Advertisement
ಪ್ರಾಥಮಿಕ ವಾದ ಆಲಿಸಿದ ಬಳಿಕ, ಈ ವಿಷಯದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ. ನಿಮ್ಮ ಬೇಡಿಕೆ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ, ಅದು ಪರಿಶೀಲಿಸಲಿದೆ. ಹಾಗಾಗಿ, ಅರ್ಜಿ ವಾಪಸ್ ಪಡೆಯಿರಿ, ಇಲ್ಲದಿದ್ದರೆ ದಂಡ ವಿಧಿಸಬೇಕಾಗುತ್ತದೆ ಎಂದುಅರ್ಜಿದಾರರಿಗೆ ನ್ಯಾಯಪೀಠ ಎಚ್ಚರಿಕೆ ಸಹ ನೀಡಿತು. ಇದಕ್ಕೆ, ಅರ್ಜಿ ವಾಪಸ್ ಪಡೆಯಲು ಅರ್ಜಿದಾರರು ಸಮ್ಮತಿಸಿದರು. ಬಳಿಕ ಚುನಾವಣಾ ಆಯೋಗದ ಮುಂದೆ ಬೇಡಿಕೆ ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ನೀಡಿದ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥಪಡಿಸಿತು.