Advertisement

ಇಂದು ಮತಗಟ್ಟೆಗೆ ಮತದಾರರು

04:56 PM Oct 21, 2019 | sudhir |

ಕಾಸರಗೋಡು : ಮಂಜೇಶ್ವರ ವಿಧಾನ ಸಭಾ ಉಪಚುನಾವಣ ಪ್ರಚಾರಕ್ಕೆ ಅ. 19ರಂದು ಸಂಜೆ ವೈವಿಧ್ಯಮಯ ಅಬ್ಬರದ ಪ್ರಚಾ ರಕ್ಕೆ ತೆರೆ ಬಿದ್ದಿದ್ದು, ಅ. 21ರಂದು ಸೋಮವಾರ ನಡೆಯುವ ಮತದಾನಕ್ಕೆ ಚುನಾವಣ ಸಾಮಗ್ರಿಗಳನ್ನು ಆಯಾಯ ಮತಗಟ್ಟೆಗಳಿಗೆ ಸಾಗಿಸಲಾಯಿತು. ತಮ್ಮ ನೇತಾ ರ ನ‌ನ್ನು ಆಯ್ಕೆ ಮಾಡಲು ಮತದಾರರು ಅ. 21ರಂದು ಮತಗಟ್ಟೆಗೆ ತೆರಳಲಿದ್ದಾರೆ.

Advertisement

ಪೈವಳಿಕೆ ನಗರ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಅ. 20ರಂದು ಬೆಳಗ್ಗೆ ಚುನಾವಣ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಕೇಂದ್ರದಲ್ಲಿ ಸಜ್ಜುಗೊಳಿಸಿದ್ದ ಕೌಂಟರ್‌ಗಳ ಮೂಲಕ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಬೆಳಗ್ಗೆ ವಿತರಣೆ ಆರಂಭಿಸಲಾಗಿತ್ತು.

ಆಯಾಯ ಮತ ಗಟ್ಟೆಗಳಿಗೆ ನೀಡುವ ಇಲೆಕ್ಟ್ರೋನಿಕ್‌ ವೋಟಿಂಗ್‌ ಯಂತ್ರಗಳನ್ನು ಪೈವಳಿಕೆ ನಗರ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯ ಭದ್ರ ಕೊಠಡಿಯಿಂದ ಸಂಬಂಧಿತ ಮತ ಗಟ್ಟೆಯ ಕರ್ತವ್ಯದಲ್ಲಿರುವ ಸಿಬಂದಿ ಪಡೆದುಕೊಂಡರು. ಚುನಾವಣಾ ಸಾಮಗ್ರಿಗಳನ್ನು ಕೊಂಡೊಯ್ಯಲು ಹಾಗೂ ಅಧಿಕಾರಿಗಳ ಸಹಿತ ಸಿಬಂದಿಯನ್ನು ಆಯಾಯ ಮತಗಟ್ಟೆಗಳಿಗೆ ತಲುಪಿಸಲು ಬಸ್‌ ಮೊದಲಾದ ವಾಹನಗಳನ್ನು ಬಳಸಲಾಗಿದೆ.

ಕಣದಲ್ಲಿರುವ ಅಭ್ಯರ್ಥಿಗಳು
ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಾಗಿ ಏಳು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಐಕ್ಯರಂಗದಿಂದ ಮುಸ್ಲಿಂ ಲೀಗ್‌ ಅಭ್ಯರ್ಥಿ ಎಂ.ಸಿ. ಕಮರುದ್ದೀನ್‌, ಎನ್‌.ಡಿ.ಎ. ಯಿಂದ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು, ಎಡರಂಗ ದಿಂದ ಸಿಪಿಎಂನ ಎಂ. ಶಂಕರ ರೈ ಮಾಸ್ತರ್‌, ಸ್ವತಂತ್ರ ಅಭ್ಯರ್ಥಿಗಳಾಗಿ ಗೋವಿಂದನ್‌ ಬಿ. ಆಲಿಂತಾಯ, ಕಮರುದ್ದೀನ್‌ ಎಂ.ಸಿ., ಜೋನ್‌ ಡಿ’ಸೋಜ ಐ., ರಾಜೇಶ್‌ ಬಿ. ಕಣದಲ್ಲಿದ್ದಾರೆ.

Advertisement

ಉಪಚುನಾವಣೆ
ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಅಬ್ದುಲ್‌ ರಝಾಕ್‌ ಅವರ ನಿಧನದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯುತ್ತಿದೆ.

ಮೊಬೈಲ್‌ ನಿಷೇಧ
ಮತಗಟ್ಟೆಗಳ 100 ಮೀ. ವ್ಯಾಪ್ತಿಯಲ್ಲಿ ಪೋಲಿಂಗ್‌ ಏಜೆಂಟರು ಬಳಸುವ ಮೊಬೈಲ್‌ ಫೋನ್‌ ಸಹಿತ ವಿದ್ಯುನ್ಮಾನ ಉಪಕರಣಗಳನ್ನು ತರಬಾರದು ಎಂದು ಜಿಲ್ಲಾ ಚುನಾವಣೆ ಅಧಿ ಕಾರಿಯಾಗಿರುವ ಜಿಲ್ಲಾ ಧಿಕಾರಿ ಡಾ| ಡಿ. ಸಜಿತ್‌ ಬಾಬು ತಿಳಿಸಿದ್ದಾರೆ.

ವೀಡಿಯೋ ಚಿತ್ರೀಕರಣ
ಎಲ್ಲ ಮತಗಟ್ಟೆಗಳಲ್ಲಿ ಮತದಾನದ ವೀಡಿಯೋ ಚಿತ್ರೀಕರಣ ನಡೆಸಲಾಗುವುದು ಎಂದು ಡಿ.ಸಿ. ಡಾ| ಡಿ. ಸಜಿತ್‌ ಬಾಬು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next