Advertisement

ವಿವಿಪ್ಯಾಟ್‌ ಫೋಟೋ ಕ್ಲಿಕ್ಕಿಸಲ್ಲ

10:16 AM Aug 06, 2018 | |

ಹೊಸದಿಲ್ಲಿ: ನೀನು ಹಣ ತಗೊಂಡಿದ್ದೀಯಾ. ನಮಗೇ ಮತ ಹಾಕು. ಬೇರೆಯವರಿಗೆ ಮತ ಹಾಕಿದರೆ ನನಗೆ ಗೊತ್ತಾಗುತ್ತದೆ. ನಿಮ್ಮ ಫೋಟೋವನ್ನು ವಿವಿಪ್ಯಾಟ್‌ ತೆಗೆಯುತ್ತದೆ…. ಹೀಗೆಂದು ಹೆದರಿಸುವವರಿಗೆ ಕಿವಿಗೊಡಬೇಡಿ. ಇದು ಸುಳ್ಳು. ವಿವಿಪ್ಯಾಟ್‌ ಎಂದಿಗೂ ಫೋಟೋ ಕ್ಲಿಕ್ಕಿಸುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಜನಜಾಗೃತಿ ಮೂಡಿಸಲು ಕ್ಯಾಂಪೇನ್‌ ನಡೆಸುತ್ತೇವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾವತ್‌ ಹೇಳಿದ್ದಾರೆ.

Advertisement

ಮತಕ್ಕಾಗಿ ಹಣ ಹಂಚುವವರು ಈ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ವಿವಿಪ್ಯಾಟ್‌ಗಳು ಕೇವಲ ಮತ ಯಾರಿಗೆ ದಾಖಲಾಗಿದೆ ಎಂಬ ವಿವರವನ್ನು ಮಾತ್ರ ಒಳಗೊಂಡಿರುತ್ತದೆ. ಬೂತ್‌ನಲ್ಲಿ ಮತದಾರರ ಗೌಪ್ಯತೆಯನ್ನು ವಿವಿಪ್ಯಾಟ್‌ ಉಲ್ಲಂ ಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಡೇಟಾ ಕಳವಾಗದು:  ಆಧಾರ್‌ ಸಹಾಯವಾಣಿ ಸಂಖ್ಯೆಯ ವಿಚಾರದಲ್ಲಿ ಗೂಗಲ್‌ನ ಕಣ್ತಪ್ಪಿನಿಂದಾದ ಅನಾಹುತವನ್ನೇ ಬಳಸಿಕೊಂಡು ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ ಹಾಗೂ ಆಧಾರ್‌ ಪ್ರಾಧಿಕಾರದ ಗೌರವವನ್ನು ಹಾಳು ಮಾಡುತ್ತಿದ್ದಾರೆ. ಅಲ್ಲದೆ ಸಹಾಯವಾಣಿ ಸಂಖ್ಯೆಯಿಂದ ಡೇಟಾ ಕಳ್ಳತನ ಮಾಡಲಾಗದು ಎಂದು ಆಧಾರ್‌ ಪ್ರಾಧಿಕಾರ ಪ್ರತಿಕ್ರಿಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next