Advertisement
ಸಮೀಪದ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ವಡಾಹೊಸಳ್ಳಿಯಲ್ಲಿ ನಡೆದ ಜೆಡಿಎಸ್ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು. ಶಾಸಕ ಕಿಮ್ಮನೆ ರತ್ನಾಕರ ಅವರಿಗೆ ರಾಜಕೀಯ ಜನ್ಮ ನೀಡಿದ್ದು, ಜೆಡಿಎಸ್ ಪಕ್ಷ. ಅಂದು ರೈತರಿಗೆ ಹಕ್ಕುಪತ್ರ ಕೊಡಿಸುವುದಾಗಿ ಪಾದಯಾತ್ರೆ ಮಾಡಿ ಆಡಳಿತ ಪಕ್ಷದಲ್ಲಿದ್ದರೂ ಸಮಗ್ರ ಹಕ್ಕುಪತ್ರ ನೀಡಲು ಏಕೆ ಸಾಧ್ಯವಾಗಿಲ್ಲ. ವಿರೋಧ ಪಕ್ಷದಲ್ಲಿರುವ ನಾನು ರೈತರಿಗೆ ಬಗರ್‌ಹುಕುಂ ಹಕ್ಕುಪತ್ರ ನೀಡಿಕೆಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದೇನೆ. ಮಂತ್ರಿಯಾಗಿ ಇವರು ಮಾಡಿದ ಸಾಧನೆ ಏನು ಎಂಬುದು ಜನತೆಗೆ ತಿಳಿಸಬೇಕಿದೆ. ಮಾಜಿ ಶಾಸಕ ಸ್ವಾಮಿರಾವ್ ಅವರಿಗೆ ರಾಜಕೀಯದಲ್ಲಿ ಗುರುತಿಸುವಂತೆ ಮಾಡಿದ್ದು, ಬಂಗಾರಪ್ಪ. ಜೈಲಿಗೆ ಹೋಗಿ ಬಂದವರ ಜೊತೆಯಲ್ಲಿ ವೇದಿಕೆಯಲ್ಲಿ ಕುಳಿತುಕೊಂಡು ನನ್ನ ಸಾಚಾತನವನ್ನು ಅವರು ಪರೀಕ್ಷಿಸುತ್ತಿದ್ದಾರೆ. ಇಂತಹ ಸೋಗಲಾಡಿತನ ನಿಲ್ಲಿಸಿ ರೈತರ ಪರ ಧ್ವನಿಗೂಡಿಸುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.
ಸಾಬೀತಾಗಿದೆ. ರಾಜ್ಯದ ಹಿತವನ್ನು ಕಾಪಾಡುವುದು ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನಿಂದ ಮಾತ್ರ ಸಾಧ್ಯ, ಈ ಬಾರಿ ರಾಜ್ಯದ ಜನರ ಆಶೀರ್ವಾದದಿಂದ ಜೆಡಿಎಸ್ ಸ್ವತಂತ್ರವಾಗಿ ಸರಕಾರ ರಚಿಸಲಿದೆ. ತೀರ್ಥಹಳ್ಳಿ ಕ್ಷೇತ್ರದಿಂದ ಆರ್. ಎಂ. ಮಂಜುನಾಥಗೌಡರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿಎಂದು ಮನವಿ ಮಾಡಿದರು. ಟೂರಿಂಗ್ ಟೆಂಟ್ ಹಾಲಪ್ಪ: ಮಾಜಿ ಸಚಿವ ಹಾಲಪ್ಪ ಬಂಗಾರಪ್ಪನವರ ಕೃಪೆಯಿಂದ ಹೊಸನಗರ ಕ್ಷೇತ್ರದಲ್ಲಿ ಶಾಸಕರಾಗಿ, ನಂತರ
ಸೊರಬ ಕ್ಷೇತ್ರಕ್ಕೆ ಪಲಾಯನ ಮಾಡಿದರು. ಈಗ ಅಲ್ಲಿಯೂ ಅವರನ್ನ ಎತ್ತಂಗಡಿ ಮಾಡಿದ್ದೇನೆ. ಎಲ್ಲಿಯೂ ನೆಲೆಯಿಲ್ಲದೆ ಈಗ
ಸಾಗರ ಕ್ಷೇತ್ರದಲ್ಲಿ ಅಲೆಯುತ್ತಿರುವ ವ್ಯಕ್ತಿ ಟೂರಿಂಗ್ ಟೆಂಟ್ ಹಾಲಪ್ಪ ಎಂದು ಮಧು ಬಂಗಾರಪ್ಪ ಲೇವಡಿ ಮಾಡಿದರು.
Related Articles
Advertisement