Advertisement

VPM ಕನ್ನಡ ಶಾಲಾ ಹಳೆ ವಿದ್ಯಾರ್ಥಿ ಸಂಘ:KKL ಟ್ರೋಫಿ ಕಬಡ್ಡಿ

12:13 PM Feb 02, 2018 | |

ಮುಂಬಯಿ: ವಿಪಿಎಂ ಕನ್ನಡ ಶಾಲಾ ಹಳೆ ವಿದ್ಯಾರ್ಥಿಗಳ ಸಂಘ ಮುಲುಂಡ್‌ ಮುಂಬಯಿ ಇವರ ಆಶ್ರಯದಲ್ಲಿ ಕನ್ನಡ ಕಬಡ್ಡಿ ಲೀಗ್‌ ಕೆಕೆಎಲ್‌ ಟ್ರೋಫಿ-2018 ಪಂದ್ಯಾಟವು ಮುಲುಂಡ್‌ನ‌ ಕವಿರತ್ನ ಕಾಳಿದಾಸ ಹಾಲ್‌ ಸಮೀಪದ ಒಳಾಂಗಣ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.

Advertisement

ತುಳು-ಕನ್ನಡಿಗರಿಗಾಗಿ ಆಯೋಜಿಸಲಾಗಿದ್ದ ಈ ಪಂದ್ಯಾಟದಲ್ಲಿ ಸುಮಾರು 15 ಕನ್ನಡಪರ ತಂಡಗಳು ಭಾಗವಹಿಸಿದ್ದು, ಸೆಮಿಫೈನಲ್‌ನಲ್ಲಿ ಸುರೇಶ್‌ ಶೆಟ್ಟಿ ಯೆಯ್ನಾಡಿ ಅವರ ನೇತೃತ್ವದ ಮುಲುಂಡ್‌ ಫ್ರೆಂಡ್ಸ್‌ ನ ಎ ತಂಡವು ಕ್ರೀಡಾ ಪೋಷಕ ಗಿರೀಶ್‌ ಶೆಟ್ಟಿ ತೆಳ್ಳಾರ್‌ ನೇತೃತ್ವದ ಬಂಟರ ಸಂಘ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ಬಿ ತಂಡವನ್ನು ಸೋಲಿಸಿ ಫೈನಲ್‌ ಪ್ರವೇಶಿಸಿತ್ತು.ಬಿ ವಿಭಾಗದ ಸೆಮಿಫೈನಲ್‌ನಲ್ಲಿ ಮುಲುಂಡ್‌ ಬಂಟ್ಸ್‌ ತಂಡವನ್ನು ಮುಲುಂಡ್‌ ಫ್ರೆಂಡ್ಸ್‌  ಬಿ ತಂಡವು ಪರಾಭವಗೊಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಫೈನಲ್‌ನಲ್ಲಿ ಮುಲುಂಡ್‌ ಫ್ರೆಂಡ್ಸ್‌ ಎ ಮತ್ತು ಮುಲುಂಡ್‌ ಫ್ರೆಂಡ್ಸ್‌ ಬಿ ತಂಡಗಳು ಸೆಣಸಾಡಿ ಕೊನೆಯಲ್ಲಿ ಮುಲುಂಡ್‌ ಫ್ರೆಂಡ್ಸ್‌ ಎ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು 1 ಲಕ್ಷ ರೂ. ನಗದು ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಮುಲುಂಡ್‌ ಫ್ರೆಂಡ್ಸ್‌ ಬಿ ತಂಡವು 50 ಸಾವಿರ ರೂ. ನಗದು ಮತ್ತು ಟ್ರೋಫಿಯೊಂದಿಗೆ ದ್ವಿತೀಯ ಪ್ರಶಸ್ತಿಗೆ ಭಾಜನವಾಯಿತು.

ಉತ್ತಮ ಹಿಡಿತಗಾರನಾಗಿ ಆನಂದ್‌, ಉತ್ತಮ ದಾಳಿಗಾರನಾಗಿ ಆಕಾಶ್‌ ಶೆಟ್ಟಿ, ಉತ್ತಮ ಸರ್ವ ಸಾಚಿಯಾಗಿ ರತನ್‌ ಗೌಡ ಈ ಮೂವರು ಮುಲುಂಡ್‌ ಫ್ರೆಂಡ್ಸ್‌ ತಂಡದ ಸದಸ್ಯರು ಪಾರಿತೋಷಕವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಆಯೋಜಕ ಸುರೇಶ್‌ ಶೆಟ್ಟಿ ಮರವೂರು, ಕಬಡ್ಡಿ ಆಟಗಾರ ಜಯ ಶೆಟ್ಟಿ, ಪ್ರೊ| ಕಬಡ್ಡಿ ತರಬೇತುದಾರ ಪ್ರತಾಪ್‌ ಶೆಟ್ಟಿ, ಮುಲುಂಡ್‌ ಫ್ರೆಂಡ್ಸ್‌ ಅಧ್ಯಕ್ಷ ಸುರೇಶ್‌ ಶೆಟ್ಟಿ ಯೆಯ್ನಾಡಿ, ಸುಂದರ ಶೆಟ್ಟಿ ವಾಮದಪದವು, ವೇಣುಗೋಪಾಲ್‌ ಶೆಟ್ಟಿ ಇರಾ, ಪ್ರದೀಪ್‌ ಶೆಟ್ಟಿ, ಅಣ್ಣಪ್ಪ ಕಾಂಚನ್‌, ಹರೀಶ್‌ ಶೆಟ್ಟಿ, ಸುಭಾಶ್‌ ಆಳ್ವ, ಮಧುಕರ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next