Advertisement

ನ್ಯಾಯಾಧೀಶರಿಗೆ ಮತಯಂತ್ರದ ಮಾಹಿತಿ

10:07 AM Apr 12, 2018 | Team Udayavani |

ಕಲಬುರಗಿ: ಕಲಬುರಗಿ ಹೈಕೋರ್ಟ್‌ ನ್ಯಾಯಾಧಿಧೀಶರಿಗೆ ಹಾಗೂ ಸಿಬ್ಬಂದಿಗೆ ಜಿಲ್ಲಾಡಳಿತದ ವತಿಯಿಂದ ಕಲಬುರಗಿ
ಹೈಕೋರ್ಟ್‌ನಲ್ಲಿ ಎಲೆಕ್ಟ್ರಾನಿಕ್‌ ಮತಯಂತ್ರ ಮತ್ತು ವಿವಿ ಪ್ಯಾಟ್‌ (ಮತ ಖಾತ್ರಿ ಯಂತ್ರ) ಕುರಿತು ಮಾಹಿತಿ ನೀಡಲಾಯಿತು.

Advertisement

ಕಲಬುರಗಿ ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌.ಜಿ. ರಮೇಶ, ನ್ಯಾಯಮೂರ್ತಿ ಎಸ್‌. ಎನ್‌. ಸತ್ಯನಾರಾಯಣ, ನ್ಯಾಯಮೂರ್ತಿ ಆರ್‌. ದೇವದಾಸ ಹಾಗೂ ಹೈಕೋರ್ಟ್‌ ಸಿಬ್ಬಂದಿಗೆ ಭಾರತ ಇಲೆಕ್ಟ್ರಿಕಲ್‌ ಲಿಮಿಲಿಟೆಡ್‌ ನ ಇಂಜಿನಿಯರ್‌ ನರೇಂದ್ರ ಕೌಶಿಕ ಎಲೆಕ್ಟ್ರಾನಿಕ್‌ ಮತಯಂತ್ರ ಮತ್ತು ವಿವಿ ಪ್ಯಾಟ್‌ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಎಲೆಕ್ಟ್ರಾನಿಕ್‌ ಮತಯಂತ್ರದೊಂದಿಗೆ ವಿವಿ ಪ್ಯಾಟ್‌ ಯಂತ್ರ ಬಳಸಲಾಗುತ್ತಿದೆ. ವಿವಿ ಪ್ಯಾಟ್‌ ಯಂತ್ರದಲ್ಲಿ ಮತದಾರ ತಾನು ಯಾವ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದು.

ಒಂದು ವಿವಿ ಪ್ಯಾಟ್‌ನಲ್ಲಿ 1500 ಮತಗಳನ್ನು ಸಂಗ್ರಹಿಸಬಹುದಾಗಿದೆ. ಒಂದು ಬ್ಯಾಲೆಟ್‌ ಯುನಿಟ್‌ನಲ್ಲಿ 16 ಜನ ಅಭ್ಯರ್ಥಿಗಳ ಹೆಸರನ್ನು ಪ್ರದರ್ಶಿಸಬಹುದು.ಯಾವುದೇ ಮತಕ್ಷೇತ್ರದಲ್ಲಿ 16 ಜನಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಕಣದಲ್ಲಿದ್ದರೆ ಎರಡು ಅಥವಾ ಹೆಚ್ಚು ಬ್ಯಾಲೆಟ್‌ ಯುನಿಟ್‌ಗಳನ್ನು ಜೋಡಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ಮತದಾನದ ದಿನದಂದು ಅಣುಕು ಮತದಾನ ಮಾಡಿದಾಗ ಅಣುಕು ಮತದಾನದಲ್ಲಿ ಮಾಡಿರುವ ಮತದಾನದಷ್ಟು ವಿವಿ ಪ್ಯಾಟ್‌ನಲ್ಲಿ ರಸೀದಿಗಳು ಸಂಗ್ರಹವಾಗಿರುವುದನ್ನು ಎಣಿಕೆ ಮಾಡಿ ತಾಳೆ ಮಾಡಲಾಗುವುದು.

Advertisement

ವಿವಿ ಪ್ಯಾಟ್‌ನಲ್ಲಿ ಏಳು ಸೆಕೆಂಡಗಳ ಕಾಲ ಪ್ರದರ್ಶನವಾಗುವ ಚೀಟಿಯಲ್ಲಿ ಪಕ್ಷದ ಅಭ್ಯರ್ಥಿ ಹೆಸರು, ಪಕ್ಷದ ಚಿಹ್ನೆ, ಬ್ಯಾಲೆಟ್‌ ಪೇಪರ್‌ನಲ್ಲಿರುವ ಅಭ್ಯರ್ಥಿಗಳ ಸಂಖ್ಯೆ ಹಾಗೂ ಅವಶ್ಯಕ ಮಾಹಿತಿಗಳು ಮುದ್ರಣವಾಗಿ ಪ್ರದರ್ಶನವಾಗುತ್ತದೆ ಎಂದು ನ್ಯಾಯಮೂರ್ತಿಗಳಿಗೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಮಾಹಿತಿ ನೀಡಿದರು.

ಕಲಬುರಗಿ ಹೈಕೋರ್ಟ್‌ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್‌ ಜನರಲ್‌ ಕೆ.ಬಿ. ಅಸೂದೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಆರ್‌. ಮಾಣಿಕ್ಯ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಚುನಾವಣಾ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಬಿ.ಇ.ಎಲ್‌. ಇಂಜಿನಿಯರ್‌ ಶಿವಕುಮಾರ, ಮಾಸ್ಟರ್‌ ತರಬೇತಿದಾರ ಶಶಿಶೇಖರ ರಡ್ಡಿ ಮತ್ತಿತರರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next