Advertisement
ಬೆಂಗಳೂರಿನ ವಿಜಯನಗರದ ಹಂಪಿನಗರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು, ಬಿಜೆಪಿ ಕಾರ್ಪೋರೇಟರ್ ಮೇಲೆ ಹಲ್ಲೆಯಾಗಿದೆ. ಈ ಸಂಬಂಧ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ.
Related Articles
Advertisement
ಮತಗಟ್ಟೆ ಅಧಿಕಾರಿ ಜತೆ ವಾಗ್ವಾದ: ನರಗುಂದದ ಅಧ್ಯಾಪಕ ನಗರದ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಿಆರ್‌ಒ ಮತಯಂತ್ರ ಬಳಿ ನಿಂತು ಮತದಾರರಿಂದ ಮತ ಹಾಕಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲ ಅವರು ಪಿಆರ್‌ಒ ಅವರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಜಿಲ್ಲಾಧಿಕಾರಿ ಮನೋಜ್ಜೈನ್, ಕ್ಷೇತ್ರ ಚುನಾವಣಾಧಿಕಾರಿ ಸದಾಶಿವ ಮರ್ಜಿಗೆ ದೂರವಾಣಿ ಕರೆ ಮಾಡಿ ಕೂಡಲೇ ಪಿಆರ್‌ಒ ಬದಲಾಯಿಸುವಂತೆ ಒತ್ತಾಯಿಸಿದರು. ಕಾಶಪ್ಪನವರ, ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ: ಬಾಗಲಕೋಟೆ ಜಿಲ್ಲೆ ಇಳಕಲ್ಲ ಪಟ್ಟಣದ ನೇಕಾರ ಕಾಲೋನಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಸಕ ವಿಜಯಾನಂದ ಕಾಶಪ್ಪನವರ ಮತಗಟ್ಟೆಗೆ ಬಂದಾಗ ಬಿಜೆಪಿ ಕಾರ್ಯಕರ್ತರು ಬಿಜೆಪಿ ಪರ ಘೋಷಣೆ ಕೂಗಿದರು. ಈ ವೇಳೆ, ಶಾಸಕರು ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದ್ದು, ಕೈ ಕೈ ಮಿಲಾಯಿಸಿದರು. ಗಾಯ ಗೊಂಡ ಇಬ್ಬರು ಬಿಜೆಪಿ ಕಾರ್ಯಕರ್ತರು ಇಳಕಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಇದೇ ವೇಳೆ, ಬಾದಾಮಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಕಾರಿನ ಗಾಜು ಪುಡಿಪುಡಿ
ಹೊಳೆನರಸೀಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಪಿ. ಮಂಜೇಗೌಡ ಅವರು ಪರಸನಹಳ್ಳಿ ಮತಗಟ್ಟೆಗೆ ಆಗಮಿಸುತ್ತಿದ್ದಂತೆ ಅವರ ವಿರುದಟಛಿ ಜೆಡಿಎಸ್ ಕಾರ್ಯಕರ್ತರು, ಕಾರಿನ ಮೇಲೆ ಕಲ್ಲುಗಳನ್ನು ಬೀಸಿದರು. ಅವರ ಕಾರಿನ ಹಿಂಭಾಗದ ಇಂಡಿಕೇಟರ್ ಗಳು, ಬಲಭಾಗದ ಬಾಗಿಲ ಗಾಜು ಪುಡಿಯಾಗಿದೆ.ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ರಮಾಬಾಯಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಣ ಹಂಚುತ್ತಿದ್ದಾರೆಂದು ಆರೋಪಿಸಿ, ಜೆಡಿಎಸ್ ಕಾರ್ಯಕರ್ತರು ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿದರು.