ಹೊಸದಿಲ್ಲಿ: ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರ ಬಹು ನಿರೀಕ್ಷಿತ ಆತ್ಮಚರಿತ್ರೆ “281 ಆ್ಯಂಡ್ ಬಿಯಾಂಡ್’ ಪುಸಕ್ತದ ಮುಖಪುಟ “ಸ್ಟಾರ್ ನ್ಪೋರ್ಟ್ಸ್’ನ ಸಹಯೋಗದಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್ ನೇರ ಪ್ರಸಾರದ ಮೂಲಕ ಬಿಡುಗಡೆಯಾಗಿದೆ.
ಈ ಪುಸ್ತಕ ನ. 16ರಂದು ಬಿಡುಗಡೆಗೊಳ್ಳಲಿದೆ. ಕ್ರೀಡಾ ಪತ್ರಕರ್ತ ಆರ್. ಕೌಶಿಕ್ ಜತೆಗೂಡಿ ಲಕ್ಷ್ಮಣ್ ತಮ್ಮ ಜೀವ ನದ ಅವಿಸ್ಮರಣೀಯ ನೆನಪುಗಳನ್ನು ಪದಗಳ ರೂಪಕ್ಕಿಳಿಸಿ ದ್ದಾರೆ.
“ಈ ಪುಸ್ತಕ ದೇಶದ ಕ್ರೀಡಾಪಟುವಿನ ವಿಶಿಷ್ಟ ಹಾಗೂ ಅಸಾಮಾನ್ಯ ಕತೆಯನ್ನು ಹೇಳುತ್ತದೆ. ನನ್ನ ಜೀವನದ ಬಹು ದೊಡ್ಡ ತಿರುವೆಂದರೆ, 2001ರಲ್ಲಿ ಆಸ್ಟ್ರೇಲಿಯ ವಿರುದ್ಧದ ಫಾಲೋಆನ್ ಟೆಸ್ಟ್‌ನಲ್ಲಿ ಬಾರಿಸಿದ 281 ರನ್‌ಗಳು. ಈ ಪಂದ್ಯವನ್ನಾಡಲು ಕಾರಣ ,ಅಂದಿನ ಫಿಟ್‌ನೆಸ್, ರಾಹುಲ್ ದ್ರಾವಿಡ್ ಅವರೊಂದಿಗಿನ ಜತೆಯಾಟ, ಹೇಗೆ ನಾವು ಸುದೀರ್ಘ ಜತೆಯಾಟ ನಡೆಸಿದೆವು ಎಂಬ ವಿಚಾರಗಳನ್ನು ತಿಳಿಸಿದ್ದೇನೆ. ಈ ಟೆಸ್ಟ್ ಪಂದ್ಯ ನನಗೆ ಸಾಕಷ್ಟು ವಿಚಾರಗಳನ್ನು ತಿಳಿಸಿದೆ.
ಆ ಟೆಸ್ಟ್ ನಮಗೆ ಆಕ್ರಮಣಕಾರಿ ಮನಃಸ್ಥಿತಿ, ಜಗತ್ತಿನ ಯಾವುದೇ ತಂಡದೊಂದಿಗೆ ಹೋರಾಡುವ ನೈತಿಕ ಶಕ್ತಿ ನೀಡಿತ್ತು’ಎಂದು ಲಕ್ಷ್ಮಣ್ ಮುಖಪುಟ ಬಿಡುಗಡೆ ಮಾಡುತ್ತ ತಮ್ಮ ನೆನಪಿನ ಬುತ್ತಿಯನ್ನು ತೆರದರು.
ಈ ಪುಸ್ತಕ ಲಕ್ಷ್ಮಣ್ ಡ್ರೆಸ್ಸಿಂಗ್ ರೂಮ್ ನೆನಪು,ವಿಭಿನ್ನ ಪಿಚ್‌ಗ ಳಲ್ಲಿ ವಿವಿಧ ಹಂತಗಳಲ್ಲಿ ಲಕ್ಷ್ಮಣ್ ಅವರ ಬ್ಯಾಟಿಂಗ್ ಶೈಲಿ, ಕೋಚ್ ಜಾನ್ ರೈಟ್ ಅವರಿಂದ ಕಲಿತ ವಿಚಾರ… ಹೀಗೆ ಅನೇಕ ಸಂಗತಿಗಳಿಂದ ಕೂಡಿದೆ ಎಂದು ಪುಸ್ತಕ ಪ್ರಕಾಶಕ ಸಂಸ್ಥೆ ವೆಸ್ಟ್‌ಲ್ಯಾಂಡ್ ತಿಳಿಸಿದೆ.
2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಲಕ್ಷ್ಮಣ್ 134ಟೆಸ್ಟ್ ಪಂದ್ಯಗಳನ್ನು ಆಡಿದ್ದು, 45.97ರ ಸರಾಸರಿಯ ಲ್ಲಿ 8, 781 ರನ್ ಬಾರಿಸಿದ್ದಾರೆ. ಇದು 17 ಶತಕ, 56 ಅರ್ಧ ಶತಕಗಳನ್ನು ಒಳಗೊಂಡಿದೆ. ಏಕ ದಿನ ಕ್ರಿಕೆಟ್ ನಲ್ಲಿ ಲಕ್ಷ್ಮಣ್ 86 ಪಂದ್ಯಗಳಿಂದ 2,338 ರನ್ ಪೇರಿಸಿದ್ದಾರೆ.