ಮುಂಬಯಿ: ರಾಮಸೇವಕ ಸಂಘ ಶ್ರೀ ರಾಮ ಮಂದಿರ ವಡಾಲದ ಕಲಾವಿದರಿಂದ ಕೊಂಕಣಿ ನಾಟಕದ ಮುಹೂರ್ತ ಕಾರ್ಯಕ್ರಮವು ವಡಾಲ ಶ್ರೀ ರಾಮ ಮಂದಿರದಲ್ಲಿ ನಡೆಯಿತು.
ವಿಶ್ವ ಕೊಂಕಣಿ ಕಲಾರತ್ನ ಬಿರುದಾಂಕಿತ ಕೊಂಕಣಿ ತ್ರಿವೇಣಿ ಕಲಾ ಸಂಗಮ ಮುಂಬಯಿ ಇದರ ಸಂಸ್ಥಾಪಕಾಧ್ಯಕ್ಷ, ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎ. ಜಿ. ಕಾಮತ್ ರಚಿಸಿ, ನಿರ್ದೇಶಿಸಿರುವ ಸರ್ವೇಜನ: ಕಾಂಚನಮಾಶ್ರಯಂತೆ ನಾಟಕದ 51 ನೇ ಪ್ರದರ್ಶನವು ಜಿಎಸ್‌ಬಿ ಸಮಾಜದ ಅತೀ ಪ್ರಾಚೀನ ಹಾಗೂ ಆದಿಮಠ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತಿ ಶ್ರೀಪಾಂದಗಳವರ ರಜತ ಮಹೋತ್ಸವ ಚಾತುರ್ಮಾಸ್ಯದ ಸಂದರ್ಭದಲ್ಲಿ ಗೋವಾದ ಕವಳೆ ಮಠದ ನೂತನ ವಿಠuಲ ರುಕ್ಮಿಣಿ ದೇವಸ್ಥಾನದಲ್ಲಿ ಪ್ರದರ್ಶನಗೊಳ್ಳಲಿದ್ದು, ಇದರ ಮುಹೂರ್ತವನ್ನು ವಿಶೇಷ ಪೂಜೆ ಸಲ್ಲಿಸಿ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಎಸ್‌ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ, ವಿಶ್ವಸ್ತ ನರಸಿಂಹ ಎನ್. ಪಾಲ್, ವಿಶ್ವಸ್ಥ ಶಾಂತಾರಾಮ ಭಟ್, ಹಿತೈಷಿಗಳು, ಕಲಾವಿದರು, ಮಾರ್ಗದರ್ಶಕರಾದ ಡಾ| ಚಂದ್ರಶೇಖರ್ ಶೆಣೈ, ರಾಮ ಸೇವಕ, ಸೇವಕಿಯರು ಉಪಸ್ಥಿತರಿದ್ದರು.
ವೇದಮೂರ್ತಿ ಗೋವಿಂದ ಆಚಾರ್ಯ ಅವರು ರಾಮದೇವರಿಗೆ ಆರತಿ ಬೆಳಗಿಸಿ, ಸಂಘಟಕರು, ಕಲಾವಿದರು, ನಿರ್ದೇಶಕರಿಗೆ ಪ್ರಸಾದ ವಿತರಿಸಿ ಶುಭಹಾರೈಸಿದರು. ಲಿಮ್ಕಾ ಬುಕ್ ಆಫ್ ರೆಕಾರ್ಡ್ ಖ್ಯಾತಿಯ ಡಾ| ಚಂದ್ರಶೇಖರ ಶೆಣೈ ಅವರ ಮಾರ್ಗದರ್ಶನದ ಮೇರೆಗೆ ಎ. ಜಿ. ಕಾಮತ್ ಅವರ ದಿಗªದರ್ಶನದಲ್ಲಿ ಈ ನಾಟಕದಲ್ಲಿ ಎ. ಜಿ. ಕಾಮತ್, ಕಮಲಾಕ್ಷ ಸರಾಫ್, ವಿನಯಾ ಪ್ರಭು, ಅಶೋಕ್ ಪ್ರಭು, ತೋನ್ಸೆ ವೆಂಕಟೇಶ್ ಶೆಣೈ, ಮೇಲ್‌ಗಂಗೊಳ್ಳಿ ರವೀಂದ್ರ ಪೈ, ಆಶಾ ನಾಯಕ್, ಬಾಲಕೃಷ್ಣ ಕಾಮತ್ ಅವರು ಅಭಿನಯಿಸಲಿದ್ದಾರೆ.
ಶಾಂತಾರಾಮ ಮಹಾಲೆ, ಡಾ| ಚಂದ್ರಶೇಖರ ಶೆಣೈ, ಸುಧಾಕರ್ ಭಟ್, ಜಯವಂತ್ ಮಹಾಲೆ, ವಸಂತ ಪೈ, ಮಾಲಿನಿ ಪೈ, ಮಾಯಾ ಸರಾಫ್, ಎನ್. ಎಸ್. ಕಾಮತ್, ನರಸಿಂಹ ಪಾಲ್ ಅವರು ಮೊದಲಾದವರು ಸಹಕರಿಸಲಿದ್ದಾರೆ ಎಂದು ಕಲಾವಿದರಾದ ಕಮಲಾಕ್ಷ ಸರಾಫ್ ತಿಳಿಸಿದರು.