Advertisement

ಕಾಡಿನಲ್ಲಿ ಹರಿವ ಹೊಳೆ ರಕ್ಷಣೆಗೆ ಪ್ರತಿಜ್ಞೆ

08:51 PM Jun 07, 2021 | Team Udayavani |

ಶಿರಸಿ: ತಾಲೂಕಿನ ಸಾಲ್ಕಣಿ ಹಾಗೂ ವಾನಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಹರಿದು, ಮುಂದೆ ಬೇಡ್ತಿನದಿ ಸೇರುವ ಪಟ್ಟಣ ಹೊಳೆಯ ಸಮೃದ್ಧ ಕಣಿವೆಯ ಪರಿಸರದ ಸಂರಕ್ಷಣೆಗೆ ಸದಾ ಬದ್ಧವಾಗಿರಲು ಒಮ್ಮತದ ನಿರ್ಧಾರವನ್ನು ಸ್ಥಳೀಯ ಗ್ರಾಮಸ್ಥರು ಕೈಗೊಂಡರು.

Advertisement

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾಲ್ಕಣಿ ಪಂಚಾಯತವು ಹಮ್ಮಿಕೊಂಡ ಸಾಂಕೇತಿಕ ಕಾರ್ಯಕ್ರಮದಲ್ಲಿ ಈ ಪ್ರದೇಶದ ಪರಿಸರ ಹಾಗೂ ಜನಜೀವನಕ್ಕೆ ತೊಂದರೆ ತರುವ ಯಾವುದೇ ಅಣೆಕಟ್ಟು ಅಥವಾ ನದಿತಿರುವು ಯೋಜನೆಗಳನ್ನು ಹಮ್ಮಿಕೊಳ್ಳಬಾರದಾಗಿ ಒಮ್ಮತದ ಪಂಚಾಯತ ನಿರ್ಣಯವನ್ನು ಕೂಡ ಮಾಡಲಾಯಿತು.

ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಈ ಪ್ರದೇಶದ ಸಮೃದ್ಧ ಕೃಷಿ ಪರಂಪರೆ ಹಾಗೂ ಜನರ ಪರಿಸರ ಜ್ಞಾನವನ್ನು ಮುಂಬರುವ ತಲೆಮಾರಿಗೂ ಈ ಕಾಳಜಿಯನ್ನು ತಲುಪಿಸುವ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ತಿಮ್ಮಣ್ಣ ಹೆಗಡೆ ಮಾತನಾಡಿ, ಘನತ್ಯಾಜ್ಯ ನಿರ್ವಹಣೆ, ಸ್ವತ್ಛತೆ ಇತ್ಯಾದಿ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ ಕುರಿತು ಮುಂಬರುವ ದಿನಗಳಲ್ಲಿ ಗ್ರಾಪಂ ಹಮ್ಮಿಕೊಳ್ಳಲಿರುವ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಸುಮಾ ಸತೀಶ ಹೆಗಡೆ, ಸದಸ್ಯರಾದ ಶ್ರೀಧರ ಹೆಗಡೆ, ಗಜಾನನ ನಾಯ್ಕ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ ಹೆಗಡೆ ಶಿಗೇಹಳ್ಳಿ, ಜಿಪಂ ಸದಸ್ಯ ಜಿ.ಎನ್‌. ಹೆಗಡೆ ಮುರೇಗಾರ ಉಪಸ್ಥಿತರಿದ್ದರು. ಪಂಚಾಯತ ಗ್ರಾಮಾಭಿವೃದ್ಧಿ ಅಧಿಕಾರಿ ಯೋಗಿತಾ ಹೆಗಡೆ ನಿರೂಪಿಸಿದರು.

ಸಾಂಕೇತಿಕವಾಗಿ ಪಂಚಾಯತ ಆವರಣದ ಔಷ ಧವನದಲ್ಲಿ ಗಿಡ ನೆಡಲಾಯಿತು. ಬಳಿಕ ಸಮೀಪದ ಪಟ್ಟಣಹೊಳೆಯ ಮುರೇಗಾರ್‌ ಜಲಪಾತದ ಬಳಿಯ ನದಿಪಾತ್ರಕ್ಕೆ ಗ್ರಾಮಸ್ಥರ ನಿಯೋಗ ಭೇಟಿ ನೀಡಿತು. ಅಲ್ಲಿನ ಪರಿಸರದ ಸಮೀಕ್ಷೆ ನಡೆಸಲಾಯಿತು. ಮುರೇಗಾರ್‌ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಗಣಪತಿ ಹೆಗಡೆ ಮುರೇಗಾರ್‌ ಅರಣ್ಯ ಸಮಿತಿ ಕಾರ್ಯಚಟುವಟಿಕೆ ಪರಿಚಯಿಸಿದರು.

Advertisement

ಜಿಪಂ ಸದಸ್ಯ ಜಿ.ಎನ್‌. ಹೆಗಡೆ ಮುರೇಗಾರ್‌ ಈ ಪ್ರದೇಶದ ಕೃಷಿ ಪರಿಸ್ಥಿತಿ ಹಾಗೂ ಪರಿಸರದ ಪಾರಂಪರಿಕ ಮಹತ್ವ ವಿವರಿಸಿದರು. ಬೇಡ್ತಿ-ಅಘನಾಶಿನಿ ಕೊಳ್ಳಸಮಿತಿ ಉಪಾಧ್ಯಕ್ಷ ವಿ.ಎನ್‌. ಹೆಗಡೆ ಬೊಮ್ಮನಳ್ಳಿ ಮಾತನಾಡಿ, ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಪರಿಸರ ನಡೆಯುತ್ತಿರುವ ಸಂರಕ್ಷಣಾ ಕಾರ್ಯ ಪ್ರಸ್ತಾಪಿಸಿ, ಈ ಪ್ರದೇಶದಲ್ಲಿ ಯಾವುದೇ ವಿನಾಶಕಾರಿ ಯೋಜನೆಗಳು ಬರದಂತೆ ಜನರು ಸದಾ ಜಾಗೃತರಾಗಿರಬೇಕು ಎಂದರು.

ನರಸಿಂಹ ಹೆಗಡೆ ವಾನಳ್ಳಿ ಮಾತನಾಡಿ, ಈ ಕಣಿವೆಯ ಕಾಡಿನ ವೈಶಿಷ್ಠ, ಅಪರೂಪದ ಜೀವವೈವಿಧ್ಯ, ಪಾರಂಪರಿಕ ಕೃಷಿ ಹಾಗೂ ಕರಕುಶಲ ಪದ್ಧತಿ, ಒಕ್ಕಲಿಗ ವನವಾಸಿಗಳ ಪರಿಸರ ಕಾಳಜಿ ಕುರಿತು ಮಾಹಿತಿ ನೀಡಿದರು. ವನ್ಯಜೀವಿತಜ್ಞ ಬಾಲಚಂದ್ರ ಸಾಯಿಮನೆ, ರಮಾಕಾಂತ ಮಂಡೇಮನೆ, ಕೇಶವ ಕೊರ್ಸೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next