Advertisement

ಇಂದು ಜಯನಗರದಲ್ಲಿ ಮತದಾನ

11:53 AM Jun 11, 2018 | Team Udayavani |

ಬೆಂಗಳೂರು: ಜಯನಗರ ವಿಧಾನಸಭೆ ಚುನಾವಣೆಗೆ ಸೋಮವಾರ (ಜೂ.11) ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಕ್ಷೇತ್ರದ 2.03 ಲಕ್ಷ ಮತದಾರರು ಕಣದಲ್ಲಿರುವ 19 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. 

Advertisement

ಕ್ಷೇತ್ರದಲ್ಲಿ 1,02,668 ಪುರುಷರು, 1,00,500 ಮಹಿಳೆಯರು ಹಾಗೂ ಇತರರು 16  ಸೇರಿ ಒಟ್ಟು 2,03,184 ಮತದಾರರಿದ್ದಾರೆ. ಮತದಾನಕ್ಕೆ ಕ್ಷೇತ್ರದ ವ್ಯಾಪ್ತಿಗೆ ಬರುವ ಏಳು ವಾರ್ಡ್‌ಗಳಲ್ಲಿ 216 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 5 ಪಿಂಕ್‌ (ಸಖೀ) ಮತಗಟ್ಟೆಗಳಿವೆ.

50 ಮತಗಟ್ಟೆಗಳಿಗೆ ವೆಬ್‌ಕಾಸ್ಟಿಕಂಗ್‌ ಸೌಲಭ್ಯ ಒದಗಿಸಲಾಗಿದೆ. 15 ಮತದಾನ ಸ್ಥಳಗಳಲ್ಲಿ ವೀಡಿಯೋಗ್ರಫಿ ವ್ಯವಸ್ಥೆ ಮಾಡಲಾಗುತ್ತಿದೆ. ಸೂಕ್ಷ್ಮ ಮತಗಟ್ಟೆಗಳಿಗೆ 60 ಮಂದಿ ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ.  ಮತದಾನ ಕಾರ್ಯಕ್ಕೆ 1,400 ಸಿಬ್ಬಂದಿ ನೇಮಕ ಮಾಡಲಾಗಿದೆ. ಜೊತೆಗೆ 31 ಬಿಎಂಟಿಸಿ ಬಸ್‌, 7 ಮಿನಿ ಬಸ್‌,

2 ಟಾಟಾ ಸುಮೋ, 10 ಟೆಂಪೋ ಟ್ರಾವೆಲರ್‌ಗಳನ್ನು ಮತದಾನ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಮತದಾನ ಕೇಂದ್ರಗಳ ಮೇಲ್ವಿಚಾರಣೆಗೆ 29 ಸೆಕ್ಟರ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಶಾಂತಿಯುತ ಮತದಾನಕ್ಕೆ ಸ್ಥಳೀಯ ಪೊಲೀಸರಲ್ಲದೇ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 10 ಕಂಪೆನಿಗಳನ್ನು ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next