Advertisement

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

02:45 PM May 07, 2024 | Team Udayavani |

ಗಂಗಾವತಿ: ಮೂಲಸೌಕರ್ಯ ಕಲ್ಪಿಸುವಂತೆ ಮತ್ತು ಮನೆಗಳಿಗೆ ಪಟ್ಟಾ ವಿತರಣೆ ಮಾಡುವಂತೆ ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡಿದ್ದ ತಾಲೂಕಿನ ಚಿಕ್ಕರಾಂಪೂರ ಗ್ರಾಮಸ್ಥರ ಸಭೆ ನಡೆಸಿ ಜಿಲ್ಲಾಡಳಿತ ಹಾಗೂ ರಾಜಕೀಯ ಮುಖಂಡರ ಮನವೊಲಿಕೆಯ ನಂತರ ಮತದಾನ ಮಾಡಲು ಚಿಕ್ಕರಾಂಪೂರ ಗ್ರಾಮಸ್ಥರು ಒಪ್ಪಿಕೊಂಡು ಮತಗಟ್ಟೆಗೆ ತೆರಳಿ ಮತದಾನ ಆರಂಭಿಸಿದ್ದಾರೆ.

Advertisement

ಸಭೆಯಲ್ಲಿ ಚುನಾವಣಾ ರಾಯಭಾರಿ ಡಾ.ಶಿವಕುಮಾರ, ಕುಮಾರಿ ಸಿಂಧೂ, ಸುದರ್ಶನ ವರ್ಮಾ, ನಾರಾಯಣಪೇಟೆಯ ವಿಶ್ವನಾಥ ರಾಜು ಮನೆಗಳಿಗೆ ಪಟ್ಟಾ ವಿತರಣೆ ,ಅರಣ್ಯ ಇಲಾಖೆಯ ಕಿರುಕುಳ ತಪ್ಪಿಸಲು ಚುನಾವಣೆಯ ನಂತರ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಮನವಿ ಮಾಡಿ ಸಮಸ್ಯೆ ಇತ್ಯರ್ಥ ಕ್ಕೆ ಎಲ್ಲರೂ ಕೂಡಿ ಪ್ರಯತ್ನಿಸೋಣ ಸದ್ಯ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿದರು.

ಇದನ್ನೂ ಓದಿ: Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

Advertisement

Udayavani is now on Telegram. Click here to join our channel and stay updated with the latest news.

Next