Advertisement

ವೇತನ ಬಿಡುಗಡೆಗೆ ಉಪನ್ಯಾಸಕರ ಅಗ್ರಹ

12:37 PM Jun 09, 2017 | Team Udayavani |

ಬೆಂಗಳೂರು: ತಡೆ ಹಿಡಿದಿರುವ ಉಪನ್ಯಾಸಕರ ವೇತನವನ್ನು ಕೂಡಲೇ ಬಿಡುಗಡೆ ಮಾಡುವಂತೆ ನೊಂದ ಉಪನ್ಯಾಸಕರು, ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದ್ದಾರೆ. 

Advertisement

ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ಗುರುವಾರ ನಗರದ ಮಲ್ಲೇಶ್ವರದಲ್ಲಿರುವ ಪಿಯು ಇಲಾಖೆಯ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಉಪನ್ಯಾಸಕರು, ಕಾರ್ಯಭಾರ ಸಮಸ್ಯೆಯಿಂದ ತಡೆಹಿಡಿದರುವ ವೇತನವನ್ನು ಬಿಡುಗಡೆ ಮಾಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಕಾರ್ಯಾಭಾರದ ಕೊರತೆಯಿಂದ  ಮರಾಠಿ ಉಪನ್ಯಾಸಕ ರಮೇಶ್‌ ಅವರಿಗೆ ಕಳೆದ 11 ವರ್ಷ ವೇತನ ತಡೆ ಹಿಡಿಯಲಾಗಿದೆ. ಕೂಡಲೇ ಆ ವೇತನವನ್ನು ಬಿಡಗಡೆ ಮಾಡಬೇಕು.  ತನವಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ರಮೇಶ್‌, ಕುಟುಂಬ ಸದಸ್ಯರೊಂದಿಗೆ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ರಮೇಶ್‌ ಅವರ ವೇತನ ಬಿಡುಗಡೆಗೆ ಆದೇಶಿಸಬೇಕು ಎಂದು ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next