Advertisement

ಜಿಲ್ಲಾದ್ಯಂತ ಮತದಾರರ ನೋಂದಣಿ ಅಭಿಯಾನ

12:20 PM Apr 09, 2018 | Team Udayavani |

ಬೀದರ: ಜಿಲ್ಲಾದ್ಯಂತ ರವಿವಾರ ಎಲ್ಲ ವಿಧಾನಸಭಾ ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳಲ್ಲಿ ಮಿಂಚಿನ ಮತದಾರರ ನೋಂದಣಿ ಅಭಿಯಾನ ನಡೆಯಿತು.

Advertisement

ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಆಯಾ ಮತಗಟ್ಟೆಗಳ ಅಧಿಕಾರಿಗಳು (ಬಿಎಲ್‌ಒ) ತಮ್ಮ ತಮ್ಮ ಮತಗಟ್ಟೆಗಳಲ್ಲಿ ಕುಳಿತು ಇದುವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸದೇ ಇರುವವರ ಹೆಸರನ್ನು ಮತದಾರರ ಪಟ್ಟಿಗೆ ನೋಂದಾಯಿಸಿಕೊಂಡರು. ಅಭಿಯಾನದಲ್ಲಿ ಮತಗಟ್ಟೆ ಮಟ್ಟದ ಜಾಗೃತಿ ತಂಡಗಳು ಪಾಲ್ಗೊಂಡು, ಮನೆಮನೆಗೆ ತೆರಳಿ, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಏಪ್ರಿಲ್‌ 14ರ ವರೆಗೆ ಅವಕಾಶವಿದೆ ಎಂದು ಎಲ್ಲ ಮತದಾರರಿಗೆ ಜಾಗೃತಿ ಮೂಡಿಸಿ ಅಭಿಯಾನಕ್ಕೆ ಸಾಥ್‌ ನೀಡಿದರು.

ಕಾಲೇಜು ವಿದ್ಯಾರ್ಥಿಗಳು ಕೂಡ ಆನ್‌ ಲೈನ್‌ನಲ್ಲಿ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಂಡರು. ಈ ಅಭಿಯಾನದಲ್ಲಿ ಕಾಲೇಜು ರಾಯಭಾರಿಗಳು (ಕ್ಯಾಂಪಸ್‌ ಅಂಬಾಸೀಡರ್‌), ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ), ಸ್ವಯಂ ಸೇವಾ ಸಂಸ್ಥೆಗಳು (ಎಸ್‌ಎಸ್‌ಜಿ) ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳು ಪಾಲ್ಗೊಂಡಿದ್ದವು. ಭಾರತ ಚುನಾವಣಾ ಆಯೋಗ ಹಾಗೂ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಸಹಭಾಗಿತ್ವ ಸಮಿತಿ (ಸೀಪ್‌)-2018 ಬೀದರ ಇವರ ಆಶ್ರಯದಲ್ಲಿ ಈ ಅಭಿಯಾನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next