Advertisement

ಜಮೀನು ಪಡೆದ ರೈತರಿಂದ ವಸೂಲಿ: ಆರೋಪ

06:45 AM May 30, 2020 | Lakshmi GovindaRaj |

ಕುಣಿಗಲ್‌: ತಾಲೂಕಿನ ಹುಲಿಯೂರುದುರ್ಗ ಹೋಬಳಿ ದೊಡ್ಡಮಾವತ್ತೂರು ಸಮೀಪ ಕೆಶಿಫ್‌ ರಸ್ತೆ ಟೋಲ್‌ ಸಂಗ್ರಹ ಮಾಡುತ್ತಿರುವುದನ್ನು ವಿರೋಧಿಸಿ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಲು ಮುಂದಾದಾಗ  ಪೊಲೀಸರು ಮಧ್ಯ ಪ್ರವೇಶ ಮಾಡಿ ಕೊರೊನಾ ಲಾಕ್‌ಡೌನ್‌ ಕಾರಣ ನೀಡಿ ಪ್ರತಿಭಟನೆ ತಡೆದ ಘಟನೆ ನಡೆದಿದೆ.

Advertisement

ಕೊರಟಗೆರೆಯಿಂದ ಕೊಳ್ಳೇಗಾಲ ರಾಜ್ಯ ಹೆದ್ದಾರಿ 33ರ ಕುಣಿಗಲ್‌ನಿಂದ ಹುಲಿಯೂರುದುರ್ಗ ಮಾರ್ಗ ಮಧ್ಯೆ  ಹಾದುಹೋಗಿದ್ದು ದೊಡ್ಡಮಾವತ್ತೂರು ಗ್ರಾಮದ ಬಳಿ ಟೋಲ್‌ ನಿರ್ಮಾಣ ಮಾಡಿದ್ದು ಕೆಶಿಫ್‌ ನಿಂದ ಟೋಲ್‌ ಸಂಗ್ರಹ ಆರಂಭಿಸಿದೆ. ಈ ಸಂಬಂಧ ಈ ಹಿಂದೆಯೇ ರೈತ ಸಂಘ ಟೋಲ್‌ ಸಂಗ್ರಹ ಮಾಡಬಾರದೆಂದು ಖಂಡಿಸಿ ರಸ್ತೆ ತಡೆ  ನಡೆಸಿ ಪ್ರತಿಭಟಿಸಿದರು.

ಅದರೂ ಟೋಲ್‌ ಸಂಗ್ರಹ ಮಾಡಲು ಕೆಶಿಫ್‌ ಕಂಪನಿ ಅಧಿಕಾರಿಗಳು ಮುಂದಾಗಿದ್ದಾರೆ. ವಿಚಾರ ತಿಳಿದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಅನಂದ್‌ ಪಟೇಲ್‌ ಹಾಗೂ ತಾಲೂಕು ರೈತ ಸಂಘದ ಅಧ್ಯಕ್ಷ ಅನಿಲ್‌ ರೈತರೊಂದಿಗೆ ಟೋಲ್‌ ಬಳಿ ಜಮಾವಣೆಗೊಂಡು  ಪ್ರತಿಭಟನೆಗೆ ಮುಂದಾದರು. ಸ್ಥಳದಲ್ಲಿ ಹಾಜರಿದ್ದ ಸಿಪಿಐ ನಿರಂಜನ ಕುಮಾರ್‌ ಹಾಗೂ ಪಿಎಸ್‌ಐ ಪುಟ್ಟೇಗೌಡ ಕೊರೊನಾ ಲಾಕ್‌ ಡೌನ್‌ ಜಾರಿಯಲ್ಲಿದೆ.

ಜೊತೆಗೆ ನಿಷೇಧಾಜ್ಞೆ ಜಾರಿ ಇರು  ವುದರಿಂದ ಪ್ರತಿಭಟನೆ ನಡೆಸಲು ಅವಕಾಶ ನೀಡುವು ದಿಲ್ಲ ಹಾಗೇನಾದರೂ ಪ್ರತಿಭಟನೆ ನಡೆಸಿದರೆ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ರೈತರ ಸಂಘದ ಪದಾಧಿಕಾರಿಗಳಗೆ ನೋಟಿಸ್‌ ಜಾರಿ ಮಾಡಿದರು. ಈ ವೇಳೆ ಸಾಮಾಜಿಕ ಅಂತರ  ಕಾಯ್ದುಕೊಂಡು ಪ್ರತಿಭಟನೆ ನಡೆಸುವುದಾಗಿ ಪೊಲೀಸರು ಹಾಗೂ ರೈತ ಸಂಘದ ಪದಾಧಿಕಾರಿಗಳ ನಡುವೆ ಮಾತಿನಚಕಮಕಿ ನಡೆಯಿತು.

ರೈತ ಸಂಘದ ಒತ್ತಡಕ್ಕೆ ಪೊಲೀಸರು ಮಣಿಯದ ಕಾರಣ ರೈತ ಸಂಘದ  ಪ್ರತಿಭಟನೆಯನ್ನು ತಾಲೂಕು ಕಚೇರಿಗೆ ಸ್ಥಳಾಂತರಿಸಿ ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌ಗೆ ಮನವಿ ಸಲ್ಲಿಸಿದರು.ಜಿಲ್ಲಾ ರೈತ ಸಂಘದ ಆನಂದ್‌ ಪಟೇಲ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next