Advertisement

ಗಗನಯಾತ್ರೆಗೆ ಲಲಿತಾಂಬಿಕಾ ನೇತೃತ್ವ

06:00 AM Aug 19, 2018 | Team Udayavani |

ಹೊಸದಿಲ್ಲಿ: ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಂದು ಘೋಷಿಸಿದ ಮಾನವ ಸಹಿತ ವ್ಯೋಮಯಾನ ಯೋಜನೆಗೆ ವಿಜ್ಞಾನಿ ವಿ.ಆರ್‌.ಲಲಿತಾಂಬಿಕಾ ನೇತೃತ್ವ ವಹಿಸಲಿದ್ದಾರೆ. ಸುಧಾರಿತ ಉಡಾಹಕ ತಂತ್ರ ಜ್ಞಾನದಲ್ಲಿ ಪರಿಣತಿ ಹೊಂದಿರುವ ಲಲಿತಾಂಬಿಕಾ, ಈ ಯೋಜನೆಯ ನೇತೃತ್ವ ವಹಿಸಲಿದ್ದಾರೆಂದು ಇಸ್ರೋ ತಿಳಿಸಿದೆ. ಸದ್ಯ ವಿಕ್ರಮ್‌ ಸಾರಾಭಾಯಿ ಸ್ಪೇಸ್‌ ಸೆಂಟರ್‌ ನಲ್ಲಿ ಉಪ ನಿರ್ದೇಶಕರಾಗಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. 

Advertisement

1988ರಲ್ಲೇ ನೇಮಕವಾಗಿದ್ದ ಅವರು, ನಿಯಂತ್ರಣ, ಮಾರ್ಗದರ್ಶನ , ಸಿಮ್ಯುಲೇಶನ್‌ ಸಂಶೋಧನೆ ನೇತೃತ್ವ ವಹಿಸಿದ್ದರು. ಚಂದ್ರಯಾನ ಮತ್ತು ಮಂಗಳಯಾನದಲ್ಲಿ ಬಳಸಿದ ಜಿಎಸ್‌ಎಲ್‌ವಿ ಮಾರ್ಕ್‌ 3 ಅಭಿವೃದ್ಧಿಪಡಿಸುವಲ್ಲಿ ಲಲಿತಾಂಬಿಕಾ ಮಹತ್ವದ ಪಾತ್ರ ವಹಿಸಿದ್ದರು. ಜಿಎಸ್‌ಎಲ್‌ವಿ ಮಾರ್ಕ್‌ 3 ಅನ್ನು ನಿಯಂತ್ರಿಸುವ ಡಿಜಿಟಲ್‌ ಅಟೋ ಪೈಲಟ್‌ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next