ನಿಟ್ಟೆ: ಮತದಾನವು ನಮ್ಮ ಹಕ್ಕು ಹಾಗೂ ಕರ್ತವ್ಯ ಎಂಬುದನ್ನು ನಾವೆಂದೂ ಮರೆಯಬಾರದು. ಯುವಜನಾಂಗ ಮತದಾನದ ಮಹತ್ವವನ್ನು ನೆನೆದು ಮತಚಲಾಯಿಸಬೇಕು ಎಂದು ಕಾರ್ಕಳ ತಾ. ಪಂ.ಎಕ್ಸಿಕ್ಯೂಟ್ಯೂವ್ ಆಫೀಸರ್ ಡಾ| ಹರ್ಷ ಅಭಿಪ್ರಾಯಪಟ್ಟರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿಲಯದಲ್ಲಿ ಏ.4ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಚುನಾವಣ ಸಾಕ್ಷರತಾ ಸಂಘ ಹಮ್ಮಿಕೊಂಡ ಮತದಾನದ ಬಗೆಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗೌರವ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಕಳ ಬಿ.ಇ.ಒ ವಿಭಾಗದ ಶಿಕ್ಷಣ ಸಂಯೋಜಕ ಶಿವಾನಂದ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಬಗೆಗೆ ವಿವರಿಸಿದರು. ರೆಂಜಾಳ ಸರ್ಕಾರಿ ಶಾಲೆಯ ಉಪಾಧ್ಯಾಯ ಹಾಗೂ ತಾಲೂಕು ಮಟ್ಟದ ಎಸ್.ವಿ.ಇ.ಇ.ಪಿ ಸಂಪನ್ಮೂಲ ವ್ಯಕ್ತಿ ವಿನಾಯಕ ರೆಂಜಾಳ ವಿವಿಧ ವೀಡಿಯೋಗಳ ಮೂಲಕ ವಿದ್ಯಾರ್ಥಿಗಳಲ್ಲಿ ಮತದಾನದ ಮಹತ್ವದ ಬಗೆಗೆ ಜಾಗೃತಿ ಮೂಡಿಸಿದರು. ಕಾರ್ಕಳ ಎಂ.ಪಿ.ಎಂ ಪ್ರಥಮ ದರ್ಜೆ ಕಾಲೇಜಿನ ಕೃಷ್ಣಮೂರ್ತಿ ವೈದ್ಯ ಮತಯಂತ್ರ ಹಾಗೂ ವಿ.ವಿ.ಪ್ಯಾಟ್ ಬಗೆಗೆ ವಿದ್ಯಾರ್ಥಿಗಳಲ್ಲಿದ್ದ ಗೊಂದಲವನ್ನು ನಿವಾರಿಸಿದರು. ಮತದಾನದ ಅಣಕು ಪ್ರಾತ್ಯಕ್ಷಿಕೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ| ನಿರಂಜನ್ ಎನ್ ಚಿಪ್ಳೂಣRರ್ ಮಾತನಾಡಿ, ದೇಶದ ಪ್ರಗತಿಗಾಗಿ ನಾವು ಮತಚಲಾಯಿಸಬೇಕು. ಮತದಾನ ಎಂಬುದನ್ನು ನಮ್ಮ ಕರ್ತವ್ಯ ಎಂಬುದನ್ನು ನಾವು ಮರೆಯಬಾರದು. ದೂರದ ಊರಿನ ವಿದ್ಯಾರ್ಥಿಗಳಿಗೂ ಮತದಾನದಿಂದ ಹಿಂದೇಟು ಹಾಕಬಾರದು ಎಂದರು.
ವಿದ್ಯಾರ್ಥಿ ನಿಲಯದ ವಾರ್ಡನ್ ಡಾ|ಉದಯಕುಮಾರ್ ಶೆಣೈ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶೇಖರ್ ಪೂಜಾರಿ ಉಪಸ್ಥಿತರಿದ್ದರು.ನಿಟ್ಟೆ ತಾಂತ್ರಿಕ ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್‌ನ ನೋಡಲ್ ಆಫೀಸರ್ ಡಾ| ಎಸ್.ಕೆ.ಮಹದೇವೇಗೌಡ ಸ್ವಾಗತಿಸಿದರು. ನಿಟ್ಟೆ ಕ್ಯಾಂಪಸ್‌ನ ರಿಜಿಸ್ಟ್ರಾರ್ ಪೊ›| ಯೋಗೀಶ್ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚುನಾವಣಾ ಸಾಕ್ಷರತಾ ಕ್ಲಬ್‌ನ ವಿದ್ಯಾರ್ಥಿ ನಾಯಕ ಕಾರ್ತಿಕ್ ವಿ ಶೇಟ್ ಪ್ರಾರ್ಥಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಸಾರ್ವಜನಿಕ ಸಂಪರ್ಕ ವಿಭಾಗದ ಅಧಿಕಾರಿ ಕೃಷ್ಣರಾಜ ಜೋಯಿಸ ವಂದಿಸಿದರು. ಚುನಾವಣಾ ಸಾಕ್ಷರತಾ ಕ್ಲಬ್‌ನ ವಿದ್ಯಾರ್ಥಿ ನಾಯಕ ಕಿಶನ್ ಕಾರ್ಯಕ್ರಮ ನಿರೂಪಿಸಿದರು.