Advertisement
ಮಧ್ಯಾಹ್ನ ಭಜನ ಕಾರ್ಯಕ್ರಮ, ಶ್ರೀ ದೇವರಿಗೆ ಮಹಾಪೂಜೆ, ರಾತ್ರಿ ವಿಶೇಷ ವಸಂತ ಪೂಜೆ ನಡೆಯಿತು.ಅನಂತರ ನಡೆದ ಗುರು ಗುಣಗಾನದಲ್ಲಿ ದೇಗುಲದ ಆಡಳಿತ ಮೊಕ್ತೇಸರ ಶ್ರೀಧರ ಕಾಮತ್ ಅವರು ಮಾತನಾಡಿ, ಗುರುವರ್ಯರು ಕಾಶೀಯ ಮೂಲ ಮಠದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಸಂಸ್ಕೃತವನ್ನು ಕಲಿತು ಅಪಾರ ಪಾಂಡಿತ್ಯ ಹೊಂದಿ ದೇವರ ಕೀರ್ತನೆಗಳನ್ನು ರಚಿಸಿದ್ದರು. ಅಲ್ಲದೇ ದೇಶ ವಿದೇಶದ ಸುಮಾರು 16 ಭಾಷೆಗಳನ್ನು ಬಲ್ಲವರಾಗಿದ್ದರು. ಅದರಲ್ಲಿ ಫ್ರೆಂಚ್, ಜರ್ಮನ್, ಜಪಾನೀ ಭಾಷೆಯೂ ಸೇರಿತ್ತು. ಅವರಿಗೆ ಕೈಗಾರಿಕೆ ಹಾಗೂ ಯಂತ್ರಗಳ ಕುರಿತು ಅಪಾರ ಒಲವಿತ್ತು. ಆ ಕಾಲದ ಆಧುನಿಕ ಯಂತ್ರ, ಕೈಮಗ್ಗಗಳ ಕುರಿತು ಅಧ್ಯಯನ ನಡೆಸಿದ್ದರು ಎಂದು ನಿದರ್ಶನದ ಮೂಲಕ ತಿಳಿಸಿದರು.