Advertisement

ವಿಪಿಎಂ ಕನ್ನಡ ಮಾಧ್ಯಮಿಕ ಶಾಲೆ, ಕೊಠಡಿಗಳ ಪುನರ್‌ ನಾಮಕರಣ ಕಾರ್ಯಕ್ರಮ

04:57 PM Nov 10, 2018 | Team Udayavani |

ಮುಂಬಯಿ: ಮಹಾದಾನಿ ಪ್ರೊ| ಸಿ. ಜೆ. ಪೈ ಅವರ ತಂದೆಯವರ ಸ್ಮರಣಾರ್ಥ ಕನ್ನಡ ಮಾಧ್ಯಮಿಕ ಶಾಲೆಯನ್ನು ವಿಪಿಎಂ ಕನ್ನಾನೊರೆ ಕೃಷ್ಣ ಕನ್ನಡ ಪ್ರೌಢ ಶಾಲೆ ಪುನರ್‌ ನಾಮಕರಣ ಮಾಡುವುದರ ಮೂಲಕ ಉತ್ತಮ ಕಾರ್ಯವನ್ನು ಮಾಡಲಾಗಿದೆ. ವಿದ್ಯಾ ಪ್ರಸಾರಕ ಮಂಡಳವು ಶೈಕ್ಷಣಿಕ ಕ್ರಾಂತಿಯನ್ನು ಮಾಡಲು ಮಂಡಳದಲ್ಲಿಯ ಕಾಮತ್‌ ಅವರ ಮತ್ತು ಇತರ ಪದಾಧಿಕಾರಿಗಳ ಕಾರ್ಯವೈಖರಿ ಕಾರಣವಾಗಿದೆ ಎಂದು  ಉಚ್ಚ ನ್ಯಾಯಾಲಯದ ನ್ಯಾಯವಾದಿ, ದಾಲ್ಮೀಯಾ ಕಾಲೇ ಜಿನ ಪ್ರಾಧ್ಯಾಪಕ ಪ್ರೊ| ಸಿ.ಆರ್‌. ಸದಾಶಿವನ್‌  ನುಡಿದರು.

Advertisement

ಮುಲುಂಡ್‌ ವಿಪಿಎಂ ಶಾಲಾ ಸಭಾಗೃಹದಲ್ಲಿ ನಡೆದ ವಿಪಿಎಂ ಕನ್ನಡ ಶಾಲೆಯ ಪುನರ್‌ ನಾಮ ಕರಣ ಮತ್ತು ಕೊಠಡಿಗಳ ನಾಮ ಕರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿ ಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

1957ರಲ್ಲಿ ಕನ್ನಡ ಅಭಿಮಾನಿಗ ಳಿಂದ ಸ್ಥಾಪಿತವಾದ ಈ ಸಂಸ್ಥೆ ವ್ಯಕ್ತಿತ್ವ ವಿಕಸನಕ್ಕೆ ಶ್ರಮಿಸುತ್ತಿದೆ ಎಂದ ಅವರು,   ಸಮಾರಂಭದ ರೂವಾರಿಗಳಾದ ಹಾಗೂ ಮಂಡಳದ ಕೋಶಾಧಿಕಾರಿ ಪ್ರೊ| ಸಿ.ಜೆ. ಪೈ,  ಯೋಗಿಶ್‌ ಕಾಸರಗೊಡು,  ಜಿ.ಕೆ ರಾಮಲು ಮತ್ತು ಕುಲಕರ್ಣಿ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದರು.

ಮಂಡಳದ ಪ್ರಧಾನ ಗೌರವ ಕಾರ್ಯದರ್ಶಿ ಡಾ|  ಪಿ. ಎಂ.  ಕಾಮತ್‌ ಅವರು ಅತಿಥಿಗಳನ್ನು ಗೌರವಿಸಿ ಮಾತನಾಡಿ, ವಿಪಿಎಂ ಶಿಕ್ಷಣ  ಸಂಸ್ಥೆ ಹೆಮ್ಮರವಾಗಿ ಬೆಳೆಯು

ತ್ತಿರುವುದು ಹೃದಯ ವೈಶಾಲ್ಯವುಳ್ಳ ದಾನಿಗಳಿಂದ. ಕನ್ನಡಿಗರ ಸಂಸ್ಥೆಯಾಗಿದ್ದರು ಮಾನವತಾ ವಾದದ ದೃಷ್ಟಿಯಿಂದ ದಾನಿಗಳನ್ನು ಮರೆಯುವಂತಿಲ್ಲ. ವಿದ್ಯಾ ಪ್ರಸಾರಕ ಮಂಡಳವು ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಯನ್ನು ಹೊಂದಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು.

