ಬೆಂಗಳೂರು: ದೇಶದ ಮೂರನೇ ಅತಿ ದೊಡ್ಡ ಪ್ಯಾಕೇಜ್ಡ್ ಚಹಾ ಕಂಪನಿ “ವಾಘ್ ಬಕ್ರಿ ಟೀ ಗ್ರೂಪ್’ ನಗರದಲ್ಲಿ ತನ್ನ ಪ್ರೀಮಿಯಂ ಶ್ರೇಣಿಯ ಚಹಾ ಪುಡಿ ಬಿಡುಗಡೆ ಮಾಡಿದೆ. ಗುರುವಾರ ಖಾಸಗಿ ಹೋಟೆಲ್ ಒಂದರಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಸೇಶ್ ದೇಸಾಯಿ “ವಾಘ್ ಬಕ್ರಿ’ ಚಹಾವನ್ನು ಮಾರುಕಟ್ಟೆಗೆ ಪರಿಚಯಿಸಿದರು.
ನಂತರ ಮಾತನಾಡಿದ ಅವರು, “ನಾನು ಇಲ್ಲಿನ ಆರ್‌ವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದು, ಬೆಂಗಳೂರಿನ ವಾತಾವರಣ ಹಾಗೂ ಇಲ್ಲಿನ ಜನರ ಅಭಿರುಚಿಗಳನ್ನು ಬಲ್ಲೆ. ಚಹಾ ಬಳಕೆಯ ಪ್ರಮುಖ ಸ್ಥಳಗಳಲ್ಲಿ ಬೆಂಗಳೂರು ಕೂಡ ಒಂದು. ಈ ಹಿನ್ನೆಲೆಯಲ್ಲಿ ವಾಘ್ ಬಕ್ರಿ ಟೀಯನ್ನು ನಗರಕ್ಕೆ ಪರಿಚಯಿಸುತ್ತಿದ್ದೇನೆ,’ ಎಂದರು.
ಫ್ಯಾಮಿಲಿ ಲೆಗೆಸ್ಸಿ ಬ್ಯುಸಿನೆಸ್ ಪ್ರಶಸ್ತಿ: 1892ರಲ್ಲಿ ಸ್ಥಾಪಿಸಲ್ಪಟ್ಟ ವಾಘ್ ಬಕ್ರಿ ಟೀ ಸಂಸ್ಥೆ, 120 ವರ್ಷಗಳ ಸೇವೆ ಸಲ್ಲಿಸುವ ಮೂಲಕ ಬದ್ಧತೆ ಮತ್ತು ಅನುಭವ ಹೊಂದಿದೆ. ಇದರಿಂದಾಗಿ ಇತೀ¤ಚೆಗೆ ಸಂಸ್ಥೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ “ಫ್ಯಾಮಿಲಿ ಲೆಗೆಸ್ಸಿ ಬ್ಯುಸಿನೆಸ್ ಪ್ರಶಸ್ತಿ’ ನೀಡಿದೆ ಎಂದು ದೇಸಾಯಿ ತಿಳಿಸಿದರು.
ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಪರಾಗ್ ದೇಸಾಯಿ, “ವಾಘ್ ಬಕ್ರಿ ಜಗತ್ತಿನಾದ್ಯಂತ ಹೊಂದಿರುವ 70 ದಶಲಕ್ಷ ಗ್ರಾಹಕರನ್ನು ಹೊಂದಿ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ. 30ಕ್ಕೂ ಹೆಚ್ಚು ದೇಶಗಳಿಗೆ ಚಹಾ ರಫ್ತು ಮಾಡಲಾಗುತ್ತಿದೆ. 45 ದಶಲಕ್ಷ ಕೆ.ಜಿ.ಗೂ ಅಧಿಕ ಚಹಾ ಪುಡಿಯನ್ನು ಪೂರೈಕೆ ಮಾಡುತ್ತಿದ್ದೇವೆ.
ಭಾರತದಲ್ಲಿ 5 ಸ್ಟಾರ್ ಟೀ ಲಾಂಜ್ ಅನ್ನು ಪರಿಚಯಿಸಿದ್ದು ನಾವು. ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೀಮಿಯಂ ಬ್ರಾಂಡ್ ಚಹಾವನ್ನು ಬಿಡುಗಡೆ ಮಾಡಿರುವುದು ಸಂತಸತಂದಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪರಿಚಯಿಸುವ ಇಚ್ಛೆಯೂ ಇದೆ. ಗುಜರಾತ್‌ನಿಂದ ಪ್ರಾರಂಭಗೊಂಡ ವಾಘ್ ಬಕ್ರಿ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ಛತೀಸ್‌ಗಡ, ಗೋವಾ ಹಾಗೂ ಹೈದರಾಬಾದ್‌ಗೆ ವಿಸ್ತರಿಸಿದೆ.
ಇತೀಚೆಗೆ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಇತರ ಪ್ರಾಂತ್ಯಗಳಲ್ಲಿ ಬಿಡುಗಡೆ ಕೂಡ ಮಾಡಲಾಯಿತು. ಒಟ್ಟಾರೆ, ದೇಶದ ಚಹಾ ಪುಡಿ ಮಾರುಕಟ್ಟೆಯ ಪ್ರತಿಶತ 7ರಷ್ಟು ಪಾಲು ವಾಘ್ ಬಕ್ರಿಯದಾಗಿದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಕಂಪನಿಯ ಅಧಿಕಾರಿಗಳಾದ ವಿಜಯ್ ಲಹೋಟಿ, ಯೋಗೇಶ್ ಶಿಂಧೆ ಇತರರಿದ್ದರು.