Advertisement

ಒಡೆಯರ್‌ ಪ್ರತಿಮೆಗೆ ಪುಷ್ಪ ನಮನ

09:48 AM Jul 19, 2020 | Suhan S |

ಮೈಸೂರು: ಕೆಎಂಪಿಕೆ ಚಾರಿಟಬಲ್‌ ಟ್ರಸ್ಟ್ ಮೈಸೂರು ಸಂಸ್ಥಾನದ 25ನೇ ಮಹಾರಾಜ ಶ್ರೀ ಜಯ ಚಾಮರಾಜೇಂದ್ರ ಒಡೆಯರ್‌ 101ನೇ ಜಯಂತಿ ಅಂಗವಾಗಿ ಚಾಮರಾಜೇಂದ್ರ ವೃತ್ತದಲ್ಲಿ ರುವ ಒಡೆಯರ್‌ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಪ್ರತಿಮೆ ಕೆತ್ತಿದ ಶಿಲ್ಪಿ ಅರುಣ್‌ರನ್ನು ಸನ್ಮಾನಿಸಲಾಯಿತು.

Advertisement

ಬಿಜೆಪಿ ಮಹಿಳಾ ಮುಖಂಡೆ ಲಕ್ಷ್ಮೀದೇವಿ ಮಾತನಾಡಿ, ಸರ್ಧಾರ್‌ ವಲ್ಲಭಭಾಯಿ ಪಟೇಲರು 565 ರಾಜರ ಸಂಸ್ಥಾನಗಳನ್ನು ಏಕೀಕರಣ ಮಾಡಲು ಮನವಿ ಮಾಡಿದಾಗ ಮೊದಲು ಪ್ರಜಾಪ್ರಭುತ್ವಕ್ಕೆ ಸಹಕಾರ ಕೊಟ್ಟು ಬೆಂಬಲ ನೀಡಿದವರೇ ನಮ್ಮ ಜಯಚಾಮರಾಜೇಂದ್ರ ಒಡೆಯರ್‌ ಎಂಬುದು ಕನ್ನಡಿಗರಾದ ನಮಗೆ ಹೆಮ್ಮೆಯ ವಿಚಾರ. ಮೈಸೂರು ರಾಜ್ಯದ ಮೊದಲ ರಾಜ್ಯಪಾಲರಾಗಿ, ವಿಶ್ವಹಿಂದೂ ಪರಿಷತ್‌ ಪ್ರಥಮ ಅಧ್ಯಕ್ಷರಾಗಿದ್ದರು. ಭಾರತದಲ್ಲಿ ಮೈಸೂರು ಸಾಂಸ್ಕೃತಿಕ ಹಿರಿಮೆಯಾಗಿ ಗುರುತಿಸಿಕೊಂಡಿದೆ ಎಂದರೇ ಜಯ ಚಾಮ ರಾಜೇಂದ್ರ ಒಡೆಯರ್‌ ಮುಖ್ಯ ಕಾರಣ ಎಂದರು.

ಈ ವೇಳೆ ಪಾಲಿಕೆ ಮಾಜಿ ಸದಸ್ಯ ಪಾರ್ಥಸಾರಥಿ, ವಕೀಲರಾದ ಗೋಕುಲ್‌ ಗೋವರ್ಧನ್‌, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್‌, ಯುವ ಮುಖಂಡ ಅಜಯ್‌ ಶಾಸ್ತ್ರಿ, ಪ್ರಶಾಂತ್‌ ಭಾರ ದ್ವಾಜ್‌, ಗಗನ್‌, ಚಕ್ರಪಾಣಿ, ಮಧು, ಮೋಹನ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next