Advertisement

ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಳ ಸಾಧ್ಯವೇ: ಹೈಕೋರ್ಟ್‌

06:15 AM Jun 19, 2018 | Team Udayavani |

ಬೆಂಗಳೂರು: ಬಿಸಿಯೂಟ ಯೋಜನೆಯ ಅಡುಗೆ ತಯಾರಕರಿಗೆ ಸದ್ಯ ನೀಡಲಾಗುತ್ತಿರುವ ಮಾಸಿಕ ವೇತನವನ್ನು
ಹೆಚ್ಚಿಸಲು ಸಾಧ್ಯವೇ ಎಂಬ ಬಗ್ಗೆ ಆರು ವಾರಗಳಲ್ಲಿ ನಿಲುವು ಸ್ಪಷ್ಟಪಡಿಸುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ
ಸೋಮವಾರ ಸೂಚನೆ ನೀಡಿದೆ.

Advertisement

ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ನಿಗದಿ ಸೇರಿ ಇತರ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರಕ್ಕೆ
ನಿರ್ದೇಶಿಸುವಂತೆ ಕೋರಿ ಆಲ… ಇಂಡಿಯಾ ಮಹಿಳಾ ಎಂಪವರ್‌ ಮೆಂಟ್‌ ಪಾರ್ಟಿಯ ಅಧ್ಯಕ್ಷೆ ಡಾ. ನೌಹೀರಾ ಶೇಕ್‌ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಅವರ ನೇತೃತ್ವದ ಪೀಠ, ಬಿಸಿಯೂಟ ಯೋಜನೆಯ ಅಡುಗೆ ತಯಾರಕರಿಗೆ ಸದ್ಯ ನೀಡಲಾಗುತ್ತಿರುವ ಮಾಸಿಕ 2,700 ರೂ.ಗಳನ್ನು ಹೆಚ್ಚಿಸಲು ಸಾಧ್ಯವೇ ಎಂಬ ಬಗ್ಗೆ ನಿಲುವು ಸ್ಪಷ್ಟಪಡಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ, ಬಿಸಿಯೂಟ ನೌಕರರ ಊಟಕ್ಕೆ ಅಗತ್ಯವಿರುವ ವೇತನವನ್ನು ನೀಡದಿದ್ದರೆ ಹೇಗೆ ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸರ್ಕಾರಿ ವಕೀಲರು ಬಿಸಿಯೂಟ ತಯಾರಿಕರಿಗೆ ಮಾಸಿಕ 2,700 ರೂ. ಹಾಗೂ ಸಹಾಯಕರಿಗೆ 2,600 ರೂ.ನೀಡಲಾಗುತ್ತಿದೆ ಎಂದರು.

ಇದರಿಂದ ಅಸಮಾಧಾನಗೊಂಡ ಮುಖ್ಯ ನ್ಯಾಯಮೂರ್ತಿಗಳು,ಈಗಿನ ಕಾಲದಲ್ಲಿ 2,700 ರೂ. ಗಳಲ್ಲಿ ಜೀವನ ನಡೆಸಲು ಸಾಧ್ಯವೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next