Advertisement

Voter List: ಕರಡು ಮತದಾರರ ಪಟ್ಟಿ ಪ್ರಕಟ: 221 ಕ್ಷೇತ್ರಗಳಲ್ಲಿ 5.44 ಕೋಟಿ ಮತದಾರರು

03:35 AM Oct 30, 2024 | Team Udayavani |

ಬೆಂಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 221 ಕ್ಷೇತ್ರಗಳ 2025ರ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಅದರಂತೆ ಒಟ್ಟು 5.44 ಕೋಟಿ ಮತದಾರರು ಇದ್ದಾರೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿಲ್ಲ.

Advertisement

ಇದೇ ವೇಳೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆಗೆ ಅ. 29ರಿಂದ ರಾಜ್ಯಾದ್ಯಂತ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025′ ಅಭಿಯಾನ ಆರಂಭಿಸಿದೆ. 2025ರ ಜನವರಿ 1ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ.

ಕರಡು ಮತದಾರರ ಪಟ್ಟಿ ಪರಿಷ್ಕರಣೆಗೆ ಹಕ್ಕುಗಳು ಮತ್ತು ಆಕ್ಷೇಪಣೆ ಸಲ್ಲಿಸಲು ಅ. 29ರಿಂದ ನವೆಂಬರ್‌ 24ರ ವರೆಗೆ ಅವಕಾಶ ಇರಲಿದೆ. ಹೆಸರು ಸೇರ್ಪಡೆ, ಬದಲಾವಣೆ, ತಿದ್ದುಪಡಿಗಳಿಗೆ ನವೆಂಬರ್‌ 9-10 ಹಾಗೂ 23-24 (ಶನಿವಾರ-ರವಿವಾರ) ವಿಶೇಷ ದಿನಾಂಕ ಇರಲಿದೆ. ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಡಿಸೆಂಬರ್‌ 24ಕ್ಕೆ ವಿಲೇವಾರಿ ಮಾಡಲಾಗುತ್ತದೆ. 2025ರ ಜನವರಿ 6ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.

ವಿಧಾನಸಭಾ ಕ್ಷೇತ್ರವಾರು ಕರಡು ಮತದಾರರ ಪಟ್ಟಿಯು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ವೆಬ್‌ಸೈಟ್‌ ಹಾಗೂ ಆಯಾ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


3.60 ಲಕ್ಷ ಹೆಸರು ಡಿಲೀಟ್‌

2024ರ ಅಂತಿಮ ಮತದಾರರ ಪಟ್ಟಿಯಿಂದ 2025ರ ಕರಡುಪಟ್ಟಿವರೆಗೆ ವಿವಿಧ ಕಾರಣಗಳಿಗೆ ಒಟ್ಟು 3.60 ಲಕ್ಷ ಹೆಸರಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ (ಅಳಿಸಲಾಗಿದೆ). ಇದರಲ್ಲಿ 1 ಲಕ್ಷಕ್ಕೂ ಅಧಿಕ ಮರಣ ಪ್ರಕರಣಗಳಿದ್ದರೆ, 21,370 ಸಾವಿರ ಗೈರು, 32,950 ಎರಡು ಬಾರಿ ನೋಂದಣಿ, 2.04 ಲಕ್ಷ ಶಾಶ್ವತ ಸ್ಥಳಾಂತರ ಹಾಗೂ 1 ಸಾವಿರ ಇತರ ಕಾರಣಗಳ ಪ್ರಕರಣಗಳಿವೆ. ನಿಗದಿತ ಅರ್ಜಿ ನಮೂನೆ 7 ಸ್ವೀಕರಿಸಿ, ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

ಅರ್ಜಿ ಸಲ್ಲಿಸುವ ವಿಧಾನ
ನಮೂನೆ-6: ಹೊಸ ಮತದಾರರ ಸೇರ್ಪಡೆಗೆ ಅರ್ಜಿ.
ನಮೂನೆ 6ಎ: ಸಾಗರೋತ್ತರ ಭಾರತೀಯ ಮತದಾರರಿಂದ ಹೆಸರು ಸೇರ್ಪಡೆಗೆ ಅರ್ಜಿ
ನಮೂನೆ 7: ಹೆಸರು ಸೇರಿಸಲು/ಅಳಿಸಲು ಅರ್ಜಿ ಸಲ್ಲಿಸಲು
ನಮೂನೆ 8: ವಾಸಸ್ಥಳ ಬದಲಾವಣೆ, ತಿದ್ದುಪಡಿ ಇತ್ಯಾದಿಗೆ ಅರ್ಜಿ

Advertisement

Udayavani is now on Telegram. Click here to join our channel and stay updated with the latest news.

Next