ್ಧತೆ ನೆಡಸಿದೆ.
ಸಿಹಿ ಸುದ್ದಿ ಸಿಗಲಿಲ್ಲಪಕ್ಷೇತರ ಶಾಸಕರು ಬಿಜೆಪಿ ಬೆಂಬಲಿಸಿರುವ ವಿಚಾರವನ್ನು ಮಂಗಳವಾರ ಪ್ರಕಟಿಸಿ ಮತ್ತೂಂದು ಸಿಹಿ ಸುದ್ದಿಯನ್ನು ಸದ್ಯದಲ್ಲೇ ನೀಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಆದರೆ ಬುಧವಾರ ಆ ರೀತಿಯ ಆಶಾದಾಯಕ ವಿಚಾರವನ್ನೇನೂ ಅವರು ಪ್ರಸ್ತಾಪಿಸಲಿಲ್ಲ ಎನ್ನಲಾಗಿದೆ. ತುಮಕೂರಿಗೆ ತೆರಳಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ವಿ.ಸೋಮಣ್ಣ ಬುಧವಾರ ಬೆಳಗ್ಗೆ ಗುರುಗ್ರಾಮಕ್ಕೆ ಹಿಂತಿರುಗಿದರು. ಸಂಜೆ ಹೊತ್ತಿಗೆ ಬಿ.ಎಸ್. ಯಡಿಯೂರಪ ³ ಅವರು ರೆಸಾರ್ಟ್ ನಿಂದ ದೆಹಲಿಗೆ ತೆರಳಿ ಬಳಿಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು ಎನ್ನಲಾಗಿದೆ. ಹಿನ್ನಡೆಗೆ ಕಾರಣ?
ಕಾಂಗ್ರೆಸ್‌ನಿಂದ ಬಿಜೆಪಿಗೆ ಬರುವ ನಿರೀಕ್ಷೆಯಲ್ಲಿದ್ದವರಲ್ಲಿ ಬಹಳಷ್ಟು ಮಂದಿ ಕಳೆದಚುನಾವಣೆಯಲ್ಲಿ ಬಹಳ ಕಡಿಮೆ ಅಂತರದಲ್ಲಿ ಜಯ ಗಳಿಸಿದವರಾಗಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಿದರೆ ಕಾಂಗ್ರೆಸ್, ಜೆಡಿಎಸ್ ಹೋರಾಟದ ಮುಂದೆ ಗೆಲ್ಲಬಹುದೇ ಎಂಬ ಅನುಮಾನ ಕಾಡಿದೆ. ಜತೆಗೆ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕುಸಿಯುವಂತೆ ಮಾಡುವುದಾಗಿ ಹೇಳಿದ್ದ ಬಿಜೆಪಿ ನಾಯಕರು ಅಷ್ಟು ಸಂಖ್ಯೆಯ ಶಾಸಕರು ಜತೆಗಿರುವ ಬಗ್ಗೆ ಸಾಬೀತು ಸಹ ಮಾಡಲಿಲ್ಲ. ಹೀಗಾಗಿ, ಬರಲು ಮುಂದಾಗಿದ್ದವರು ಹಿಂದೇಟು ಹಾಕಿದರು ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬರುತ್ತಿವೆ. ಜತೆಗೆ ರಾಜ್ಯ ಬಿಜೆಪಿ ನಾಯಕರು ಆಪರೇಷನ್ ಕಮಲ ವಿಚಾರದಲ್ಲಿ ಪೂರ್ವ ತಯಾರಿ ಮಾಡಿಕೊಳ್ಳುವಲ್ಲಿಯೂ ಎಡವಿದರು. ಮತ್ತಷ್ಟು ಎಚ್ಚರಿಕೆ ಹಾಗೂ ಖಚಿತತೆ ಪಡಿಸಿಕೊಳ್ಳಬೇಕಿತ್ತು ಎಂದು ಹೇಳಲಾಗುತ್ತಿದೆ.