Advertisement

ವಾಡಿ ಬಯಲು ಶೌಚ ಮುಕ್ತ ಪಟ್ಟಣ ಘೋಷಣೆ

07:37 PM Mar 14, 2022 | Team Udayavani |

ವಾಡಿ: ಪಟ್ಟಣದಲ್ಲಿ ಸ್ವಚ್ಚ ಭಾರತ ಯೋಜನೆ ಸಂಪೂರ್ಣ ಯಶಸ್ವಿಯಾಗಿದ್ದು, ಪುರಸಭೆ ವ್ಯಾಪ್ತಿಯ ಪ್ರದೇಶವನ್ನು ಒಡಿಎಫ್ ಪ್ಲಸ್ (ಬಯಲು ಶೌಚ ಮುಕ್ತ) ಎಂದು ಸ್ವಯಂ ಘೋಷಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಡಾ.ಚಿದಾನಂದ ಸ್ವಾಮಿ ಪ್ರಕಟಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳ ಮನೆಗಳನ್ನು ಸರ್ವೆ ಮಾಡುವ ಮೂಲಕ ವೈಯಕ್ತಿಕ ಚೌಚಾಲಯ ಹೊಂದಿರದ ಕುಟುಂಬಗಳನ್ನು ಗುರುತಿಸಲಾಗಿದೆ. ಸ್ವಚ್ಚ ಭಾರತ ಯೋಜನೆಯಡಿ ಸರ್ಕಾರದ ಸುತ್ತೋಲೆಯಂತೆ ಸಹಾಯಧನ ಬಿಡುಗೆ ಮಾಡಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಜಾಗದ ಕೊರತೆ ಎದುರಿಸಿದ ಕುಟುಂಬಗಳಿಗಾಗಿ ಸಮುದಾಯ ಶೌಚಾಲಯ ನಿರ್ಮಿಸಲಾಗಿದೆ. ಅಲ್ಲದೆ ಪಟ್ಟಣಕ್ಕೆ ಬಂದು ಹೋಗುವ ಸಾರ್ವಜನಿಕರಿಗಾಗಿ ಮತ್ತು ವ್ಯಾಪಾರಿಗಳಿಗಾಗಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿ ಶಾಲೆ, ಕಾಲೇಜು ಆಡಳಿತ ಮಂಡಳಿಗಳಿಂದ, ವಿದ್ಯಾರ್ಥಿಗಳು, ಶಿಕ್ಷಕರು, ಎನ್‌ಜಿಒ, ಎಸ್‌ಎಚ್‌ಜಿಗಳಿಂದ ಕಡ್ಡಾಯವಾಗಿ ಬಯಲು ಶೌಚ ಮುಕ್ತ ಕುರಿತು ಘೋಷಣಾ ಪತ್ರ ಪಡೆದುಕೊಳ್ಳಲಾಗಿದೆ. ಪಟ್ಟಣದ ಪುರಸಭೆ ವ್ಯಾಪ್ತಿಯ ಪ್ರದೇಶವನ್ನು ಬಯಲು ಶೌಚ ಮುಕ್ತ (ಓಡಿಎಫ್ ಪ್ಲಸ್) ಎಂದು ಸ್ವಯಂ ಘೋಷಿಸಿ ನಿರ್ಣಯ ಕೈಗೊಳ್ಳಲಾಗಿದೆ.

ಈ ಕುರಿತು ಸಾರ್ವಜನಿಕರು ಬಯಲು ಶೌಚ ಬಳಕೆಗೆ ಅವಕಾಶ ನೀಡದೆ ನೈರ್ಮಲ್ಯ ವ್ಯವಸ್ಥೆ ಕಾಪಾಡುವ ಮೂಲಕ ಪುರಸಭೆಯೊಂದಿಗೆ ಸಹಕರಿಸಬೇಕು ಎಂದು ಮುಖ್ಯಾಧಿಕಾರಿ ಡಾ.ಚಿದಾನಂದ ಸ್ವಾಮಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next