Advertisement

ಕ್ವಾರಂಟೈನ್‌: ಬೆಳಗೇರಾ ತಾಂಡಾ ನಿವಾಸಿಗಳ ಬಿಡುಗಡೆ

03:38 PM May 22, 2020 | Naveen |

ವಾಡಿ: ಮಹಾರಾಷ್ಟ್ರದಿಂದ ಆಗಮಿಸಿ ನಾಗಾವಿ ಹಬ್‌ ಕಟ್ಟಡದಲ್ಲಿ ಕ್ವಾರಂಟೈನ್‌ ಆಗಿದ್ದ ಬೆಳಗೇರಾ ತಾಂಡಾದ 45 ಜನ ವಲಸೆ ಕಾರ್ಮಿಕರನ್ನು ಹಾಗೂ ಚಿತ್ತಾಪುರ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದಲ್ಲಿ ಕ್ವಾರಂಟೈನ್‌ ಆಗಿದ್ದ 14 (ತಬ್ಲೀಕಿ) ಜನರನ್ನು ಗುರುವಾರ ಬಿಡುಗಡೆಗೊಳಿಸಲಾಗಿದೆ.

Advertisement

ಇವರೆಲ್ಲರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ನೆಗೆಟಿವ್‌ ವರದಿ ಬಂದಿದ್ದರಿಂದ ಮುಂದಿನ 14 ದಿನಗಳ ವರೆಗೆ ಹೋಮ್‌ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ. ಅಲ್ಲದೆ ಕೊಂಚೂರು ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಆಶ್ರಯ ಪಡೆದಿರುವ ಮಹಾರಾಷ್ಟ್ರದ 200 ಜನ ಕ್ವಾರಂಟೈನ್‌ಗಳ ಗಂಟು ದ್ರವ ಪಡೆದು ಕೋವಿಡ್ ಪರೀಕ್ಷೆಗೆ ವರದಿ ಕಳುಹಿಸಲಾಗಿದೆ.

ನೆಗೆಟಿವ್‌ ವರದಿ ಬಂದವರನ್ನು ಹೋಮ್‌ ಕ್ವಾರಂಟೈನ್‌ ಆದೇಶಿಸಿ ಹಂತ-ಹಂತವಾಗಿ ಬಿಡುಗಡೆಗೊಳಿಸುತ್ತೇವೆ. ಸೋಂಕು ದೃಢಪಟ್ಟವರಿಗೆ ಕಲಬುರಗಿ ನಗರದ ಇಎಸ್‌ಐಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸಲಾಗುತ್ತದೆ ಎಂದು ತಾಲೂಕು ವೈದ್ಯಾಧಿಕಾರಿ ಸುರೇಶ ಮೇಕಿನ್‌ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next