ಪಣಜಿ: ಗೋವಾದಲ್ಲಿ ಮತದಾರರು ಬಿಜೆಪಿಯ ಮೇಲೆ ಬೇಸರವಾಗಿದ್ದಾರೆ ಎಂದು ರಾಜ್ಯದಲ್ಲಿ ವಿರೋಧ ಪಕ್ಷಗಳು ಹೇಳುತ್ತಿವೆ. ಆದರೆ ಪ್ರತ್ಯಕ್ಷವಾಗಿ ರಾಜ್ಯದಲ್ಲಿ ಮತದಾರರು ಬಿಜೆಪಿಯ ಮೇಲೆ ಬೇಸರವಾಗಿಲ್ಲ. ಮತದಾರರು ಬೇಸರವಾಗಿದ್ದರೆ ರಾಜ್ಯ ಜಿ.ಪಂ ಚುನಾವಣೆಯಲ್ಲಿ ಮತ್ತು ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸುತ್ತಿರಲಿಲ್ಲ ಎಂದು ಗೋವಾ ಬಿಜೆಪಿ ಪ್ರಭಾರಿ ಸಿ.ಟಿ ರವಿ ನುಡಿದಿದ್ದಾರೆ.
ಮಡಗಾಂವನಲ್ಲಿ ಶನಿವಾರ ಬಿಜೆಪಿ ಗೋವಾ ಪ್ರಭಾರಿ ಸಿ.ಟಿ.ರವಿ ಬಿಜೆಪಿಯ ಇ-ಬುಕ್ ಉಧ್ಘಾಟನೆ ನೆರವೇರಿಸಿದರು.
ಇದನ್ನೂ ಓದಿ: ವಿಂಡೀಸ್ ಕಟ್ಟಿದ ಹಾಕಿದ ಶಮ್ಸಿ ಬಿಗು ದಾಳಿ: ದಕ್ಷಿಣ ಆಫ್ರಿಕಾಗೆ ಸರಣಿ ಜಯ
ದೇಶದಲ್ಲಿ ಮತ್ತು ಗೋವಾ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಗೋವಾದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಗೋವಾ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಸ್ಫರ್ಧಿಸಲು ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಚುನಾವಣೆ ಘೋಷಣೆಯಾದ ನಂತರ ನಿರ್ಣಯ ತೆಗೆದುಕೊಳ್ಳಲಾಗುವುದು. ಸ್ಥಳಿಯ ಮಟ್ಟದಲ್ಲಿ ಗಟ ಸಮಿತಿ ಸಂಭಾವ್ಯ ಉಮೇದುವಾರರ ಪಟ್ಟಿಯನ್ನು ಸಿದ್ಧಪಡಿಸಲಿದ್ದು, ಈ ಕುರಿತು ಕೇಂದ್ರ ಸಮಿತಿ ಚರ್ಚೆ ನಡೆಸಿ ಯೋಗ್ಯ ನಿರ್ಣಯ ತೆಗೆದುಕೊಳ್ಳಲಿದೆ ಎಂದು ಸಿ.ಟಿ ರವಿ ನುಡಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ, ಉಪಮುಖ್ಯಮಂತ್ರಿ ಬಾಬು ಕವಳೇಕರ್, ಮಾಜಿ ಸಂಸದ ನರೇಂದ್ರ ಸಾವೈಕರ್, ಮಾಜಿ ಸಚಿವ ರಮೇಶ ತವಡಕರ್ ಉಪಸ್ಥಿತರಿದ್ದರು.