Advertisement

ಉಚಿತ ಶಾಲಾ ಪರಿಕರಗಳು, ಸೌಲಭ್ಯಗಳ ಕುರಿತು ವಿವರಿಸಿದ ಅವರು ಐರೋಲಿಯಲ್ಲಿರುವ ವಿಪಿಎಂ ಇಂಟರ್‌ ನ್ಯಾಶನಲ್‌ ಶಾಲೆಯ ಸಾಧನೆಯ ಹಿಂದಿರುವ ಶ್ರಮ, ದಾನಿಗಳ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಅವರು ನಿವೃತ್ತ ಪ್ರಾಂಶುಪಾಲರು, ಮುಖ್ಯೋ

ಪಾಧ್ಯಾಯಿನಿ, ಶಿಕ್ಷಕರ ಶ್ರಮದಾನ ವನ್ನು, ವಿದ್ಯಾರ್ಥಿಗಳ ಸಾಧನೆಯನ್ನು ವಿವರಿಸಿದರು. 

ಸಂಸ್ಥೆಯ ಕಟ್ಟಡದ ಪುನರ್‌ ನಿರ್ಮಾಣ ಮಾಡಲು ಶಿಕ್ಷಣ ಅಭಿಮಾನಿಗಳು, ಸಮಾಜ ಬಾಂಧ ವರು ಸಹಕರಿಸಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಮೆರಿಕನ್‌ ಎಕ್ಸ್‌ಪ್ರೆಸ್‌ ಬ್ಯಾಂಕ್‌ ವಲಯದ ಉಪಾಧ್ಯಕ್ಷ  ರಾಜನ್‌ ಸಿ. ಭಟ್‌ ಅವರು ದೀಪ  ಪ್ರಜ್ವಲಿಸಿ, ಮಹಾದಾನಿಗಳನ್ನು ಗೌರವಿಸಿ ಮಾತ ನಾಡಿ, ಎಲ್ಲ ನಾಗರಿಕರು ಜವಾಬ್ದಾರಿ, ಹೊಣೆಗಾರಿಕೆ, ಕರ್ತವ್ಯದ ಪ್ರಜ್ಞೆಯ ಕುರಿತು ಜಾಗೃತರಾಗಬೇಕು. ಸ್ವಾರ್ಥದ ಮನೋಭಾವನೆಯನ್ನು ಬಿಟ್ಟು ನಿಸ್ವಾರ್ಥಿಗಳಾಗಬೇಕು ಎಂದು ನುಡಿದರು.

ಪ್ರೊ| ಸಿ.ಜೆ. ಪೈ ಅವರು ಮಾತ ನಾಡಿ, ಇದು ನನ್ನ ಶಾಲೆ ಎಂಬ  ಅವಿನಾಭಾವ ಸಂಬಂಧದಿಂದ ಈ ವಿದ್ಯಾ ಪ್ರಸಾರಕ ಮಂಡಳದ ಶೈಕ್ಷಣಿಕ ಕ್ರಾಂತಿಯನ್ನು  ಕಂಡಾಗ ನನ್ನಿಂದ ಏನಾದರೂ ಕೊಡಬೇಕೆಂಬ ಹೆಬ್ಬಕೆಯು ಸದಾ ನನ್ನನ್ನು ಕಾಡುತ್ತಿತು. ಪ್ರಸ್ತುತ  ಇದೊಂದು ಅಳಿಲು ಸೇವೆಯನ್ನು ಮಾಡಿದ್ದೇನೆ, ಸದಸ್ಯರಾಗಲಿ, ಸಮಾಜದ ಗಣ್ಯ ರಾಗಲಿ ದಾನ-ಧರ್ಮದ  ಸೇವಾ ಪ್ರವೃತ್ತಿಯ ಹೃದಯ ಶ್ರೀಮಂತಿಕೆ ಯನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದು ಶುಭಹಾರೈಸಿದರು.
ವೇದಿಕೆಯಲ್ಲಿ   ಡಾ| ಪಿ. ಎಂ.  ಕಾಮತ್‌, ಬಿ. ಎಚ್‌. ಕಟ್ಟಿ, ಪ್ರೊ|  ಸಿ. ಜೆ. ಪೈ, ಮಂಡಳದ ಸದಸ್ಯ ಪ್ರಸನ್ನ ಪಂಡಿತ.  ಯೋಗಿಶ್‌ ಕಾಸರಗೊಡು,  ಜಿ. ಕೆ ರಾಯಲು ಮತ್ತು ಕುಟುಂಬ,  ರಾಜನ್‌ ಸಿ. ಭಟ್‌  ಉಪಸ್ಥಿತರಿದ್ದರು. 

ಸಮಾರಂಭದಲ್ಲಿ ಮುಲುಂಡ್‌  ಮತ್ತು ಐರೋಲಿ ಶಾಲೆಯ ಪ್ರಾಚಾರ್ಯರು, ಮುಖ್ಯ ಶಿಕ್ಷಕಿಯರು, ಪರಿವೀಕ್ಷಕರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಅಶ್ವಿ‌ನಿ, ಪಿ. ಬಂಗೇರ ಮತ್ತು ಅರ್ಚನಾ ಬೋಸ್ಲೆಯವರು ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರ್ವಹಿಸಿದರು. ಪ್ರಮೋದಾ ಮುಳುಗುಂದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next